ಅಯೋಧ್ಯೆ ಬಾಲರಾಮನಿಗೆ ಮೊದಲ ಮಜ್ಜನ - ಅಯೋಧ್ಯೆಯಲ್ಲಿಂದು ಮೋದಿ ಕಾರ್ಯಕ್ರಮಗಳೇನು?
ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ (Ayodhya) ನಿರ್ಮಿಸಲಾಗಿರುವ ರಾಮಮಂದಿರದಲ್ಲಿಂದು ರಾಮಲಲ್ಲಾ (Ram lalla) ಪ್ರಾಣಪ್ರತಿಷ್ಠೆ ನೆರವೇರಲಿದೆ. ಈಗಾಗಲೇ ರಾಮಲಲ್ಲಾಗೆ 114 ಕ್ಷೇತ್ರಗಳಿಂದ ತರಿಸಲಾಗಿದ್ದ ನೀರಿನಿಂದ ಮೊದಲ ಮಜ್ಜನ ಮಾಡಿಸಲಾಗಿದೆ.
ರಾಮಮಂದಿರದ (Ram Mandir) 500 ವರ್ಷಗಳ ಕನಸು ಈಗ ನನಸಾಗುತ್ತಿರುವ ಕಾರಣ ಕೋಟ್ಯಂತರ ಭಾರತೀಯರು ಉದ್ಘಾಟನೆಗಾಗಿ ಕಾಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಿದ್ದು, ಸೋಮವಾರ ಸುಮಾರು 5 ಗಂಟೆ ಮೋದಿ ಅವರು ಅಯೋಧ್ಯೆಯಲ್ಲಿಯೇ ಕಾಲ ಕಳೆಯಲಿದ್ದಾರೆ.
#WATCH | Telangana | Actor Chiranjeevi leaves from Hyderabad for Ayodhya in Uttar Pradesh as Ayodhya Ram Temple pranpratishtha ceremony to take place today.
— ANI (@ANI) January 22, 2024
He says, "That is really great. Overwhelming. We feel it's a rare opportunity. I feel Lord Hanuman who is my deity, has… pic.twitter.com/FjKoA7BBkQ
ರಾಮಲಲ್ಲಾಗೆ ಮೊದಲ ಮಜ್ಜನ: ಅಯೋಧ್ಯೆಯ ಗರ್ಭಗುಡಿ ಪ್ರವೇಶಿಸಿರುವ ರಾಮಲಲ್ಲಾ ಮೂರ್ತಿಗೆ ಸೋಮವಾರ ಮೊದಲ ಬಾರಿಗೆ ಸ್ನಾನ ಮಾಡಿಸಲಾಗಿದೆ. ಸುಮಾರು 114 ತೀರ್ಥಕ್ಷೇತ್ರಗಳಿಂದ ತಂದ ನೀರಿನಲ್ಲಿ ರಾಮಲಲ್ಲಾ ಮೂರ್ತಿಗೆ ಮಹಾಮಜ್ಜನ ಮಾಡಿಸಲಾಗಿದೆ.
ಅಯೋಧ್ಯೆಯಲ್ಲಿಂದು ಮೋದಿ:
ಬೆಳಗ್ಗೆ 10.25: ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಆಗಮನ
ಬೆಳಗ್ಗೆ 10.55: ರಾಮಜನ್ಮಭೂಮಿ ಆವರಣ ತಲುಪಲಿರುವ ಹೆಲಿಕಾಪ್ಟರ್
ಬೆಳಗ್ಗೆ 11 ರಿಂದ ಮಧ್ಯಾಹ್ನ 12: ರಾಮಮಂದಿರದ ವೀಕ್ಷಣೆ ಮಾಡಲಿರುವ ಪ್ರಧಾನಿ
ಮಧ್ಯಾಹ್ನ 12.05-12.55: ರಾಮಲಲ್ಲಾನಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಲಿರುವ ಮೋದಿ. ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿ.
ಮಧ್ಯಾಹ್ನ 1-2: ನರೇಂದ್ರ ಮೋದಿ, ಮೋಹನ್ ಭಾಗವತ್, ಯೋಗಿ ಆದಿತ್ಯನಾಥ್ ಸಾರ್ವಜನಿಕ ಭಾಷಣ
ಮಧ್ಯಾಹ್ನ 2.10: ರಾಮಜನ್ಮಭೂಮಿ ಆವರಣದಲ್ಲಿರುವ ಶಿವ ಮಂದಿರಕ್ಕೆ ಭೇಟಿ, ವಿಶೇಷ ಪ್ರಾರ್ಥನೆ
ಮಧ್ಯಾಹ್ನ 3.30: ಅಯೋಧ್ಯೆಯಿಂದ ಪ್ರಧಾನಿ ನಿರ್ಗಮನ
ಖ್ಯಾತ ನಟರ ಆಗಮನ:
ಅಮಿತಾಬ್ ಬಚ್ಚನ್, ಚಿರಂಜೀವಿ, ರಾಮ್‌ಚರಣ್, ಪವನ್ ಕಲ್ಯಾಣ್ ಸೇರಿದಂತೆ ಅನೇಕ ನಟ ನಟಿಯರು ಅಯೋಧ್ಯೆಗೆ ಆಗಮಿಸುತ್ತಿದ್ದಾರೆ. ಕ್ರೀಡಾ ತಾರೆ ಸಚಿನ್ ತೆಂಡೂಲ್ಕರ್, ವೆಂಕಟೇಶ್ ಪ್ರಸಾದ್, ಆರ್.ಅಶ್ವಿನ್, ಸೈನಾ ನೆಹ್ವಾಲ್ ಸೇರಿದಂತೆ ಅನೇಕರು ಅಯೋಧ್ಯೆಗೆ ಆಗಮಿಸುತ್ತಿದ್ದಾರೆ. ಗಣ್ಯರ ಸಮ್ಮುಖದಲ್ಲಿ ಪ್ರಾಣಪ್ರತಿಷ್ಠಾಪನೆ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.
ಒಂದೂವರೆ ಶತಕೋಟಿ ಭಾರತೀಯರ ಶತ ಶತಮಾನಗಳ ಕನಸು ನನಸಾಗಿದೆ: ಹೆಚ್‌ಡಿಕೆ
ಅಯೋಧ್ಯೆ: ಇಂದು ರಾಮನೂರು ಅಯೋಧ್ಯೆಯಲ್ಲಿ (Ayodhya Ram Mandir) ರಾಮಲಲ್ಲಾನ ಪ್ರಾಣಪತ್ರಿಷ್ಠಾ ಕಾರ್ಯಕ್ರಮ (Pran Prathistha ceremony) ನಡೆಯಲಿದ್ದು, ಈ ಕ್ಷಣಕ್ಕಾಗಿ ದೇಶ-ವಿದೇಶದ ಜನ ಕಾಯುತ್ತಿದ್ದಾರೆ. ಅಂತೆಯೇ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ (HD Devegowda) ಕುಟುಂಬ ಈಗಾಗಲೇ ಅಯೋಧ್ಯೆಗೆ ತೆರಳಿದೆ. ಈ ಸುಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳು ಸಮಸ್ತ ರಾಮಭಕ್ತರಿಗೆ ಶುಭಾಶಯಗಳನ್ನು ಕೋರಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy), ಮೊದಲು ಜೈ ಶ್ರೀರಾಮ್ ಎಂದಿದ್ದಾರೆ. ಬಳಿಕ ಒಂದೂವರೆ ಶತಕೋಟಿ ಭಾರತೀಯರ ಶತ ಶತಮಾನಗಳ ಕನಸು ನನಸಾಗಿದೆ. ಅಸಂಖ್ಯಾತ ಕರಸೇವಕರ ಹೋರಾಟ, ತ್ಯಾಗ-ಬಲಿದಾನದ ಫಲ ಸಾಕಾರವಾಗಿದೆ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿ ಶ್ರೀ ಬಾಲರಾಮ ದೇವರ ಪ್ರಾಣ ಪ್ರತಿಷ್ಠೆ ಪ್ರಧಾನಿ ಮೋದಿಯವರ (Narendra Modi) ನೇತೃತ್ವದಲ್ಲಿ ಇಂದು ನೆರವೇರುತ್ತಿದೆ ಎಂದು ತಿಳಿಸಿದ್ದಾರೆ.
ಈ ಎಲ್ಲಾ ಕರಸೇವಕರ ಪರಿಶ್ರಮದ ಫಲದಿಂದ ಇಂತಹ ದಿವ್ಯಕ್ಷಣಕ್ಕೆ ಪ್ರತ್ಯಕ್ಷ ಸಾಕ್ಷಿಯಾಗುವ ಪುಣ್ಯ ನನಗೆ ಧಕ್ಕಿದೆ ಮತ್ತು ಶ್ರೀರಾಮ ದೇವರಿಗೆ ಭಕ್ತಿ ಸಮರ್ಪಣೆ ಮಾಡುವ ಸುದೈವವೂ, ಅವಕಾಶವು ನನ್ನದಾಗಿದೆ. ಎಲ್ಲ ಕರಸೇವಕರನ್ನೂ ಸ್ಮರಿಸುತ್ತಾ, ಈ ಸುಸಂದರ್ಭದಲ್ಲಿ ಸಮಸ್ತ ರಾಮಭಕ್ತರಿಗೆ ಶುಭಾಶಯಗಳನ್ನು ಕೋರುತ್ತೇನೆ. ಪ್ರತಿಯೊಬ್ಬರಿಗೂ ಆ ರಾಮದೇವರು ಸುಖ-ಶಾಂತಿ, ನೆಮ್ಮದಿ-ಸಮೃದ್ಧಿಯನ್ನು ಕರುಣಿಸಲಿ ಎಂದು ಭಕ್ತಿಪೂರ್ವಕವಾಗಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ 500 ವರ್ಷಗಳ ಕನಸು ನನಸಾಗಿದೆ. ಅಯೋಧ್ಯೆಯಲ್ಲಿ ಗತವೈಭವ ಮರುಕಳಿಸಿದ್ದು, ದೇಶಾದ್ಯಂತ ರಾಮನ ಸಂಭ್ರಮವನ್ನು ಆಚರಿಸಲಾಗುತ್ತದೆ.