ವಿಟ್ಲ: ಕರ್ಣಾಟಕ ಬ್ಯಾಂಕ್ ಗೆ ಕಳ್ಳರು ನುಗ್ಗಿ ಚಿನ್ನ ಮತ್ತು ನಗದು ದೋಚಿದ ಘಟನೆ ವಿಟ್ಲ ಸಮೀಪದ ಅಡ್ಯನಡ್ಕ ಎಂಬಲ್ಲಿ ನಡೆದಿದೆ. ಎಷ್ಟು ಮೌಲ್ಯದ ಚಿನ್ನ ಹಾಗೂ ಹಣ ಲೂಟಿದ್ದಾರೆ ಎಂಬುದು ಇನ್ನಷ್ಟೆ ತಿಳಿಯಬೇಕಾಗಿದೆ. ಇಂದು ಮುಂಜಾನೆ ಎಂದಿನಂತೆ ಬ್ಯಾಂಕ್ ಸಿಬ್ಬಂದಿ ಬ್ಯಾಂಕ್ ತೆರೆದು ಓಳಗೆ ಹೋದಾಗ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ವಿಟ್ಲ ಠಾಣಾ ನಿರೀಕ್ಷಕರಾದ ನಾಗರಾಜ್ ಹೆಚ್.ಇ ಮತ್ತು ತಂಡ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ತನಿಖೆಗಾಗಿ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಮತ್ತು ಪೊಲೀಸ್ ಹಿರಿಯ ಅಧಿಕಾರಿಗಳು ಬರುವ ಸಾಧ್ಯತೆ ಇದೆ.
ವಿಟ್ಲ : ಅಡ್ಯನಡ್ಕ ದಲ್ಲಿ ಕರ್ಣಾಟಕ ಬ್ಯಾಂಕ್ ನ ಲಾಕರನ್ನೆ ಮುರಿದು ಕಳ್ಳತನ..!
Twitter
Facebook
LinkedIn
WhatsApp
ಘಟನೆ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಎಸ್ ಪಿ ರಿಷ್ಯಂತ್ ಮಾತನಾಡಿ ‘ನಿನ್ನೆ ದಿನ ರಾತ್ರಿ ವಿಟ್ಲ ಸಮೀಪದ ಅಡ್ಯನಡ್ಕ ಎಂಬಲ್ಲಿ ಕರ್ನಾಟಕ ಬ್ಯಾಂಕ್ನಲ್ಲಿ ಲಾಕರ್ ಮುರಿದು ಕಳ್ಳತನವಾಗಿದೆ. ಇದೀಗ ವಿಧಿವಿಧಾನ ತಜ್ಞರು ತನಿಖೆ ಮುಂದುವರೆಸಿದ್ದಾರೆ. ಬ್ಯಾಂಕಿನ ಭದ್ರತಾ ಸಿಸ್ಟಮ್ ತುಂಬಾ ದುರ್ಬಲವಾಗಿದೆ. ಲಾಕರ್ ಫೆಸಿಲಿಟಿಗಳೆಲ್ಲವೂ ತುಂಬಾ ಭದ್ರವಾಗಿರಬೇಕು. ಇದಕ್ಕೆ ಬೇಕಾದಂತಹ ಎಲ್ಲಾ ವ್ಯವಸ್ಥೆಗಳನ್ನು ಎಲ್ಲಾ ಬ್ಯಾಂಕ್ಗಳು ಮಾಡಬೇಕು. ಬ್ಯಾಂಕಿನ ಹಿಂದಿನ ಕಿಟಕಿಯ ರಾಡನ್ನು ಎಕ್ಸೆರ್ ಬ್ಲಡ್ ಮೂಲಕ ಮುರಿದು ಒಳನುಗ್ಗಿದ ದರೋಡೆಕೋರರು ಬ್ಯಾಂಕ್ನ ಲಾಕರ್ನ್ನು ಗ್ಯಾಸ್ ಕಟ್ಟರ್ ಉಪಯೋಗಿಸಿ ಲಾಕರ್ ಮುರಿದಿದ್ದಾರೆ ಎಂದು ಹೇಳಿದರು. ಒಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಚ್ಚಿ ಬೀಳುವಂತ ಘಟನೆ ನಡೆದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಅತೀ ದೊಡ್ಡ ರಾಬರಿ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.