ಕೋವಿಡ್ ದಿನಗಳಲ್ಲಿ ವೈರಲ್ ಆಗಿದ್ದ ಶಶಿರೇಖಾ ಈಗ ಹೀರೋಹಿನ್..!
ಕೊರೋನಾ ಕಾಲದಲ್ಲಿ ಎಲ್ಲರ ಭಯದಲ್ಲಿ ಬದುಕುತ್ತಿದ್ದರೆ, ಈ ಶಶಿರೇಖಾ ಮಾತ್ರ ಡೋಲೋ 650 ಮಾತ್ರೆ, ಬಿಸಿ ಬಿಸಿ ರಾಗಿ ಮುದ್ದೆ ಎನ್ನುವ ಡೈಲಾಗ್ ಹೇಳುವ ಮೂಲಕ ಸಖತ್ ಫೇಮಸ್ ಆಗಿದ್ದರು. ಕೊರೋನಾಗೆ ಔಷಧಿಯೇ ಇಲ್ಲವೆಂದು ವಿಜ್ಞಾನಿಗಳು ಗೊಣಗುತ್ತಿದ್ದರೆ, ಶಶಿರೇಖಾ ತನ್ನದೇ ಆದ ರೀತಿಯಲ್ಲಿ ಮಾತನಾಡಿ ಜನಪ್ರಿಯರಾಗಿದ್ದರು.
ಆ ಶಶಿರೇಖಾ (Shashirekha) ಅವರೇ ಇಂದು ನಾಯಕಿಯಾಗಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಸೌಜನ್ಯ (Soujanya)ಹೆಸರಿನಲ್ಲಿ ಮೂಡಿ ಬರುತ್ತಿರುವ ಚಿತ್ರಕ್ಕೆ ಇವರು ನಾಯಕಿ. ಇತ್ತೀಚೆಗಷ್ಟೇ ಮೈಸೂರಿನಲ್ಲಿ ಚಿತ್ರದ ಶೀರ್ಷಿಕೆಯನ್ನು ರಿಲೀಸ್ ಮಾಡಲಾಗಿದೆ. ಸೌಜನ್ಯ ಹೆಸರಾಗಿದ್ದರೆ ಇದು ಆರಂಭ ಮಾತ್ರ ಅಂತ್ಯವಲ್ಲ ಎನ್ನುವ ಶೀರ್ಷಿಕೆಯನ್ನೂ ಚಿತ್ರಕ್ಕೆ ನೀಡಲಾಗಿದೆ.
ಚೇತನ್ ದೇವರಾಜ್ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು, ದೋಸ್ತಿ ಕ್ರಿಯೇಷನ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಸೌಜನ್ಯ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡದೇ ಇದ್ದರೂ, ಇದೊಂದು ಮಹಿಳಾ ದೌರ್ಜನ್ಯದ ಕುರಿತಾಗಿ ತಯಾರಿಸುವಂತಹ ಚಿತ್ರವೆಂದು ಹೇಳಲಾಗುತ್ತಿದೆ.
‘ಹನುಮಾನ್’ ಗಳಿಕೆ ಮತ್ತೆ ಏರಿಕೆ: ಜೈ ಹನುಮಾನ್ ಎಂದ ಫ್ಯಾನ್ಸ್
ನಿರೀಕ್ಷೆಗೂ ಮೀರಿ ಹನುಮಾನ್ ಚಿತ್ರದ ಗಳಿಕೆ ಏರುತ್ತಲೇ ಇದೆ. ಮೊನ್ನೆಯಷ್ಟೇ 11 ದಿನಗಳಲ್ಲಿ 218.42 ಕೋಟಿ ರೂಪಾಯಿ ಸಂಪಾದಿಸಿದ್ದ ಈ ಸಿನಿಮಾ, 13ನೇ ದಿನಕ್ಕೆ 230 ಕೋಟಿ ರೂಪಾಯಿಗೂ ಅಧಿಕ ಹಣ ಬಾಕ್ಸ್ ಆಫೀಸಿಗೆ (box office) ಹರಿದು ಬಂದಿದೆ ಎಂದು ಅಂದಾಜಿಸಲಾಗಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರೂ ಜೈ ಹನುಮಾನ್ ಎಂದು ಘೋಷಣೆ ಕೂಗುತ್ತಿದ್ದಾರೆ.
ಹನುಮಾನ್ (Hanuman) ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಕಂಡಿರೋ ನಿರ್ದೇಶಕರಿಗೆ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಕೊಟ್ಟಿದ್ದಾರೆ. ಹನುಮಾನ್ ಪಾರ್ಟ್ 2 ಮಾಡಲು ಅವರು ಮುಂದೆ ಬಂದಿದ್ದಾರೆ. ಕೇವಲ ಬಾಯಿ ಮಾತಲ್ಲಿ ಹೇಳದೇ ಪಾರ್ಟ್ 2 ಚಿತ್ರದ ಕೆಲಸಕ್ಕೂ ಅವರು ಮುಂದಾಗಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಐತಿಹಾಸಿಕ ಕ್ಷಣದಲ್ಲಿ ಇಡೀ ದೇಶವೇ ಸಾಕ್ಷಿಯಾಗಿತ್ತು. ಈ ಶುಭ ದಿನದಂದು, ಹನುಮಾನ್ ಸಿನಿಮಾ ನಿರ್ದೇಶಕ ಪ್ರಶಾಂತ್ ವರ್ಮಾ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಮ್ಮ ಮುಂಬರುವ ಚಿತ್ರ ‘ಜೈ ಹನುಮಾನ್’ ಸಿನಿಮಾಗಾಗಿ ತಯಾರಿಯನ್ನು ಪ್ರಾರಂಭಿಸಿದ್ದಾರೆ. ಅದರ ಭಾಗವಾಗಿ ಜೈ ಹನುಮಾನ್ ಸಿನಿಮಾದ ಸ್ಟ್ರಿಪ್ಟ್ ಪೂಜೆ ನೆರವೇರಿಸಿದ್ದಾರೆ.
ಪ್ರಶಾಂತ್ ವರ್ಮಾ ಅವರ ಸೂಪರ್ ಹೀರೋ ಚಿತ್ರ ಹನುಮಾನ್ ಜನವರಿ 12 ರಂದು ಬಿಡುಗಡೆಯಾಯಿತು. ತೇಜ ಸಜ್ಜ, ವರಲಕ್ಷ್ಮಿ ಶರತ್ಕುಮಾರ್, ಅಮೃತ ಅಯ್ಯರ್ ಮತ್ತು ವಿನಯ್ ರೈ ನಟಿಸಿರುವ ಚಿತ್ರವು ವಿಶ್ವದಾದ್ಯಂತ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈ ಸಕ್ಸಸ್ ಬೆನ್ನಲ್ಲೇ ಜೈ ಹನುಮಾನ್ ಸಿನಿಮಾದ ಕೆಲಸ ಶುರುವಾಗಿವೆ.