ಭಾನುವಾರ, ಡಿಸೆಂಬರ್ 22, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಡಿವೊರ್ಸ್ ವದಂತಿಗಳಿಗೆ ಫೋಟೋ ಹಂಚಿಕೊಂಡು ಗಾಸಿಪ್ ಮಂದಿಯ ಬಾಯಿ ಮುಚ್ಚಿಸಿದ ನಟಿ..!

Twitter
Facebook
LinkedIn
WhatsApp
ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಡಿವೊರ್ಸ್ ವದಂತಿಗಳಿಗೆ ಫೋಟೋ ಹಂಚಿಕೊಂಡು ಗಾಸಿಪ್ ಮಂದಿಯ ಬಾಯಿ ಮುಚ್ಚಿಸಿದ ನಟಿ..!

ಅಭಿಷೇಕ್​ ಬಚ್ಚನ್​ ಮತ್ತು ಐಶ್ವರ್ಯಾ ರೈ ಅವರ ಸುದೀರ್ಘ 17 ವರ್ಷಗಳ ದಾಂಪತ್ಯದಲ್ಲಿ ಬಿರುಕು ಮೂಡಿದೆಯೇ ಎಂಬ ಅನುಮಾನ ಹಲವರಿಗೆ ಇದೆ. ಆದಷ್ಟು ಬೇಗ ಈ ದಂಪತಿ ವಿಚ್ಛೇದನ ಪಡೆಯುತ್ತಾರೆ ಎಂದು ಕೆಲವರು ಸುದ್ದಿ ಹಬ್ಬಿಸಿದ್ದಾರೆ. ಇಂಥ ಸಂದರ್ಭದಲ್ಲಿ ಐಶ್ವರ್ಯಾ ರೈ ಅವರು ಹಂಚಿಕೊಂಡ ಹೊಸ ಫೋಟೋ ವೈರಲ್​ ಆಗಿದೆ.

ಒಂದಷ್ಟು ದಿನಗಳಿಂದ ನಟಿ ಐಶ್ವರ್ಯಾ ರೈ ಬಚ್ಚನ್​ (Aishwarya Rai Bachchan) ಅವರ ಸಂಸಾರದ ಬಗ್ಗೆ ಇಲ್ಲಸಲ್ಲದ ಗಾಸಿಪ್​ ಕೇಳಿಬರುತ್ತಿತ್ತು. ಪತಿ ಅಭಿಷೇಕ್​ ಬಚ್ಚನ್​ ಜೊತೆ ಐಶ್ವರ್ಯಾ ರೈ ಕಿರಿಕ್​ ಮಾಡಿಕೊಂಡಿದ್ದಾರೆ ಎಂದು ಕೆಲವರು ಗಾಳಿಸುದ್ದಿ ಹಬ್ಬಿಸಿದ್ದಾರೆ. ಆ ಸುದ್ದಿಗೆ ಪೂರಕವಾಗುವ ರೀತಿಯಲ್ಲಿ ಐಶ್ವರ್ಯಾ ರೈ ಮತ್ತು ಅಭಿಷೇಕ್​ ಬಚ್ಚನ್​ (Abhishek Bachchan) ನಡೆದುಕೊಂಡಿದ್ದು ಕೂಡ ಅಚ್ಚರಿಗೆ ಕಾರಣ ಆಗಿತ್ತು. ಹಾಗಾದರೆ ನಿಜವಾಗಿಯೂ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆಯೇ? ಶೀಘ್ರದಲ್ಲೇ ಅವರು ಡಿವೋರ್ಸ್ (Aishwarya Rai Divorce)​ ಪಡೆಯುತ್ತಾರಾ ಎಂಬಿತ್ಯಾದಿ ಪ್ರಶ್ನೆಗಳು ಮೂಡಿದ್ದವು. ಅವುಗಳಿಗೆಲ್ಲ ಉತ್ತರ ಎಂಬಂತೆ ಈಗ ಐಶ್ವರ್ಯಾ ರೈ ಅವರು ಒಂದು ಫೋಟೋ ಹಂಚಿಕೊಂಡಿದ್ದಾರೆ. ಆ ಮೂಲಕ ಅವರು ಗಾಸಿಪ್​ ಮಂದಿಯ ಬಾಯಿ ಮುಚ್ಚಿಸಿದ್ದಾರೆ.

ಇಂದು (ಫೆಬ್ರವರಿ 5) ಅಭಿಷೇಕ್​ ಬಚ್ಚನ್​ ಬರ್ತ್​ಡೇ. ಆ ಪ್ರಯುಕ್ತ ಅನೇಕರು ಅವರಿಗೆ ಶುಭಾಶಯ ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಹತ್ತಿರದ ಸಂಬಂಧಿಕರೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಅಭಿಷೇಕ್​ ಬಚ್ಚನ್​ಗೆ ಹ್ಯಾಪಿ ಬರ್ತ್​ಡೇ ಎಂದು ಶುಭ ಕೋರಿದ್ದರೂ ಕೂಡ ಐಶ್ವರ್ಯಾ ರೈ ಕಡೆಯಿಂದ ಯಾವುದೇ ವಿಶ್​ ಬಂದಿರಲಲ್ಲ. ಹಾಗಾಗಿ ಎಲ್ಲರಿಗೂ ಅನುಮಾನ ಹೆಚ್ಚಾಗಿತ್ತು. ಆದರೆ ತಡವಾಗಿದ್ದರೂ, ಸಂಜೆ ವೇಳಗೆ ಒಂದು ಸುಂದರವಾದ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಐಶ್ವರ್ಯಾ ರೈ ಅವರು ಗಂಡನಿಗೆ ಶುಭಾಶಯ ತಿಳಿಸಿದ್ದಾರೆ.

ಈ ಫೋಟೋದಲ್ಲಿ ಅಭಿಷೇಕ್​ ಬಚ್ಚನ್​, ಐಶ್ವರ್ಯಾ ರೈ ಜೊತೆ ಅವರ ಮಗಳು ಆರಾಧ್ಯಾ ಕೂಡ ಇದ್ದಾಳೆ. ಮೂವರೂ ಖುಷಿಯಿಂದ ಪೋಸ್​ ನೀಡಿದ ಈ ಫೋಟೋ ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ‘ಡಿವೋರ್ಸ್​ ಆಗುತ್ತದೆ ಅಂತ ಗಾಸಿಪ್​ ಹಬ್ಬಿಸಿದವರಿಗೆ ಈ ಫೋಟೋ ಮೂಲಕ ಐಶ್ವರ್ಯಾ ರೈ ಬಚ್ಚನ್​ ಸರಿಯಾದ ಉತ್ತರ ನೀಡಿದ್ದಾರೆ’ ಎಂದು ಫ್ಯಾನ್ಸ್​ ಕಮೆಂಟ್​ ಮಾಡುತ್ತಿದ್ದಾರೆ.

‘ನಿಮಗೆ ಹುಟ್ಟುಹಬ್ಬದ ಶುಭಾಶಯಗಳು. ಖುಷಿ, ಪ್ರೀತಿ, ಶಾಂತಿ, ನೆಮ್ಮದಿ ಮತ್ತು ಉತ್ತಮ ಆರೋಗ್ಯವನ್ನು ದೇವರ ನೀಡಲಿ. ಯಾವಾಗಲೂ ಮಿಂಚುತ್ತಿರಿ’ ಎಂದು ಪತಿಗೆ ಐಶ್ವರ್ಯಾ ರೈ ಶುಭ ಕೋರಿದ್ದಾರೆ. ಕೆಲವೇ ನಿಮಿಷಗಳಲ್ಲಿ ಈ ಫೋಟೋಗೆ ಲಕ್ಷಾಂತರ ಮಂದಿ ಮೆಚ್ಚುಗೆ ಸೂಚಿಸಿದ್ದಾರೆ. 2007ರಲ್ಲಿ ಅಭಿಷೇಕ್​ ಬಚ್ಚನ್​ ಮತ್ತು ಐಶ್ವರ್ಯಾ ರೈ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರೂ ಚಿತ್ರರಂಗದಲ್ಲಿ ಬೇಡಿಕೆಯ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಮದುವೆ ಬಳಿಕ ಐಶ್ವರ್ಯಾ ರೈ ಅವರು ಸಿನಿಮಾಗಳ ಆಯ್ಕೆಯಲ್ಲಿ ಅವಸರ ತೋರಿಸುತ್ತಿಲ್ಲ. ತೀರಾ ಅಪರೂಪಕ್ಕೆ ಒಂದೊಂದು ಸಿನಿಮಾಗಳನ್ನು ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ. ಅಭಿಷೇಕ್​ ಬಚ್ಚನ್​ ಅವರು ಸಿನಿಮಾಗಳ ಜೊತೆ ವೆಬ್​ ಸಿರೀಸ್​ಗಳ ಮೂಲಕವೂ ಮಿಂಚುತ್ತಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist