ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ; 33 ಡಿವೈಎಸ್ಪಿಗಳು ಸೇರಿದಂತೆ 132 ಇನ್ಸ್ಪೆಕ್ಟರ್ಗಳ ವರ್ಗಾವಣೆ..!
ಬೆಂಗಳೂರು, ಜ.30: ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ (Karnataka Police Department) ಭಾರೀ ವರ್ಗಾವಣೆ ಮಾಡಿದ್ದು, ಓರ್ವ DySP ವರ್ಗಾವಣೆ ರದ್ದು ಮಾಡಿ 33 ಡಿವೈಎಸ್ಪಿಗಳು, 132 ಇನ್ಸ್ ಪೆಕ್ಟರ್ಗಳನ್ನು ವರ್ಗಾವಣೆ ಮಾಡಿದೆ. ಜೊತೆಗೆ ಹೊಸದಾಗಿ ಸೃಷ್ಟಿಯಾದ ಹುದ್ದೆಗಳಿಗೂ ನೇಮಕ ಮಾಡಿ ಸರ್ಕಾರ (Karnataka Government) ಆದೇಶ ಹೊರಡಿಸಿದೆ.
ಯು.ಡಿ.ಕೃಷ್ಣಕುಮಾರ್-ಡಿವೈಎಸ್ಪಿ, ಬಿಡಿಎ, ಬೆಂಗಳೂರು. ಟಿ.ಎಂ.ಶಿವಕುಮಾರ್-ಎಸಿಪಿ, ಮಡಿವಾಳ ಉಪವಿಭಾಗ. ಹೆಚ್.ಬಿ.ರಮೇಶ್ ಕುಮಾರ್-ACP, ವಿವಿ ಪುರಂ ಉಪವಿಭಾಗ. ಎಂ.ಎನ್.ನಾಗರಾಜ್-ಎಸಿಪಿ, ಸಿಸಿಬಿ ಬೆಂಗಳೂರು. ಅನುಷಾರಾಣಿ-ACP, ಡಿಸಿಆರ್ಇ, ಮೈಸೂರು ಸೇರಿದಂತೆ ಒಟ್ಟು 33 DySPಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಸಂಪಂಗಿರಾಮನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರವಿಕಿರಣ್, ರಾಮನಗರ ಕುಂಬಳಗೋಡು ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್ ಜಿ ಹೂಗಾರ್. ಕಾಟನ್ಪೇಟೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ನರೇಂದ್ರ ಬಾಬು, ಸಿಸಿಬಿ ಬೆಂಗಳೂರು ಇನ್ಸ್ಪೆಕ್ಟರ್ ಕೆ.ಲಕ್ಷ್ಮೀ ನಾರಾಯಣ್, ಹಲಸೂರು ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸಂತೋಷ್ ಕೆ, ಜಯನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ದೀಪಕ್ ಆರ್ ಸೇರಿ ಒಟ್ಟು 132 ಇನ್ಸ್ಪೆಕ್ಟರ್ಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಬಾವಿಗೆ ಜಿಗಿದ ತಂಗಿ ಕಾಪಾಡಲು ತಾನೂ ಬಾವಿಗೆ ಹಾರಿದ; ಅಣ್ಣ-ತಂಗಿ ಶವ ಕಂಡ ಪೋಷಕರ ಆಕ್ರಂದನ
ಕಲಬುರಗಿ, ಜ.30: ಕಾಲೇಜಿಗೆ ಹೋಗು ಎಂದು ಅಣ್ಣ ಬೈದು ಬುದ್ದಿ ಹೇಳಿದ್ದಕ್ಕೆ ಮನ ನೊಂದ ತಂಗಿ ಓಡಿ ಹೋಗಿ ಬಾವಿಗೆ ಜಿಗಿದಿದ್ದು ತಂಗಿ ಕಾಪಾಡಲು ಅಣ್ಣ ಕೂಡ ಬಾವಿಗೆ ಹಾರಿ ಪ್ರಾಣ (Death) ಕಳೆದುಕೊಂಡ ಅಮಾನವೀಯ ಘಟನೆ ಕಲಬುರಗಿಯಲ್ಲಿ ನಡೆದಿದೆ. ಜಿಲ್ಲೆಯ ಚಿಂಚೋಳಿ ತಾಲೂಕಿನ ಪಟಪಳ್ಳಿ ಗ್ರಾಮದಲ್ಲಿ ಬಾವಿಗೆ ಬಿದ್ದು ಅಣ್ಣ, ತಂಗಿ ಇಬ್ಬರೂ ಮೃತಪಟ್ಟಿದ್ದಾರೆ. ತಂಗಿ ನಂದಿನಿ(18), ಅಣ್ಣ ಸಂದೀಪ್(21) ಮೃತ ದುರ್ದೈವಿಗಳು.
ನಂದಿನಿ ಕಾಲೇಜಿಗೆ ಹೋಗಲಿಲ್ಲ ಎಂದು ಕೋಪಗೊಂಡಿದ್ದ ಸಂದೀಪ್ ಕಾಲೇಜಿಗೆ ಹೋಗು ಎಂದು ಬೈದು ಬುದ್ದಿ ಹೇಳಿದ್ದ. ಇಷ್ಟಕ್ಕೇ ನೊಂದಿಕೊಂಡ ನಂದಿನಿ ಮನೆ ಬಳಿಯಿದ್ದ ಬಾವಿಗೆ ಹಾರಿದ್ದಾಳೆ. ತಂಗಿ ಬಾವಿಗೆ ಜಿಗಿದಿದ್ದು ತಿಳಿಯುತ್ತಿದ್ದಂತೆ ತಂಗಿ ಕಾಪಾಡಲು ಸಂದೀಪ್ ಕೂಡ ಬಾವಿಗೆ ಹಾರಿದ್ದಾನೆ. ಈ ವೇಳೆ ಇಬ್ಬರೂ ನೀರಿನಲ್ಲಿ ಮುಳುಗಿ ಪ್ರಾಣಬಿಟ್ಟಿದ್ದಾರೆ. ಬಾವಿಯ ದಡದಲ್ಲಿ ನಂದಿನಿ ತಲೆಗೆ ಹೂವಿನ ಗೊಂಚಲು ಮುಡಿದುಕೊಂಡdನ್ನು ಗಮನಿಸಿದ ಹೆತ್ತವರು ಅನುಮಾನಗೊಂಡು ಕಾರ್ಯಾಚರಣೆ ನಡೆಸಿದ ನಂತರ ಬಾವಿಯಲ್ಲಿ ಅಣ್ಣ ತಂಗಿಯ ಶವ ಪತ್ತೆಯಾಗಿದೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.