ಸೋಮವಾರ, ಡಿಸೆಂಬರ್ 23, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಧಿಡೀರನೆ ಈರುಳ್ಳಿ ಬೆಲೆ ಕುಸಿತ ; ಕಂಗಾಲಾದ ರೈತ

Twitter
Facebook
LinkedIn
WhatsApp
ಧಿಡೀರನೆ ಈರುಳ್ಳಿ ಬೆಲೆ ಕುಸಿತ ; ಕಂಗಾಲಾದ ರೈತ

ಕೆಲ ತಿಂಗಳ ಹಿಂದೆ ಈರುಳ್ಳಿಗೆ ಉತ್ತಮ ಬೆಲೆ ಇತ್ತು. ಇದೀಗ ಈರಳ್ಳಿ ಬೆಲೆ ದಿಢೀರ್​ ಅಂತ ಕುಸಿದಿದ್ದು ರೈತನಿಗೆ ದಿಕ್ಕೇ ತೋಚದಂತಾಗಿದೆ.

ಭೀಕರ ಬರಗಾಲದ ನಡುವೆಯೂ ರೈತರು ಈರುಳ್ಳಿ ಬೆಳದಿದ್ದರು. ಉತ್ತಮ ಬೆಲೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಈಗ ಬೆಲೆ ಕುಸಿತವಾಗಿದೆ. ಹೀಗಾಗಿ ರೈತರು ಈರುಳ್ಳಿ ಮಾರದೆ ದರ ಹೆಚ್ಚಳಕ್ಕಾಗಿ ಎರಡು ದಿನಗಳಿಂದ ಕಾಯ್ದು ಕುಳಿತಿರಿದ್ದಾರೆ.

ದಾವಣಗೆರೆ ಜಿಲ್ಲೆ ರೈತರು ಸಾಕಷ್ಟು ಈರುಳ್ಳಿ ಬೆಳೆದಿದ್ದು, ಮಾರಲು ಎಪಿಎಂಸಿ ಮಾರುಕಟ್ಟೆಗೆ ಬಂದಿದ್ದಾರೆ. ಮಾರುಕಟ್ಟೆಗೆ ಒಂದೇ ದಿನ ಆರು ಸಾವಿರ ಚೀಲ ಈರುಳ್ಳಿ ಬಂದಿದೆ.

ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ ಬೆಲೆ 3-4 ರೂ. ಆಗಿದೆ. ಇದರಿಂದ ರೈತರು ಆತಂಕಗೊಂಡಿದ್ದು, ಲಾರಿ ಬಾಡಿಗೆಯಾದರು ಸಿಕ್ಕರೆ ಸಾಕು ಎನ್ನುತ್ತಿದ್ದಾರೆ. ದರ ಹೆಚ್ಚಾಗಬಹುದೆಂದು ರೈತರು ಕಳೆದ 2-3 ದಿನಗಳಿಂದ ಕಾಯ್ದು ಕುಳಿತಿದ್ದಾರೆ.

ಟಾಪ್ ಈರುಳ್ಳಿ ದರ ಪ್ರತಿ ಕ್ವಿಂಟಾಲ್​ಗೆ 1500 ರೂಪಾಯಿ ಇದೆ. ಅತ್ಯುತ್ತಮ ದತ್ತ ಈರುಳ್ಳಿ ಬೆಲೆ 1200 ರಿಂದ 1400 ರೂ. ಇದೆ. ಉತ್ತನ ದಪ್ಪ 1000 ರಿಂದ 1100 ರೂ. ಇದೆ.

ಇನ್ನು ಮಧ್ಯಮ‌ ಗಾತ್ರದ ಈರುಳ್ಳಿ 700 ರಿಂದ 800, ಸಣ್ಣ ಗಾತ್ರದ ಈರುಳ್ಳಿ 300 ರಿಂದ 400 ರೂಪಾಯಿ ಇದೆ.

ಸರ್ಕಾರ ರಪ್ತು ನಿಲ್ಲಿಸಿದ್ದರಿಂದ ಈರುಳ್ಳಿ ಬೆಲೆ ಕುಸಿದಿದೆ. ಇದರಿಂದ ಬೆಳೆಗಾರರು ಕಣ್ಣೀರು ಹಾಕುತ್ತಿದ್ದಾರೆ.

ನಿರೀಕ್ಷೆಯಂತೆ ಖರೀದಿ ಆಗದ ಹಿನ್ನೆಲೆಯಲ್ಲಿ ಬಂದಷ್ಟು ಬರಲಿ ಅಂತ ರೈತರು ಈರುಳ್ಳಿ ಮಾರಿ ಊರುಗಳತ್ತ ಹೋಗುತ್ತಿದ್ದಾರೆ.

ರಾತ್ರಿಹೊತ್ತು ಒಂಟಿಯಾಗಿ ಪ್ರಯಾಣಿಸುವ ಹೆಣ್ಣುಮಕ್ಕಳೇ ಭಯ ಬೇಡ; ಇನ್ಮುಂದೆ ಧೈರ್ಯವಾಗಿ ಪ್ರಯಾಣಿಸಬಹುದು

ಬೆಂಗಳೂರು, ಜ.30: ಮೆಜೆಸ್ಟಿಕ್ ಸೇರಿದಂತೆ ನಗರದಲ್ಲಿ ಇನ್ಮುಂದೆ ಮಹಿಳೆಯರು ಆಟೋದಲ್ಲಿ (Auto Rickshaw) ಎಷ್ಟೊತ್ತಿಗೆ ಬೇಕಾದರೂ ಧೈರ್ಯದಿಂದ ಓಡಾಡಬಹುದು. ಮೆಜೆಸ್ಟಿಕ್ ಬಸ್ ನಿಲ್ದಾಣ, ಬಿಎಂಟಿಸಿ ಬಸ್ ನಿಲ್ದಾಣ, ಮೆಟ್ರೋ ನಿಲ್ದಾಣ, ಸಂಗೊಳ್ಳಿ ರಾಯಣ್ಣ ರೈಲ್ವೇ ಸ್ಟೇಷನ್ ನಲ್ಲಿ ನಗರ ಪೊಲೀಸರು (Bengaluru Police) ಹೈ ಅಲರ್ಟ್ ಆಗಿದ್ದಾರೆ. ಕೆಲ ಆಟೋ ಚಾಲಕರು ರಾತ್ರಿ ಹೊತ್ತು ಪ್ರಯಾಣಿಕರಿಗೆ ತೊಂದ್ರೆ ಕೊಡ್ತಿರುವ ಆರೋಪ ಕೇಳಿ ಬಂದಿತ್ತು. ಸದ್ಯ ಹೆಣ್ಣು ಮಕ್ಕಳ ಸುರಕ್ಷಿತೆಗಾಗಿ ಪೊಲೀಸರು ಹೊಸ ಮಾರ್ಗ ಕಂಡು ಕೊಂಡಿದ್ದಾರೆ.

ಮಿಡ್ ನೈಟ್ ನಲ್ಲಿ ಆಟೋದಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಲೈಂಗಿಕ ಕಿರುಕುಳ,‌ ಒಡವೆ ಕಸಿಯೋದು, ಹಣ ಮತ್ತು ಮೊಬೈಲ್ ಫೋನ್ ಸೇರಿದಂತೆ ಇನ್ನಿತರ ರೀತಿಯಲ್ಲಿ ತೊಂದ್ರೆ ಕೊಡ್ತಿದ್ರು. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಪ್ರತಿಯೊಂದು ಆಟೋದಲ್ಲಿ ಒಂದು, ಎರಡು ಅಥವಾ ಮೂರು ಡಿಜಿಟ್ ನಂಬರ್ ಮೆನ್ಷನ್ ಮಾಡಲು ಸೂಚನೆ ನೀಡಿದೆ. ಇದರಿಂದ ಯಾರೋ ಕೆಲವು ಆಟೋ ಚಾಲಕರು ಮಾಡುವ ಕೃತ್ಯದಿಂದ ಎಲ್ಲರಿಗೂ ಕೆಟ್ಟ ಹೆಸರು ಬರುವುದು ತಪ್ಪುತ್ತದೆ ಎಂದು ಮೆಜೆಸ್ಟಿಕ್ ಆಟೋ ಚಾಲಕರು ತಿಳಿಸಿದ್ದಾರೆ.

ಇನ್ನೂ ಮೆಜೆಸ್ಟಿಕ್ ನ ಬಿಎಂಟಿಸಿ, ಕೆಎಸ್ಆರ್ಟಿಸಿ, ಮೆಟ್ರೋ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಗಳ ಬಳಿ ಇರುವ ಆಟೋ ಸ್ಟ್ಯಾಂಡ್ ನಲ್ಲಿರುವ ಪ್ರತಿ ಆಟೋಗೂ ಮುಂಭಾಗದಲ್ಲಿ ಸ್ಟೀಕರ್ ಅಂಟಿಸಲಾಗಿದೆ. ಆ ನಂಬರ್ ನ ಜೊತೆಗೆ ಪೋಲಿಸ್ ಇಲಾಖೆಯ ಸ್ಟೀಕರ್ ಕೂಡ ಹಾಕಲಾಗಿದೆ. ಅಲ್ಲಿ ಆಟೋ ಚಾಲಕನ ಸಂಪೂರ್ಣ ಮಾಹಿತಿ ಇರಲಿದೆ. ಆ ಆಟೋ ಮೇಲಿದ್ದ ನಂಬರ್ ನ್ನ ಪೋಲಿಸ್ ಸ್ಟೇಷನ್ ನಲ್ಲಿ ಜಸ್ಟ್ ಟೈಪ್ ಮಾಡಿದ್ರೆ ಸಾಕು ಆ ಆಟೋ ಡ್ರೈವರ್ ನ ಸಂಪೂರ್ಣ ಜಾತಕ ತೆರೆದುಕೊಳ್ಳಲಿದೆ. ಇಷ್ಟು ದಿನ ಪ್ರಯಾಣಿಕರಿಗೆ ಯಾವ ಆಟೋ ಚಾಲಕ ತೊಂದರೆ ಕೊಟ್ಟ ಅನ್ನೋದನ್ನ ಪತ್ತೆ ಹಚ್ಚಲು ಪೋಲಿಸರಿಗೆ ಕಷ್ಟ ಆಗ್ತಿತ್ತು. ಆಟೋ ನಂಬರ್ ನ್ನ ಕರೆಕ್ಟಾಗಿ ನೆನೆಪಿಟ್ಟುಕೊಳ್ಳುವಲ್ಲಿ ಪ್ರಯಾಣಿಕರು ಯಡವುತಿದ್ರು. ಇದರಿಂದ ಆಟೋ ಚಾಲಕರು ಎಸ್ಕೇಪ್ ಆಗ್ತಿದ್ರು. ಆದರೆ ಈಗ ಸ್ಟೀಕರ್ ನಲ್ಲಿ 2-3 ಡಿಜಿಟ್ ನಂಬರ್ ಇರೋದರಿಂದ ನೆನಪಿಟ್ಟುಕೊಳ್ಳೋದು ಕೂಡ ತುಂಬಾ ಸುಲಭ. ಇದರಿಂದ ಮಹಿಳಾ ಪ್ರಯಾಣಿಕರು ಕೂಡ ಫುಲ್ ಖುಷ್ ಆಗಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist