ಹರಿಯಾಣ:ಮದುವೆಗೆಂದು ಕರೆದೊಯ್ದು ಉನ್ನತ ಅಧಿಕಾರಿಯ ಪುತ್ರನ ಕೊಲೆಗೈದ ಸ್ನೇಹಿತರು!
ಹರಿಯಾಣ: ದೆಹಲಿಯ ಖ್ಯಾತ ಎಸಿಪಿ ಪುತ್ರನನ್ನು ಮದುವೆಗೆಂದು (wedding) ಕೆರದುಕೊಂಡು ಹೋಗಿ ಆತನ ಸ್ನೇಹಿತರೇ (Friends) ಕೊಲೆ ಮಾಡಿರುವ ಘಟನೆ ಸೋನೆಪತ್‌ನಲ್ಲಿ (Sonepat) ನಡೆದಿದೆ.
ಲಕ್ಷ್ಯ ಚೌಹಾಣ್ (24) ಮೃತ ವ್ಯಕ್ತಿ. ದೆಹಲಿಯ ಸಹಾಯಕ ಪೊಲೀಸ್ ಆಯುಕ್ತ ಯಶ್‌ಪಾಲ್ ಸಿಂಗ್ (Assistant Commissioner of Police) ಅವರ ಪುತ್ರನಾದ ಚೌಹಾಣ್ ತೀಸ್ ಹಜಾರಿ ನ್ಯಾಯಾಲಯದ ವಕೀಲರಾಗಿದ್ದರು. ಲಕ್ಷ್ಯ ಸ್ನೇಹಿತರಾದ, ವಿಕಾಸ್ ಭಾರದ್ವಾಜ್ ಮತ್ತು ಸಹಚರ ಅಭಿಷೇಕ್ ಕಾಲುವೆಗೆ ತಳ್ಳಿ ಕೊಲೆ ಮಾಡಿ ಪರಾರಿಯಾಗಿದ್ದರು.
ಸೋಮವಾರದಂದು ಲಕ್ಷ್ಯ ಅವರು ತಮ್ಮ ಸ್ನೇಹಿತರೊಂದಿಗೆ ಸೋನೆಪತ್‌ನಲ್ಲಿ ಮದುವೆಗೆಂದು ಅವರ ಸ್ನೇಹಿತರ ಜೊತೆ ಹೋಗಿದ್ದರು. ಆದರೆ ಅವರು ಮನೆಗೆ ಬಾರದ ಕಾರಣ ತಂದೆ ಯಶ್‌ಪಾಲ್ ಸಿಂಗ್ ಅವರು ಮಗ ಕಾಣೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದಾರೆ. ನಂತರ ಪೊಲೀಸರು ದೂರು ದಾಖಲಿಸಿಕೊಂಡು ಶೋಧ ಕಾರ್ಯ ನಡೆಸಿದಾಗ ಚೌಹನ್ ಅವರ ಸ್ನೇಹಿತರೇ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಕೊಲೆಗೆ ಕಾರಣವೇನು..?: ಚೌಹಣ್ ಅವರು ಭಾರದ್ವಾಜ್ ಬಳಿ ಸಾಲ ಪಡೆದಿದ್ದು, ಹಣವನ್ನು ಮರುಪಾವತಿಸಿರಲಿಲ್ಲ. ಇದನ್ನು ಭಾರದ್ವಾಜ್, ಅಭಿಷೇಕ್ ಬಳಿ ಹೇಳಿದ್ದಾನೆ. ಹೀಗಾಗಿ ಇಬ್ಬರು ಸೇರಿ ಚೌಹಣ್ ಕೊಲೆಗೆ ಸಂಚು ರೂಪಿಸಿ ಮದುವೆಗೆ ಆಹ್ವಾನಿಸಿ ಕೆರದುಕೊಂಡು ಹೋಗಿದ್ದಾರೆ. ಮದುವೆ ಮುಗಿದ ನಂತರ ಮೂವರು ವಾಪಸ್ ಆಗುವಾಗ ಮೂತ್ರವಿಸರ್ಜನೆಗೆಂದು ಕಾಲುವೆಯತ್ತ ಕರೆದೊಯ್ದಿದ್ದಾರೆ. ಇದೇ ಸಮಯವನ್ನು ಉಪಯೋಗಿಸಿಕೊಂಡ ಇಬ್ಬರು ಚೌಹಾಣ್‌ನನ್ನು ಕಾಲುವೆಗೆ ತಳ್ಳಿದ್ದಾರೆ. ಇತ್ತ ಕೃತ್ಯ ಎಸಗಿ ಭಾರದ್ವಾಜ್ ಮತ್ತು ಅಭಿಷೇಕ್ ಘಟನಾ ಸ್ಥಳದಿಂದ ಕಾರಿನಲ್ಲಿ ಪರಾರಿಯಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಅಭೀಷೆಕ್‌ನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಪ್ರಕರಣದ ಕುರಿತು ಬಾಯಿಬಿಟ್ಟಿದ್ದಾನೆ. ಇನ್ನು ಪರಾರಿಯಾಗಿರುವ ಭಾರದ್ವಾಜ್‌ಗಾಗಿ ಪೊಲೀಸರು ತೀವ್ರ ಹುಟುಕಾಟ ನಡೆಸುತ್ತಿದ್ದಾರೆ.
ಮೃತದೇಹ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್ – ಸಲಿಂಗಕಾಮಕ್ಕೆ ಬಾಲಕ ಬಲಿ
ರಾಮನಗರ: ಇಲ್ಲಿನ ಜಿಲ್ಲಾ ಕ್ರೀಡಾಂಗಣದ ಹಿಂಭಾಗದ ರೈಲ್ವೇ ಹಳಿ ಪಕ್ಕದಲ್ಲಿ ಅನುಮಾನಾಸ್ಪದವಾಗಿ ಬಾಲಕನ ಶವ ಪತ್ತೆಯಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಯುವಕನೊಬ್ಬನ ಸಲಿಂಗಕಾಮಕ್ಕೆ ಬಾಲಕ ಬಲಿಯಾಗಿರುವುದು ಪೊಲೀಸರ (Police) ತನಿಖೆ ವೇಳೆ ಬಯಲಾಗಿದೆ.
ಶುಕ್ರವಾರ 6 ವರ್ಷದ ಬಾಲಕನ ಶವ ಪತ್ತೆಯಾಗಿದೆ ಎಂದು ಯುವಕನೊಬ್ಬ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದ. ಇದೀಗ ಮಾಹಿತಿ ನೀಡಿದ ಯುವಕನೇ ಕೊಲೆಗಾರ ಎಂಬುದು ತಿಳಿದು ಬಂದಿದೆ. ಬಸ್ ನಿಲ್ದಾಣದ ಬಳಿ ಇದ್ದ ಬಾಲಕನನ್ನು ಬಿಸ್ಕೇಟ್ ನೀಡಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಬಂದು ದೌರ್ಜನ್ಯ ಎಸಗಿರುವುದಾಗಿ ಯುವಕ ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ.
ಇನ್ನೂ ಬಾಲಕನ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿ ಯುವಕ ಹಿಂದೆಯೂ ಇದೇ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಿದ್ದನಾ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.
ಜಿಲ್ಲಾ ಕ್ರೀಡಾಂಗಣದ ಹಿಂಭಾಗದ ರೈಲ್ವೇ ಹಳಿ ಪಕ್ಕದಲ್ಲಿ ಬಾಲಕನ ಶವ ಜ.26 ರಂದು ಪತ್ತೆಯಾಗಿತ್ತು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕ ಬಳಿಕ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಇನ್ನೂ ಬಾಲಕನ ಶವದ ಮೇಲೆ ಸಿಗರೇಟಿನಿಂದ ಸುಟ್ಟ ಗುರುತುಗಳು ಪತ್ತೆಯಾಗಿತ್ತು. ಬೇರೆಡೆ ಕೊಲೆಗೈದು ಶವವನ್ನು ಎಸೆದು ಹೋದ ಶಂಕೆ ವ್ಯಕ್ತವಾಗಿತ್ತು. ಈ ಸಂಬಂಧ ರಾಮನಗರ (Ramanagara) ಟೌನ್ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.