ಜಾರ್ಖಂಡ್ ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದ ನೂತನ ಸಿಎಂ ಚಂಪೈ ಸೊರೇನ್..!
Twitter
Facebook
LinkedIn
WhatsApp
ರಾಂಚಿ: ಹೇಮಂತ್ ಸೊರೇನ್ (Hemant Soren) ರಾಜೀನಾಮೆ ನಂತರ ಮುಖ್ಯಮಂತ್ರಿಯಾದ ಚಂಪೈ ಸೊರೆನ್ (Champai Soren) ಅವರು ಸೋಮವಾರ ವಿಧಾನಸಭೆಯಲ್ಲಿ (Assembly) ವಿಶ್ವಾಸ ಮತ ( Floor Test) ಗೆದ್ದರು. ಚೆಂಪೈ ನೇತೃತ್ವದ ಆಡಳಿತ ಸರ್ಕಾರದ ಪರವಾಗಿ 47 ಮತಗಳು ಚಲಾವಣೆಯಾದರೆ, ಇದರ ವಿರುದ್ಧ 29 ಮತಗಳು ಚಲಾವಣೆಯಾಗಿವೆ. ಈ ಬಹುಮತ ಪರೀಕ್ಷೆಯಲ್ಲಿ ಜಾರ್ಖಂಡ್ನ ಮಾಜಿ ಸಿಎಂ ಹೇಮಂತ್ ಸೊರೇನ್ ಕೂಡ ಭಾಗವಹಿಸಿದ್ದರು. ಹೇಮಂತ್ ಸೋರೆನ್ ಅವರಿಗೆ ವಿಧಾನಸಭೆಯಲ್ಲಿ ಹಾಜರಾಗಲು ಪಿಎಂಎಲ್‌ಎ ನ್ಯಾಯಾಲಯ ಅನುಮತಿ ನೀಡಿತ್ತು.
ಕಳೆದ ವಾರ ಹೇಮಂತ್ ಸೋರೆನ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದ ನಂತರ ಚಂಪೈ ಸೊರೇನ್ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಯಿತು. ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹೇಮಂತ್ ಸೋರೆನ್ ಅವರನ್ನು ಜನವರಿ 31 ರಂದು ಇಡಿ ಬಂಧಿಸಿತ್ತು.