ಕರಾವಳಿಯ ಪ್ರಮುಖ ಕ್ಷೇತ್ರ ತುಂಬೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಫೆಬ್ರವರಿ 13 ರಿಂದ 23ರ ವರೆಗೆ ನಡೆಯಲಿದೆ ಜೀರ್ಣೋದ್ಧಾರ ಬ್ರಹ್ಮ ಕಲಶ
ಬಂಟ್ವಾಳ: ಸುಮಾರು 1500 ವರ್ಷಗಳ ಇತಿಹಾಸ ಇರುವ ತುಂಬೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಪುನ: ಪ್ರತಿಷ್ಠೆ, ಅಷ್ಟ ಬಂದ, ಬ್ರಹ್ಮ ಕಲಶಾ ಅಭಿಷೇಕ ಕಾರ್ಯಕ್ರಮ ದಿನಾಂಕ 13 ರಿಂದ ದಿನಾಂಕ 23ರವರೆಗೆ ನಡೆಯಲಿದೆ ಎಂದು ಜೀರ್ಣೋದರ ಸಮಿತಿ ಹಾಗೂ ಬ್ರಹ್ಮ ಕಲಶ ಮಹೋತ್ಸವದ ಸಮಿತಿಯ ಅಧ್ಯಕ್ಷರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ತಿಳಿಸಿದ್ದಾರೆ.
ಬ್ರಹ್ಮಶ್ರೀ ಶ್ರೀ ನೀಲೇಶ್ವರ ಉಚಿತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಈ ಕಾರ್ಯಕ್ರಮಗಳು ಜರುಗಲಿದೆ. ಬಹಳಷ್ಟು ಹಳೆಯ ಇತಿಹಾಸವನ್ನು ಹೊಂದಿರುವ ತುಂಬೆ ಶ್ರೀ ಮಾಹಾಲಿಂಗೇಶ್ವರ ಕ್ಷೇತ್ರ ಈ ನಾಡಿನ ಪ್ರಮುಖ ಕ್ಷೇತ್ರವಾಗಿ ಒಂದು ಕಾಲದಲ್ಲಿ ವಿಜೃಂಭಿಸಿತು ಎಂದು ಇತಿಹಾಸದಿಂದ ತಿಳಿದು ಬರುತ್ತದೆ.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ನೇತೃತ್ವದಲ್ಲಿ ಜೀರ್ಣೋದ್ಧಾರ ಸಮಿತಿಯನ್ನು ರಚಿಸಲಾಗಿದ್ದು ದಿನಾಂಕ 13 ರಿಂದ 23ರವರೆಗೆ ವಿವಿಧ ಕಾರ್ಯಕ್ರಮಗಳು ಜರುಗಲಿದೆ. ನದಿ ತೀರದಲ್ಲಿ ದೊರೆತ ಶಿವಲಿಂಗವನ್ನು ಆರಾಧಿಸಿಕೊಂಡು ಬರುತ್ತಿರುವುದು ಈ ತುಂಬೆ ಶ್ರೀ ಮಾಹಾಲಿಂಗೇಶ್ವರ ಕ್ಷೇತ್ರದ ವಿಶೇಷತೆಯಾಗಿದೆ.