ಸೋಮವಾರ, ಡಿಸೆಂಬರ್ 23, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಮಂಗಳೂರು: ಗಣರಾಜ್ಯೋತ್ಸವ ಮುಗಿಸಿ ಮನೆಗೆ ತೆರಳುವಾಗ ಕುಸಿದು ಬಿದ್ದು ವ್ಯಕ್ತಿ ಸಾವು

Twitter
Facebook
LinkedIn
WhatsApp
ಮಂಗಳೂರು: ಗಣರಾಜ್ಯೋತ್ಸವ ಮುಗಿಸಿ ಮನೆಗೆ ತೆರಳುವಾಗ ಕುಸಿದು ಬಿದ್ದು ವ್ಯಕ್ತಿ ಸಾವು

ಮಂಗಳೂರು(ಜ.27):  ಗಣರಾಜ್ಯೋತ್ಸವ ಕಾರ್ಯಕ್ರಮದ ಧ್ವಜಹಾರಿಸಿದ  ವ್ಯಕ್ತಿಯೊಬ್ಬರು ಮನೆಗೆ ತೆರಳಿದಾಗ ಕುಸಿದು ಬಿದ್ದು ಸಾವಿಗೀಡಾದ ಘಟನೆ ಶುಕ್ರವಾರ ನಡೆದಿದೆ. 

ನಗರದ ಬಿಜೈ ನ್ಯೂ ರೋಡ್‌ನಲ್ಲಿರುವ ಫೆಲಿಸಿಟಿ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ವತಿಯಿಂದ ಗಣರಾಜ್ಯೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಬೆಳಗ್ಗೆ 7 ಗಂಟೆಗೆ ಅಪಾರ್ಟ್‌ಮೆಂಟ್ ಹಿರಿಯ ನಾಗರಿಕ, ನಿವೃತ್ತ ಸರ್ಕಾರಿ ಅಬ್ದುಲ್ ಸಮದ್(80) ಧ್ವಜ ಹಾರಿಸಿ, ಭಾಷಣ ಮಾಡಿ ಮನೆಗೆ ತೆರಳಿದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಅಸುನೀಗಿದ್ದಾರೆ.

ಮಂಗಳೂರು: ಗಡಿನಾಡಿನ ಭತ್ತ ತಳಿ ಸಂರಕ್ಷಕ ಸತ್ಯನಾರಾಯಣ ಬೆಳೇರಿ ಅರಸಿ ಬಂದ ಪದ್ಮಶ್ರೀ ಪ್ರಶಸ್ತಿ

ಮಂಗಳೂರು(ಜ.27):  ಗಡಿನಾಡು ಕಾಸರಗೋಡು ಜಿಲ್ಲೆ ಕಿನ್ನಿಂಗಾರು ಬೇಳೇರಿಯ ಸತ್ಯನಾರಾಯಣ ಅವರು ಭತ್ತ ಬೆಳೆಯುವಲ್ಲಿ ಮಾಡಿದ ಸಾಧನೆಗೆ ಈ ಬಾರಿಯ ಪ್ರದ್ಮಶ್ರೀ ಪ್ರಶಸ್ತಿ ದೊರಕಿದೆ. ದೇಶ ವಿದೇಶಗಳ ಸುಮಾರು 650 ತಳಿಗಳ ಭತ್ತವನ್ನು ಸಂಗ್ರಹಿಸಿ ಇವರು ಬೆಳೆಯುತ್ತಿದ್ದು, ತಳಿ ಸಂರಕ್ಷಣೆಗಾಗಿ ಭತ್ತವನ್ನು ಬೆಳೆಯುತ್ತಿದ್ದಾರೆ. ಸ್ವಲ್ಪ ಸ್ವಲ್ಪವೇ ಬೆಳೆದು ಸಂಗ್ರಹಿಸುತ್ತಿದ್ದಾರೆ. ಕೇಳಿ ಬರುವ ಆಸಕ್ತರಿಗೆ ನೀಡುತ್ತಿದ್ದಾರೆ.

ಮೂಲತಃ ಕೃಷಿಕರೇ ಆದ ಇವರು ಪತ್ರಿಕೆಯಲ್ಲಿ ಒಮ್ಮೆ ಕರ್ನಾಟಕದ ಪೂಕವೊಕ ಎಂದೇ ಪ್ರಸಿದ್ಧರಾದ ಚೇರ್ಕಾಡಿ ರಾಮಚಂದ್ರ ರಾಯರು ಬೆಳೆಯುವ ರಾಜಕಾಯಮೆ ಭತ್ತದ ತಳಿ ಬಗ್ಗೆ ಲೇಖನ ನೋಡುತ್ತಾರೆ. ಅವರಿಗೆ ಪತ್ರ ಬರೆದು ಒಂದು ಹಿಡಿ ಬೀಜ ಸಂಗ್ರಹಿಸಿ ತಾವೂ ಬೆಳೆಯಲು ಪ್ರಾರಂಭಿಸಿದರು. ಅಲ್ಲಿಂದ ಆರಂಭಗೊಂಡ ಭತ್ತದ ಮೇಲಿನ ಪ್ರೀತಿ ಇವರಲ್ಲಿ ಇನ್ನೂ ಬತ್ತಿಲ್ಲ. ಚಿಕ್ಕ ಚಿಕ್ಕ ಗ್ರೊಬ್ಯಾಗ್‌ ಗಳಲ್ಲಿ ಬೆಳೆದು ಕಾಪಿಡುತ್ತಿದ್ದಾರೆ. ಶಿವಮೊಗ್ಗ, ದಾವಣಗೆರೆ, ದಕ್ಷಿಣ ಕನ್ನಡ, ಮೈಸೂರು, ಕೇರಳ, ತಮಿಳು ನಾಡಿಗೆ ತೆರಳಿ ಅಲ್ಲಿಯ ಭತ್ತದ ತಳಿ ಸಂಗ್ರಹಿಸಿ ನೆಟ್ಟಿದ್ದಾರೆ.

ಸಕ್ಕರೆ ಕಾಯಿಲೆಯಿಂದ ಕ್ಯಾನ್ಸರ್‌ ತಡೆಯುವ ವರೆಗಿನ ಎಲ್ಲ ಔಷಧೀಯ ಗುಣಗಳುಳ್ಳ ಹಲವು ಭತ್ತದ ತಳಿಗಳು ಇವರ ಸಂಗ್ರಹದಲ್ಲಿದೆ. ಹಸಿರು, ನೇರಳೆ, ಕಪ್ಪು ಹೀಗೆ ವಿವಿಧ ಬಣ್ಣಗಳ ದೇಶೀಯ ಹಾಗೂ ವಿದೇಶಿ ತಳಿಯ ಭತ್ತದ ತಳಿಗಳು ಇವರಲ್ಲಿವೆ.

ಹೇಗೆ ಬೆಳೆದರು? : 

ಸಣ್ಣ ಸಣ್ಣ ಕಾಗದದ ಲೋಟಗಳಲ್ಲಿ ಮಣ್ಣು, ಗೊಬ್ಬರವನ್ನು ತುಂಬಿ ಅದರಲ್ಲಿ ಭತ್ತ ಬಿತ್ತುತ್ತಾರೆ. ಮೊಳಕೆಯೊಡೆದ 10 ದಿನಗಳ ಬಳಿಕ ಅದನ್ನು ಗ್ರೋಬ್ಯಾಗ್‌ಗೆ ವರ್ಗಾಯಿಸಿ ಭತ್ತ ಬೆಳೆಯುತ್ತಿದ್ದಾರೆ. ಬಳಿಕ ಬಂದ ಭತ್ತದ ತೆನೆಯನ್ನು ಕಟಾವು ಮಾಡಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಸಂರಕ್ಷಿಸಿ ಇಡುತ್ತಾರೆ. ಬೇಕಾದವರಿಗೆ ಒಂದು ಹಿಡಿಯಟ್ಟು ಕೊಡುತ್ತಾರೆ. ಹೀಗೆ ಕಳೆದ 13 ವರ್ಷಗಳಿಂದ ಸಾಗಿದೆ ಸತ್ಯನಾರಾಯಣ ಕಾಯಕ. ಅವರ ಬರ ನಿರೋಧಕ, ನೆರೆ ನಿರೋಧಕ ತಳಿ ಸಹಿತ ಭತ್ತದ ಸಂರಕ್ಷಣೆ ಯಶೋಗಾಥೆ. ಸಾಹಿತ್ಯ ಕೃಷಿಯಲ್ಲೂ ತೊಡಗಿಸಿಕೊಂಡಿದ್ದು, ಹಲವು ಲೇಖನಗಳನ್ನು ಬರೆದಿದ್ದಾರೆ. ಜೇನು ಸಾಕಣೆ ಮತ್ತು ಗಿಡಗಳ ಕಸಿಯಲ್ಲೂ ಇವರು ಎತ್ತಿದ ಕೈ.

ಪ್ರಶಸ್ತಿಗಳು: 

ಇವರ ಸಾಧನೆಯನ್ನು ಗುರುತಿಸಿ ಸ್ಥಳೀಯವಾಗಿ ಹಲವು ಪ್ರಶಸ್ತಿ ಸಂದಿವೆ. ದೆಹಲಿಯ ರಾಷ್ಟ್ರೀಯ ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದಿಂದ ಪ್ಲಾಂಟ್‌ ಜಿನೋಮ್‌ ಸೇವಿಯರ್‌ ಫಾರ್ಮರ್‌ ಪ್ರಶಸ್ತಿಯನ್ನು ಸೇರಿದಂತೆ ಹತ್ತು ಹಲವು ಪ್ರಶಸ್ತಿ ಇವರ ಮುಡಿಗೇರಿದ್ದು, ಇದೀಗ ಕೇಂದ್ರ ಸರ್ಕಾರ ನೀಡುವ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist