ಬಿಜೆಪಿ 370 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕು, ರಾಷ್ಟ್ರಕ್ಕಾಗಿ ಕೆಲಸ ಮಾಡಲು ಬಯಸುತ್ತಿದ್ದೇನೆ - ಪ್ರಧಾನಿ ಮೋದಿ
ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 370 ಸ್ಥಾನಗಳಲ್ಲಿ ಗೆಲುವು ಸಾಧಿಸುವುದರೊಂದಿಗೆ ಎನ್ ಡಿಎ 400 ಕ್ಷೇತ್ರಗಳಲ್ಲಿ ಗೆಲ್ಲಬೇಕು. ಈ ಗುರಿ ತಲುಪಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ಲೋಕಸಭೆ ಚುನಾವಣಾ ಪ್ರಚಾರದ ವೇಳೆ ಕಾರ್ಯಕರ್ತರು ಸೇರಿದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಪಕ್ಷದ ನಾಯಕರಿಗೆ ಕಿವಿಮಾತು ಹೇಳಿದರು.
2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ರಾಷ್ಟ್ರವು ಈಗ ದೊಡ್ಡ ಕನಸು ಮತ್ತು ನಿರ್ಣಯಗಳನ್ನು ಮಾಡಬೇಕಾಗಿದೆ. ಮುಂದಿನ ಐದು ವರ್ಷಗಳು ನಿರ್ಣಾಯಕವಾಗಲಿವೆ. ವಿಕಸಿತ ಭಾರತದ ಕಡೆಗೆ ಒಂದು ದೊಡ್ಡ ಜಿಗಿತವನ್ನು ತೆಗೆದುಕೊಳ್ಳಬೇಕಾಗಿದೆ. ಬಿಜೆಪಿಯು ಪ್ರಬಲ ಸಂಖ್ಯೆಯಲ್ಲಿ ಅಧಿಕಾರಕ್ಕೆ ಮರಳುವುದನ್ನು ಖಚಿತಪಡಿಸಿಕೊಳ್ಳುವುದು ಮೊದಲ ಅನಿವಾರ್ಯತೆಯಾಗಿದೆ” ಎಂದು ಪ್ರಧಾನಿ ಹೇಳಿದರು.
#WATCH | Delhi: At the BJP National Convention 2024, PM Narendra Modi says, "I am not asking for the third term to enjoy power... If I had thought about my house, I would not have built houses for crores of poor people. I am living for the future of poor children. The dreams of… pic.twitter.com/dRh3VCiuQK
— ANI (@ANI) February 18, 2024
ಕೋಟಿಗಟ್ಟಲೆ ಮಹಿಳೆಯರು, ಬಡವರು, ಯುವಕರ ಕನಸು ಮೋದಿಯವರ ಕನಸಾಗಿದೆ. ನಾವು ದೇಶವನ್ನು ಮೆಗಾ ಹಗರಣಗಳು ಮತ್ತು ಭಯೋತ್ಪಾದಕ ದಾಳಿಗಳಿಂದ ಮುಕ್ತಗೊಳಿಸಿದ್ದು, ಬಡ ಮತ್ತು ಮಧ್ಯಮ ವರ್ಗದವರ ಜೀವನ ಮಟ್ಟವನ್ನು ಸುಧಾರಿಸಲು ಪ್ರಯತ್ನಿಸಿದ್ದೇವೆ. ನಾನು ಮೂರನೇ ಅವಧಿಗೆ ಅಧಿಕಾರವನ್ನು ಅನುಭವಿಸಲು ಬಯಸುತ್ತಿಲ್ಲ, ಆದರೆ ರಾಷ್ಟ್ರಕ್ಕಾಗಿ ಕೆಲಸ ಮಾಡಲು ಬಯಸುತ್ತಿದ್ದೇನೆ. ನನ್ನ ಮನೆಯ ಬಗ್ಗೆ ಯೋಚಿಸಿದ್ದರೆ ಕೋಟಿ ಕೋಟಿ ಜನರಿಗೆ ಮನೆ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ ಎಂದರು.
“ನಾನು ತನ್ನ ಸ್ವಂತ ಸಂತೋಷಕ್ಕಾಗಿ ಬದುಕುವವನಲ್ಲ, ಬಿಜೆಪಿಗೆ ಮೂರನೇ ಅವಧಿಗೆ ಪ್ರತಿಪಾದಿಸುತ್ತಿರುವುದು ರಾಜಕೀಯ ಲಾಭಕ್ಕಾಗಿ ಅಲ್ಲ, ಆದರೆ ಭಾರತದ ಲಾಭಕ್ಕಾಗಿ. ನನ್ನ ಪ್ರಯತ್ನಗಳು ಭಾರತದ ಜನತೆಗೆ ಸಮರ್ಪಿತವಾಗಿವೆ. ಭಾರತೀಯರ ಕನಸುಗಳು ನನ್ನ ಬದ್ಧತೆಗಳಾಗಿವೆ ಎಂದು ಅವರು ಹೇಳಿದರು.
ಜುಲೈ, ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಅವರನ್ನು ಭೇಟಿ ಮಾಡಲು ವಿದೇಶಗಳಿಂದ ಆಹ್ವಾನಗಳು ಬಂದಿವೆ. 10 ವರ್ಷಗಳ ನಿಷ್ಕಳಂಕ ಆಡಳಿತ ಮತ್ತು 25 ಕೋಟಿ ಜನರನ್ನು ಬಡತನದಿಂದ ಹೊರತಂದಿರುವುದು ಸಾಮಾನ್ಯ ಸಾಧನೆಯಲ್ಲ.
“ಒಮ್ಮೆ ಹಿರಿಯ ನಾಯಕರೊಬ್ಬರು ನನಗೆ ಪ್ರಧಾನಿ ಮತ್ತು ಸಿಎಂ ಆಗಿ ಸಾಕಷ್ಟು ಕೆಲಸ ಮಾಡಿದ್ದೇನೆ, ನಾನು ವಿಶ್ರಾಂತಿ ಪಡೆಯಬೇಕು ಎಂದು ಹೇಳಿದ್ದರು. ಆದರೆ ನಾನು ‘ರಾಷ್ಟ್ರನೀತಿ’ಗಾಗಿ ಕೆಲಸ ಮಾಡುತ್ತಿದ್ದೇನೆ, ‘ರಾಜನೀತಿ’ಗಾಗಿ ಅಲ್ಲ” ಎಂದು ಪ್ರಧಾನಿ ಮೋದಿ ಹೇಳಿದರು