ಧ್ವಜಾರೋಹಣ ಮಾಡುವಾಗ ವಿದ್ಯುತ್ ತಂತಿ ತಗುಲಿ ಇಬ್ಬರು ಯುವಕರು ಸಾವು
ಮುಲುಗು (ತೆಲಂಗಾಣ), ಜನವರಿ 26: ಗಣರಾಜ್ಯೋತ್ಸವದ ವೇಳೆ ಭಾರೀ ದುರಂತ ಸಂಭವಿಸಿದೆ. ಧ್ವಜಾರೋಹಣ ಮಾಡುವಾಗ ವಿದ್ಯುತ್ ತಂತಿಗಳು ಧ್ವಜದ ಪೈಪ್‌ಗೆ ತಗುಲಿ ಇಬ್ಬರು ಯುವಕರು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಯುವಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿದ ಕೂಡಲೇ ಸಚಿವೆ ಸೀತಕ್ಕ ಪರಿಹಾರ ಕಾರ್ಯದಲ್ಲಿ ತೊಡಗಿದರು. ಮುಲುಗು ಜಿಲ್ಲಾ ಕೇಂದ್ರದ ದಲಿತವಾಡದಲ್ಲಿ ಈ ದಾರುಣ ಘಟನೆ ನಡೆದಿದೆ.
ಧ್ವಜ ಅನಾವರಣಕ್ಕಾಗಿ ಸ್ಥಳೀಯ ಯುವಕರು ಕಬ್ಬಿಣದ ಕಂಬದಿಂದ ಧ್ವಜವನ್ನು ಹಾರಿಸಲು ತಯಾರಿ ನಡೆಸುತ್ತಿದ್ದರು. ಆ ವೇಳೇ ಆಕಸ್ಮಿಕವಾಗಿ ವಿದ್ಯುತ್ ತಂತಿ ಕಬ್ಬಿಣದ ಪೈಪ್‌ಗೆ ತಾಗಿದೆ. ವಿದ್ಯುತ್ ತಂತಿಗಳು ಧ್ವಜಕ್ಕೆ ತಗುಲಿದ ಪರಿಣಾಮ ವಿಜಯ್, ಚಕ್ರಿ ಮತ್ತು ಅಜಿತ್ ಸಾವನ್ನಪ್ಪಿದ್ದಾರೆ. ತಕ್ಷಣ ಅವರನ್ನು ಮುಲುಗು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಯಾವುದೇ ಫಲ ಸಿಗಲಿಲ್ಲ.
ಚಿಕಿತ್ಸೆ ಫಲಕಾರಿಯಾಗದೆ ಅಜಿತ್ ಮತ್ತು ವಿಜಯ್ ಸಾವನ್ನಪ್ಪಿದ್ದಾರೆ. ಮತ್ತೊಬ್ಬನ ಸ್ಥಿತಿ ಚಿಂತಾಜನಕವಾಗಿದೆ. ವಿಷಯ ತಿಳಿದ ತಕ್ಷಣ ಸಚಿವೆ ಸೀತಕ್ಕ ಆತಂಕ ವ್ಯಕ್ತಪಡಿಸಿದ್ದಾರೆ. ಅಗತ್ಯವಿದ್ದರೆ, ಉತ್ತಮ ಚಿಕಿತ್ಸೆಗಾಗಿ ಗಾಯಳುವನ್ನು ಹೈದರಾಬಾದ್‌ಗೆ ಕರೆದೊಯ್ಯಲು ಸೂಚಿಸಲಾಗಿದೆ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಚೇರಿಯಲ್ಲಿ ಪೌರ ಕಾರ್ಮಿಕ ಮಹಿಳೆಯಿಂದ ಧ್ವಜಾರೋಹಣ
ಹುಬ್ಬಳ್ಳಿ, ಜನವರಿ 26: ದೇಶದಲ್ಲಿ 75ನೇ ಗಣರಾಜ್ಯೋತ್ಸವ (Republic Day) ಆಚರಿಸಲಾಗುತ್ತಿದೆ. ಕೇಂದ್ರ ಸಂಸದೀಯ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ (Pralhad Joshi) ಅವರು 75ನೇ ಗಣರಾಜ್ಯೋತ್ಸವದಂದು ಸ್ವಕ್ಷೇತ್ರ ಹುಬ್ಬಳ್ಳಿಯ ತಮ್ಮ ಕಚೇರಿಯಲ್ಲಿ ಮಹಿಳಾ ಪೌರ ಕಾರ್ಮಿಕರೊಬ್ಬರಿಂದ ಧ್ವಜಾರೋಹಣ ನೆರವೇರಿಸಿ ಮಾದರಿಯಾಗಿದ್ದಾರೆ. ಇಂದು (ಜ.26) ಹುಬ್ಬಳ್ಳಿಯ (Hubballi) ತಮ್ಮ ಕಚೇರಿಯಲ್ಲಿ ಮಹಾನಗರ ಪಾಲಿಕೆ ಸ್ವಚ್ಛತಾ ಸಿಬ್ಬಂದಿ ಮಾರೆವ್ವ ಸುರಪುರ ಅವರಿಂದ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಲಾಗಿದೆ.
ಸಮಾರಂಭದಲ್ಲಿ ಶಾಸಕ ಮಹೇಶ ತೆಂಗಿನಕಾಯಿ ಸೇರಿದಂತೆ ಪ್ರಮುಖರಿದ್ದರು. ಓರ್ವ ಪೌರ ಕಾರ್ಮಿಕ ಮಹಿಳೆಯಿಂದ ಧ್ವಜಾರೋಹಣ ನೆರವೇರಿಸಿ ಆದರ್ಶ ಮೆರೆದಿದ್ದಾರೆ. ಧ್ವಜಾರೋಹಣದ ನಂತರ ಮಾರೆವ್ವ ಸುರಪುರ ಸೇರಿದಂತೆ ಪಾಲಿಕೆಯ ಪೌರ ಕಾರ್ಮಿಕರನ್ನು ಸನ್ಮಾನಿಸಿ, ಗೌರವಿಸಲಾಗಿದೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.
"ಭಾರತ್ ಮಾತಾಕೀ ಜೈ" 🇮🇳
— Pralhad Joshi (@JoshiPralhad) January 26, 2024
ಭಾರತದ 75ನೇ ಗಣರಾಜ್ಯೋತ್ಸವದ ಅಂಗವಾಗಿ ಇಂದು ಹುಬ್ಬಳ್ಳಿಯ ಕಚೇರಿಯಲ್ಲಿ ಸ್ವಚ್ಛತಾ ಸಿಬ್ಬಂದಿಯಾದ ಮಾರೆವ್ವ ಸುರಪುರ ಅವರಿಂದ ದ್ವಜರೋಹಣವನ್ನು ನೆರವೇರಿಸಲಾಯಿತು ಹಾಗೂ ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪೌರಕಾರ್ಮಿಕರು ನಗರದ ಸ್ವಚ್ಛತೆಗಾಗಿ ಶ್ರಮಿಸುವ ಶ್ರಮಜೀವಿಗಳು, ಅಂತವರನ್ನು ಗುರುತಿಸಿ… pic.twitter.com/fIGJI55Eh5
ಪೌರ ಕಾರ್ಮಿಕರು ಸದಾ ನಗರದ ಸ್ವಚ್ಛತೆಗಾಗಿ ಶ್ರಮಿಸುವ ಶ್ರಮಜೀವಿಗಳಾಗಿದ್ದಾರೆ. ಅಂಥವರನ್ನು ಗುರುತಿಸಿ, ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟ್ವೀಟ್ ಮಾಡಿದ್ದಾರೆ.