ಬೆಳ್ತಂಗಡಿ: ಆಟವಾಡುತ್ತಾ ಮಗು ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಸಾವು
ಬೆಳ್ತಂಗಡಿ, ಜ 22: ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಕನ್ನಾಜೆ ಎಂಬಲ್ಲಿ ಮನೆಯಲ್ಲಿದ್ದ ಮಗು ಆಟವಾಡುತ್ತಾ ತೋಟದಲ್ಲಿದ್ದ ಕೆರೆ ಬಳಿ ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.
ರೋಷನ್ ಡಿಸೋಜಾ ಮತ್ತು ಉಷಾ ಡಿಸೋಜಾ ದಂಪತಿಗಳ ಒಬ್ಬನೇ ಮಗ ರೇಯನ್ ಡಿಸೋಜಾ(1ವರ್ಷ 11 ತಿಂಗಳು) ಜ.22 ರಂದು ಬೆಳ್ತಂಗಡಿ ಮನೆಯ ತೋಟದಲ್ಲಿರುವ ಕೆರೆಗೆ ಬಿದ್ದು ಸಾವನ್ನಪ್ಪಿದೆ.
ಇನ್ನು ತಕ್ಷಣ ಮನೆಯವರು ಮತ್ತು ಸ್ಥಳೀಯರ ಸಹಕಾರದಲ್ಲಿ ಲಾಯಿಲ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿದರೂ ಮಗು ಸಾವನ್ನಪ್ಪಿದೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ತಂದೆ ರೋಷನ್ ದೂರು ನೀಡಿದ್ದಾರೆ.
ಮಂಗಳೂರು: 6 ಮಂದಿಗೆ ಕೋವಿಡ್ ಸೋಂಕು; ಒಂದು ಸಾವು
ಮಂಗಳೂರು, ಜ 22: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರದಂದು 6 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಒಬ್ಬ ಸೋಂಕಿತ ಮೃತಪಟ್ಟಿರುತ್ತಾರೆ.
ಒಟ್ಟು 159 ಜನರನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿತ್ತು. ಸದ್ಯ ಜಿಲ್ಲೆಯಲ್ಲಿ 13 ಸಕ್ರಿಯ ಪ್ರಕರಣಗಳಿದ್ದು, ನಿನ್ನೆ ಆಸ್ಪತ್ರೆಯಿಂದ ಇಬ್ಬರು ಬಿಡುಗಡೆಯಾಗಿದ್ದಾರೆ.
ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 62 ವರ್ಷದ ಮಹಿಳೆಯೊಬ್ಬರು ಸ್ಟ್ರೋಕ್ ಹಿನ್ನೆಲೆ ಸಾವನ್ನಪ್ಪಿದ್ದಾರೆ. ಅವರನ್ನು ಕೋವಿಡ್ ತಪಾಸಣೆಗೆ ಒಳಪಡಿಸಿದ ವೇಳೆ ಸೋಂಕು ದೃಢಪಟ್ಟಿರುವುದಾಗಿ ವರದಿ ಬಂದಿತ್ತು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.