ಆನ್‌ಲೈನ್ ನಲ್ಲೂ ಮಾರಾಟವಾಗುತ್ತಿದೆ ರೆಡಿಮೇಡ್ ಮನೆ ; ಇಲ್ಲಿದೆ ವೈರಲ್ ವಿಡಿಯೋ
ಅಮೆರಿಕದ ಟಿಕ್‌ಟಾಕರ್ ಒಬ್ಬರು ತಾವು ಆನ್‌ಲೈನ್ ಮೂಲಕ ಖರೀದಿಸಿದ ರೆಡಿಮೇಡ್ ಮನೆಯ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.
ಸ್ವಂತದ್ದೊಂದು ಮನೆ ಹೊಂದಬೇಕು ಎನ್ನುವುದು ಬಹುತೇಕರ ಕನಸು. ದಿನೇ ದಿನೆ ಹೆಚ್ಚುತ್ತಿರುವ ಬೆಲೆಯಿಂದಾಗಿ ಹಲವು ಮಂದಿಯ ಈ ಕನಸು ನನಸಾಗುವುದೇ ಇಲ್ಲ. ಇದೀಗ ಈ ಸಮಸ್ಯೆಗೆ ಅಮೆರಿಕ ಟಿಕ್‌ಟಾಕರ್ ಪರಿಹಾರ ಕಂಡುಕೊಂಡಿದ್ದಾರೆ. ಆನ್‌ಲೈನ್ ಶಾಪಿಂಗ್ ತಾಣ ಅಮೆಜಾನ್‌ನಿಂದ (Amazon) ಖರೀದಿಸಿದ ತನ್ನ ಹೊಸ ಮನೆಯನ್ನು ಪ್ರದರ್ಶಿಸುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಸದ್ಯ ಇದು ನೆಟ್ಟಿಗರ ಗಮನ ಸೆಳೆದಿದ್ದು ವೈರಲ್ ಆಗಿದೆ (Viral Video).
“ನಾನು ಅಮೆಜಾನ್‌ನಿಂದ ಮನೆ ಖರೀದಿಸಿದ್ದೇನೆ” ಎಂದು ಲಾಸ್ ಏಂಜಲೀಸ್‌ನ ಟಿಕ್‌ಟಾಕರ್ ಜೆಫ್ರಿ ಬ್ರ್ಯಾಂಟ್ ಹೇಳಿದ್ದಾರೆ. ಮಡಚಬಲ್ಲ ಈ ರೆಡಿಮೇಡ್ ಮನೆಯ ಬೆಲೆ 21 ಲಕ್ಷ ರೂ. ರೆಡಿಮೇಡ್ ಮನೆಯ ಸಂಪೂರ್ಣ ಮಾಹಿತಿಯನ್ನು ಅವರು ವಿಡಿಯೊದಲ್ಲಿ ಹಂಚಿಕೊಂಡಿದ್ದಾರೆ. ಈ ಮನೆ 16.5 X 20 ಅಡಿ ಅಳತೆಯನ್ನು ಹೊಂದಿದ್ದು ಇದರ ಮೌಲ್ಯ 26,000 ಡಾಲರ್ (21,37,416 ರೂ.) ಎಂದು ವರದಿಯೊಂದು ತಿಳಿಸಿದೆ. ಇದು ಬಾತ್‌ರೂಮ್ ಮತ್ತು ಶೌಚಾಲಯ, ಅಡುಗೆಮನೆ, ಲಿವಿಂಗ್ ಏರಿಯಾ ಮತ್ತು ಮಲಗುವ ಕೋಣೆಯನ್ನು ಹೊಂದಿದೆ. ಈ ರೆಡಿಮೇಡ್ ಮನೆಯ ಸಂಪೂರ್ಣ ಚಿತ್ರಣವನ್ನು ಅವರು ಈ ವಿಡಿಯೊದಲ್ಲಿ ನೀಡಿದ್ದಾರೆ.
Y'all better go head and get yourselves a Amazon foldable house ‼️ pic.twitter.com/m4748K9xNy
— Mesh🇧🇧 (@rahsh33m) January 30, 2024
ಈ ರೀತಿಯ ರೆಡಿಮೇಡ್ ಮನೆಯನ್ನು ಹಿಂದೆಯೂ ಹಲವು ಮಂದಿ ಖರೀದಿಸಿದ್ದರು. ಈ ರೀತಿಯ ರೆಡಿಮೇಡ್ ಮನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಹೆಚ್ಚುತ್ತಿರುವ ಬಾಡಿಗೆ ಮತ್ತು ಗಗನಮುಖಿಯಾಗುತ್ತಿರುವ ನಿರ್ಮಾಣ ಸಾಮಗ್ರಿ ದರಗಳಿಂದ ಬೇಸತ್ತ ಅನೇಕರು ಈ ಪರ್ಯಾಯ ಮಾರ್ಗದತ್ತ ಮನಸ್ಸು ಮಾಡುತ್ತಿದ್ದಾರೆ. ಆನ್‌ಲೈನ್ ಮೂಲಕ ಇಂತಹ ಸಣ್ಣ ರೆಡಿಮೇಡ್ ಮನೆಗಳ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ.
ಅನೇಕರು ಇಂತಹ ರೆಡಿಮೇಡ್ ಮನೆಗಳ ಬಗ್ಗೆ ಸಕಾರಾತ್ಮಕ ಭಾವನೆ ಹೊಂದಿದ್ದಾರೆ. ಕೈಗೆಟಕುವ ದರದಲ್ಲಿ ಚಿಕ್ಕ ರೆಡಿಮೇಡ್ ಮನೆ ದೊರೆಯುತ್ತದೆ. ಕಡಿಮೆ ಮಂದಿ ಇರುವ ಕುಟುಂಬಕ್ಕೆ ಇಂತಹ ಮನೆ ಸಾಕಾಗುತ್ತದೆ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಕೆಲವರು ಇಂತಹ ಮನೆ ಖರೀದಿಇಂದ ಹಣ ವ್ಯರ್ಥ ಎಂದು ಹೇಳಿದ್ದಾರೆ
Someone bought a "foldable" house from Amazon 😳!!
— Tom Valentino (@TomValentinoo) February 4, 2024
How would the future of homes be if you could buy them today from Amazon? pic.twitter.com/PAQGrILPIQ
ಜೆಫ್ರಿ ಬ್ರ್ಯಾಂಟ್ ಹೇಳೋದೇನು?ಆನ್‌ಲೈನ್ ಮೂಲಕ ತಾವು ರೆಡಿಮೇಡ್ ಮನೆ ಖರೀದಿರುವ ಬಗ್ಗೆ ಜೆಫ್ರಿ ಬ್ರ್ಯಾಂಟ್ ವಿವರಿಸುವುದು ಹೀಗೆ: ʼʼಯೂ ಟ್ಯೂಬರ್ ಒಬ್ಬರು ಅಮೆಜಾನ್ ರೆಡಿಮೇಡ್ ಮನೆಯನ್ನು ಅನ್‌ಬಾಕ್ಸಿಂಗ್ ಮಾಡುವುದನ್ನು ನಾನು ನೋಡಿದೆ. ಇದು ನನ್ನ ಗಮನ ಸೆಳೆಯಿತು. ಮಾತ್ರವಲ್ಲ ಬೆಲೆಯು ಕಡಿಮೆ ಎನಿಸಿತು. ಹೀಗಾಗಿ ಖರೀದಿಸಿದೆʼʼ ಎಂದು ಹೇಳಿದ್ದಾರೆ. ರೆಡಿಮೇಡ್ ಮನೆಗೆ ವಿದ್ಯುತ್ ಸಂಪರ್ಕ ಇನ್ನಷ್ಟೇ ಕಲ್ಪಿಸಬೇಕಾಗಿದೆ. ನಳ್ಳಿಗಳನ್ನೂ ಅಳವಡಿಸುವ ಕಾಮಗಾರಿ ಬಾಕಿ ಇದೆ ಎಂದು ತಿಳಿಸಿದ್ದಾರೆ. ಈ ರೆಡಿಮೇಡ್ ಮನೆಯಲ್ಲಿ ಅವರು ವಾಸಿಸುವುದಿಲ್ಲವಂತೆ. ವಸತಿ ರಹಿತರಿಗಾಗಿ ಇದನ್ನು ಬಳಸಲಾಗುತ್ತದೆ ಎಂದೂ ಅವರು ವಿವರಿಸಿದ್ದಾರೆ. ಸದ್ಯ ಅವರು ಈ ರೆಡಿಮೇಡ್ ಮನೆಯನ್ನು ಇರಿಸಲು ಅಗತ್ಯವಾದ ಸೂಕ್ತ ಜಾಗ ಖರೀದಿಗಾಗಿ ಚಿಂತನೆ ನಡೆಸುತ್ತಿದ್ದಾರೆ. ಈ ಬಗ್ಗೆ ರಿಯಲ್ ಎಸ್ಟೇಟ್ ಏಜೆಂಟ್‌ಗಳ ಜತೆ ಮಾತುಕತೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.