ಭಾರತೀಯ ಇನ್ನೊಂದು ಧರ್ಮದ ಪ್ರವಿತ್ರ ಸ್ಥಳದಲ್ಲಿ ದೇವಸ್ಥಾನ ಕಟ್ಟಲಾಗಿದೆ: ನಟಿ ಶ್ರುತಿ ಹರಿಹರನ್
ಚೆನ್ನೈ: ಸಂವಿಧಾನದ ಪ್ರತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ದಕ್ಷಿಣ ಭಾರತದ ಖ್ಯಾತ ನಟಿ ಶ್ರುತಿ ಹರಿಹರನ್, ಭಾರತೀಯ ಇನ್ನೊಂದು ಧರ್ಮದ ಪ್ರವಿತ್ರ ಸ್ಥಳದಲ್ಲಿ ದೇವಸ್ಥಾನ ಕಟ್ಟಿರೋದು ಅಸಮಧಾನ ಹೆಚ್ಚಿಸಿದೆ ಎಂದಿದ್ದಾರೆ.
ನಾನು ಏನನ್ನು ನಂಬುತ್ತೇನೋ ಅದರ ಹಿಂದೆ ಹೋಗುವುದು ಇದೀಗ ಉತ್ತಮ ಪ್ರವೃತ್ತಿಯಾಗಿಟ್ಟಿದೆ. ಇಂತಹ ಸಮಯದಲ್ಲಿ ಸಂವಿಧಾನವನ್ನು ನೆನಪಿಟ್ಟುಕೊಳ್ಳುವುದು ಏಕೆ ಮುಖ್ಯ? ಧರ್ಮದ ವಿಷಯದಲ್ಲಿ ದೇಶವು ತಟಸ್ಥವಾಗಿರಬೇಕೆಂದು ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ. ಇದು ಯಾವುದೇ ಧರ್ಮದ ವಿರುದ್ಧ ತಾರತಮ್ಯ ಅಥವಾ ಪೋಷಣೆ ಮಾಡುವಂತಿಲ್ಲ. ನಾನಿಲ್ಲಿ ರಾಜಕೀಕರಣ ಆಗುತ್ತಿರುವುದನ್ನು ಗಮನಿಸುತ್ತಿದ್ದೇನೆ. ಇದನ್ನೆಲ್ಲ ನೋಡಿ ಆರಾಮಾಗಿ ಕೂತು ಗಮನಿಸಲು ಸಾಧ್ಯವಿಲ್ಲಎಂದು ಶ್ರುತಿ ಹರಿಹರನ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಇನ್ನೊಂದು ಧರ್ಮದ ಪವಿತ್ರ ಸ್ಥಳದಲ್ಲಿ ದೇವಸ್ಥಾನ ಕಟ್ಟುವ ರಾಜಕೀಯ ಭರವಸೆ ನೀಡಿ, ಅದನ್ನೀಗ ಈಡೇರಿಸಿರುವುದು. ಅಲ್ಲದೆ ಅದನ್ನು ಸಂಭ್ರಮಿಸುತ್ತಿರುವ ರೀತಿ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಶ್ರುತಿ ಹರಿಹರನ್ ಹೇಳಿದ್ದಾರೆ.
ಧ್ರುವ ಸರ್ಜಾ ‘ಕೆಡಿ’ ಸಿನಿಮಾದಲ್ಲಿ ನೋರಾ ಫತೇಹಿ
ಡ್ಯಾನ್ಸಿಂಗ್ ಬ್ಯೂಟಿ ನೋರಾ ಫತೇಹಿ (Nora Fatehi) ಅವರು ಕನ್ನಡದ ಪ್ರೇಕ್ಷಕರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಧ್ರುವ ಸರ್ಜಾ ನಟನೆಯ- ಡೈರೆಕ್ಟರ್ ಪ್ರೇಮ್ ನಿರ್ದೇಶನದ ‘ಕೆಡಿ’ (Kd Film) ಸಿನಿಮಾದಲ್ಲಿ ನಟಿ ನೋರಾ ಕಾಣಿಸಿಕೊಳ್ತಿದ್ದಾರೆ. ಈ ಬಗ್ಗೆ ಚಿತ್ರತಂಡವೇ ಬಿಗ್ ಅಪ್‌ಡೇಟ್ ನೀಡಿದ್ದಾರೆ.
ಬಾಲಿವುಡ್ ನಟಿ ನೋರಾ ಫತೇಹಿ ಇದೇ ಮೊದಲ ಬಾರಿಗೆ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡ್ತಿದ್ದಾರೆ. ಅದು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಚಿತ್ರದ ಮೂಲಕ ಎಂಟ್ರಿ ಕೊಡ್ತಿದ್ದಾರೆ. ಡೈರೆಕ್ಟರ್ ಪ್ರೇಮ್ (Director Prem) ಕಾಂಬೋದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ನೋರಾ ಸೊಂಟ ಬಳುಕಿಸಿದ್ದಾರೆ.
ಕೆಡಿ’ (Kd Film) ಚಿತ್ರದಲ್ಲಿ ನೋರಾ ಸ್ಪೆಷಲ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಅಪ್‌ಡೇಟ್ ಹಂಚಿಕೊಂಡಿದೆ. ಡ್ಯಾನ್ಸ್ ಜೊತೆ ನಟನೆ ಕೂಡ ಮಾಡಿದ್ದಾರಾ? ಎಂಬುದರ ಬಗ್ಗೆ ಸುಳಿವು ಬಿಟ್ಟು ಕೊಟ್ಟಿಲ್ಲ.
‘ಕೆಡಿ’ ಸಿನಿಮಾದಲ್ಲಿ ಸ್ಟಾರ್ ಕಲಾವಿದರ ದಂಡೇ ಇದೆ. ಶಿಲ್ಪಾ ಶೆಟ್ಟಿ(Shilpa Shetty), ಸಂಜಯ್ ದತ್, ರಮೇಶ್ ಅರವಿಂದ್, ಕ್ರೇಜಿ ಸ್ಟಾರ್ ರವಿಚಂದ್ರನ್ ಸೇರಿದಂತೆ ಹಲವರು ನಟಿಸಿದ್ದಾರೆ. ಸದ್ಯ ನೋರಾ ಫತೇಹಿ ಈ ಚಿತ್ರದ ಭಾಗವಾಗಿರೋದಕ್ಕೆ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.