ಭಾನುವಾರ, ಡಿಸೆಂಬರ್ 22, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ರೊಟ್ಟಿ ಖರೀದಿ ವೇಳೆ ಪ್ರೇಮ ಕಹಾನಿ ; ಪ್ರಿಯಕರನ ಹಣ ಖರ್ಚು ಮಾಡಿ ಮರಳಿ ಗಂಡನೂರಿಗೆ ಹೋದ ಮಹಿಳೆ

Twitter
Facebook
LinkedIn
WhatsApp
ರೊಟ್ಟಿ ಖರೀದಿ ವೇಳೆ ಪ್ರೇಮ ಕಹಾನಿ ; ಪ್ರಿಯಕರನ ಹಣ ಖರ್ಚು ಮಾಡಿ ಮರಳಿ ಗಂಡನೂರಿಗೆ ಹೋದ ಮಹಿಳೆ

ಬಳ್ಳಾರಿ, ಜ.24: ಇದು ಒಂದು ರೊಟ್ಟಿಯಿಂದಾದ ಪ್ರೀತಿ ಪ್ರೇಮದ ರಿಯಲ್ ಸ್ಟೋರಿ. ರೊಟ್ಟಿ ಖರೀದಿಗೆ ಹೋಗಿದ್ದಾಗ ವಿವಾಹಿತ ಪುರುಷನಿಗೆ ವಿವಾಹಿತ ಮಹಿಳೆ ಮೇಲೆ ಲವ್ ಆಗಿದೆ. ಗಂಡನಿಂದ ದೂರ ಉಳಿದು ಪ್ರಿಯಕರನೊಂದಿಗೆ ಬಳ್ಳಾರಿಯಲ್ಲಿ (Ballari) ನೆಲೆಸಿದ್ದಳು. ಪ್ರಿಯಕರನೊಂದಿಗೆ ಇದ್ದುಕೊಂಡು ಭರ್ಜರಿ ಹಣ ಖರ್ಚು ಮಾಡಿ ಕೊನೆಗೆ ಮಹಿಳೆ ಮರಳಿ ಪತಿಯೊಂದಿಗೆ ಹೋಗಿದ್ದಾಳೆ.

ಮಹಾರಾಷ್ಟ್ರದ ಸಾಂಗ್ಲಿಯ ಜತ್ತ ತಾಲೂಕಿನ ಮುಚ್ಚಂಡಿ ಗ್ರಾಮದ ಸಿದ್ದಗೊಂಡ ಸೌದತ್ತಿ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಈತನಿಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳು ಕೂಡ ಇದ್ದಾರೆ. ಹೀಗಿದ್ದರೂ ರೊಟ್ಟಿ ತರಲೆಂದು ಹೋದ ಸೌದತ್ತಿಗೆ ರೊಟ್ಟಿ ಮಾಡುವ ಸುಜಾತಾಳ ಮೇಲೆ ಪ್ರೇಮಾಂಕುರವಾಗಿದೆ. ಈಕೆಗೂ ಮದುವೆಯಾಗಿ ಒಂದು ಮಗುವಿದೆ.

ರೊಟ್ಟಿ ತರಲು ಹೋಗುತ್ತಿದ್ದಾಗ ಸುಜಾತಾ ಮತ್ತು ಸೌದತ್ತಿ ಮೇಲೆ ಬೆಳೆದ ಸಲುಗೆ ಪ್ರೀತಿಗೆ ತಿರುಗಿದೆ. ಅದರಂತೆ ಸಜಾತ ತನ್ನ ಗಂಡನನ್ನು ಬಿಟ್ಟು ಸೌದತ್ತಿ ಜೊತೆ ಓಡಿ ಬಂದಿದ್ದಳು. ಹೀಗೆ ಓಡಿ ಬಂದ ವಿವಾಹಿತ ಜೋಡಿ ಹಕ್ಕಿ ಕಳೆದ ಆರು ತಿಂಗಳಿನಿಂದ ಬಳ್ಳಾರಿಯಲ್ಲಿ ನೆಲೆಸಿದ್ದರು. ಇತ್ತ, ಪತ್ನಿ ಕಾಣೆಯಾಗಿದ್ದಾಳೆ ಎಂದು ಪತಿ ಮಹೇಶ್ ಮಹಾರಾಷ್ಟ್ರ ಸಾಂಗ್ಲಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

ಅದರಂತೆ ಮಹಿಳೆಯನ್ನು ಪ್ರಿಯಕರನ ಜೊತೆ ಪತ್ತೆ ಹಚ್ಚಿದ ಸಾಂಗ್ಲಿ ಪೊಲೀಸರು ರಾಜಿ ಪಂಚಾಯ್ತಿ ನಡೆಸಿದ್ದಾರೆ. ಈ ವೇಳೆ ತಾನು ಸಿದ್ದಗೊಂಡ ಸೌದತ್ತಿ ಜೊತೆಗೆ ಹೋಗುತ್ತೇನೆ ಎಂದಿದ್ದಾಳೆ. ಅದರಂತೆ, ಸಾಂಗ್ಲಿ ಪೋಲಿಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆದು ಸುಜಾತಾಳನ್ನು ಸೌದತ್ತಿ ಬಳ್ಳಾರಿಗೆ ಕರೆದುಕೊಂಡು ಬಂದಿದ್ದಾನೆ.

ಹೀಗೆ ಸೌದತ್ತಿ ಜೊತೆಗಿದ್ದ ಸುಜಾತ ಅಲ್ಲಿಗೆ ಇಲ್ಲಿಗೆ ಎಂದು ಸುತ್ತಾಡಿ, ವಿಮಾನದಲ್ಲೂ ಪ್ರಯಾಣ ಮಾಡಿ ಭರ್ಜರಿ ಹಣ ಖರ್ಚು ಮಾಡಿಸಿದ್ದಾಳೆ. ಕೊನೆಗೆ ತನ್ನ ಗಂಡನಿಗೆ ದೂರವಾಣಿ ಕರೆ ಮಾಡಿ ಮರಳಿ ಗಂಡನ ಜೊತೆ ಹೋಗಿದ್ದಾಳೆ. ಇತ್ತ, ತನ್ನ ಪ್ರೇಯಸಿ ಬೇಕು ಅಂತಾ ಸಿದ್ದಗೊಂಡ ಸೌದತ್ತಿ ಬಳ್ಳಾರಿ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪ್ರೇಯಸಿ ಸುಜಾತ ಹುಡುಕಾಟಕ್ಕಾಗಿ‌ ಕಚೇರಿ ಕಚೇರಿ ಅಲೆಯುತ್ತಿದ್ದಾನೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist