Belthangadi: 42 ಅಕ್ರಮ ಸಿಮ್‌ಗಳೊಂದಿಗೆ ನಿಗೂಢ ಕೆಲಸಕ್ಕಾಗಿ ಬೆಂಗಳೂರಿಗೆ ಹೊರಟಿದ್ದ ಯುವಕರ ತಂಡ ಅರೆಸ್ಟ್..!
ಅಕ್ರಮ ಸಿಮ್‌ಗಳನ್ನು ಪಡೆದು ನಿಗೂಢ ಕೆಲಸಕ್ಕಾಗಿ ಬೆಂಗಳೂರಿಗೆ (Bengaluru) ಹೊರಟಿದ್ದ ಯುವಕರ ತಂಡವನ್ನು ಪೊಲೀಸರು (Police) ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಐವರು ಆರೋಪಿಗಳು ಸಿಮ್ ಸಮೇತ ಬಂಧನ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಪೊಲೀಸರು (Dharmasthala Police) ಕಾರ್ಯಾಚರಣೆ ನೆರಿಯ ಗ್ರಾಮದ ತೋಟತ್ತಾಡಿ ಎಂಬಲ್ಲಿ ಫೆ.1 ರಂದು ಬಂಧಿಸಿದ್ದಾರೆ.
ರಮೀಝ್(20), ಅಕ್ಬರ್ ಅಲಿ (24), ಮೊಹಮ್ಮದ್ ಮುಸ್ತಫಾ(22) ಮೊಹಮ್ಮದ್ ಸಾಧಿಕ್ (27) ಜೊತೆ 17 ವರ್ಷದ ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿದೆ
ಅಕ್ಬರ್ ಅಲಿ ದುಬೈನಲ್ಲಿ(Dubai) ಎರಡು ವರ್ಷ ಇದ್ದು ಕಳೆದ ನಾಲ್ಕು ತಿಂಗಳ ಹಿಂದೆ ಊರಿಗೆ ಬಂದಿದ್ದ. ದುಬೈನಲ್ಲಿ ಇದ್ದುಕೊಂಡೇ ಬೇರೆ ಬೇರೆಯವರ ಹೆಸರಿನಲ್ಲಿ ನಕಲಿ ದಾಖಲೆ ನೀಡಿ ಅಕ್ರಮ ಸಿಮ್ ಖರೀದಿ ಮಾಡಿಸಿದ್ದ. ವಿದೇಶದ ನಂಟಿರುವ ಕಾರಣ ಪೊಲೀಸರು ಈಗ ಆಳವಾದ ತನಿಖೆಗೆ ಇಳಿದಿದ್ದಾರೆ.
ಸಿಮ್ ಖರೀದಿ ಹೇಗೆ?
ಅಕ್ಬರ್ ಆಲಿ ಸ್ನೇಹಿತ ಮೊಹಮ್ಮದ್ ಮುಸ್ತಫಾನಿಗೆ ಸಿಮ್ ಖರೀದಿಸಲು ಸೂಚಿಸಿದ್ದ. ಮುಸ್ತಫಾ ತನ್ನ ಸ್ನೇಹಿತ ರಮೀಝ್ ಮತ್ತು ಮೊಹಮ್ಮದ್ ಸಾಧಿಕ್ ಸಿಮ್ ಸಂಗ್ರಹಿಸುವಂತೆ ಹೇಳಿದ್ದ. ಅದರಂತೆ ಇಬ್ಬರು ಎಷ್ಟು ಸಿಮ್ ಕಾರ್ಡ್ ಬೇಕು ಅಷ್ಟನ್ನು ತಮ್ಮ ಅತ್ಮೀಯರಿಂದ ಕಮಿಷನ್ ಕೊಡಿಸಿ ಸಿಮ್ ಖರೀದಿಸಿ ನಂತರ ಅನ್ನು ಮುಸ್ತಫಾನಿಗೆ ಸಿಮ್ ಕೊಡುತ್ತಿದ್ದರು.
ನಂತರ ಅಕ್ಬರ್ ಆಲಿ ಹೇಳಿದಂತೆ ಸಿಮ್ ಕಾರ್ಡ್‌ಗಳನ್ನು ಮೊಹಮ್ಮದ್ ಮುಸ್ತಫಾ ಪಡೆದುಕೊಂಡು ಬೆಂಗಳೂರು ವ್ಯಕ್ತಿಗಳಿಗೆ ಖಾಸಗಿ ಬಸ್ ಮೂಲಕ ಕಳುಹಿಸುವ ಕೆಲಸ ಮಾಡುತ್ತಿದ್ದ. ಪೊಲೀಸ್ ಪ್ರಾಥಮಿಕ ತನಿಖೆಯಲ್ಲಿ ಈ ಎಲ್ಲಾ ವಿಚಾರಗಳು ಬೆಳಕಿಗೆ ಬಂದಿದೆ.