ಸೋಮವಾರ, ಮಾರ್ಚ್ 10, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಸಿವಿಲ್ ಸರ್ವೀಸ್ ವಿದ್ಯಾರ್ಥಿ ಕೋಚಿಂಗ್ ತರಗತಿಯಲ್ಲಿ ಕುಳಿತಿರುವಾಗಲೇ ಹೃದಯಾಘಾತದಿಂದ ಸಾವು.!

Twitter
Facebook
LinkedIn
WhatsApp
ಸಿವಿಲ್ ಸರ್ವೀಸ್ ವಿದ್ಯಾರ್ಥಿ ಕೋಚಿಂಗ್ ತರಗತಿಯಲ್ಲಿ ಕುಳಿತಿರುವಾಗಲೇ ಹೃದಯಾಘಾತದಿಂದ ಸಾವು.!

ಇಂದೋರ್: ಮಧ್ಯಪ್ರದೇಶದ ಇಂದೋರ್‌ನಲ್ಲಿ ಸಿವಿಲ್‌ ಸರ್ವಿಸ್‌ (civil service) ವಿದ್ಯಾರ್ಥಿಯೊಬ್ಬ (MPPSC student) ಕೋಚಿಂಗ್ ತರಗತಿಯಲ್ಲಿ ಕುಳಿತಿರುವಾಗಲೇ ಹೃದಯಾಘಾತದಿಂದ ಬುಧವಾರ ಸಂಜೆ ಸಾವನ್ನಪ್ಪಿದ್ದಾನೆ. ಇದರ ದೃಶ್ಯ ತರಗತಿಯ ಸಿಸಿಟಿವಿಯಲ್ಲಿ (Viral video) ಸೆರೆಯಾಗಿದೆ.

ಇಂದೋರ್‌ ನಗರದ ಭನ್ವಾರ್ಕುವಾನ್ ಪ್ರದೇಶದ ನಿವಾಸಿ ಮಾಧವ್ (18), ಮಧ್ಯಪ್ರದೇಶ ಲೋಕಸೇವಾ ಆಯೋಗದ (ಎಂಪಿಪಿಎಸ್‌ಸಿ) ಪ್ರವೇಶ ಪರೀಕ್ಷೆಗೆ ಓದುತ್ತಿದ್ದರು. ನಗರದ ಹಲವಾರು ಕೋಚಿಂಗ್ ಸೆಂಟರ್‌ಗಳಲ್ಲಿ ಒಂದರಲ್ಲಿ ತರಗತಿಗೆ ಹಾಜರಾಗಿದ್ದ ಈತ ತರಗತಿಯಲ್ಲಿ ಕುಳಿತಿರುವಾಗಲೇ ಎದೆನೋವು ಕಾಣಿಸಿಕೊಂಡು ಕುಸಿದರು. ತರಗತಿಯ ಸಿಸಿಟಿವಿ ದೃಶ್ಯಾವಳಿ ಈ ದುಃಖಕರ ಘಟನೆಯನ್ನು ಸೆರೆಹಿಡಿದಿದೆ.

ವಿಡಿಯೋದಲ್ಲಿ, ಕಪ್ಪು ಶರ್ಟ್ ಧರಿಸಿರುವ ಯುವಕ, ತರಗತಿಯಲ್ಲಿ ಕಿಕ್ಕಿರಿದ MPPSC ಆಕಾಂಕ್ಷಿಗಳ ಮಧ್ಯೆ ಕುಳಿತಿದ್ದಾನೆ. ತರಗತಿಯಲ್ಲಿ ನೂರಾರು ವಿದ್ಯಾರ್ಥಿಗಳು ಕೈಕಾಲು ಅಲ್ಲಾಡಿಸಲೂ ಜಾಗವಿಲ್ಲದಂತೆ ಇಕ್ಕಟ್ಟಾಗಿ ಕುಳಿತಿರುವುದು ವಿಡಿಯೋದಲ್ಲಿದೆ. 32 ಸೆಕೆಂಡ್‌ಗಳ ವೀಡಿಯೊದಲ್ಲಿ, ಆರಂಭದಲ್ಲಿ ಮಾಧವ್ ಎಲ್ಲರಂತೆ ಸಹಜವಾಗಿದ್ದು, ಕೊನೆಯಲ್ಲಿ ಇದ್ದಕ್ಕಿದ್ದಂತೆ ಕುಸಿದಿದ್ದಾರೆ. ತನ್ನ ಮೇಜಿನ ಮೇಲೆ ಕುಸಿದ ಆತ ಅಸ್ವಸ್ಥತೆಯಲ್ಲಿರುವಂತೆ ತೋರಿದ್ದು, ಅವನ ಪಕ್ಕದಲ್ಲಿ ಕುಳಿತಿದ್ದ ಯುವಕ ಮಾಧವ್‌ನ ಬೆನ್ನನ್ನು ಸವರಿದ್ದಾನೆ. ಮತ್ತು ನೋವು ಇದೆಯೇ ಎಂದು ಕೇಳಿದ್ದಾನೆ.

ಮಾಧವ್ ಇನ್ನೂ ನೋವಿನಿಂದ ಬಳಲುತ್ತಿರುವಂತೆ, ಅವನ ಸ್ನೇಹಿತ ಟೀಚರ್‌ ಗಮನ ಸೆಳೆಯಲು ಯತ್ನಿಸಿದ್ದಾನೆ. ಕೆಲವು ಸೆಕೆಂಡುಗಳ ನಂತರ ಮಾಧವ್ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ಅವನ ಮೇಜಿನಿಂದ ಜಾರಿ ನೆಲದ ಮೇಲೆ ಬಿದ್ದಿದ್ದಾನೆ. ಗಾಬರಿಗೊಂಡ ಇತರ ವಿದ್ಯಾರ್ಥಿಗಳು ಸಹಾಯ ಮಾಡಲು ಧಾವಿಸಿದ್ದಾರೆ. ಮಾಧವ್ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ನಂತರ ದಾಖಲಿಸಲಾಯಿತಾದರೂ, ಆತ ಮೃತಪಟ್ಟಿದ್ದಾನೆ.

ಮಾಧವ್ ಅವರ ಸಾವು ಮತ್ತೆ ʼಸೈಲೆಂಟ್‌ ಹಾರ್ಟ್‌ ಅಟ್ಯಾಕ್‌’ಗಳ (silent heart attack) ಮೇಲೆ ಗಮನವನ್ನು ಕೇಂದ್ರೀಕರಿಸಿದೆ. ಕಳೆದ ಕೆಲವು ವಾರಗಳಲ್ಲಿ ಇಂದೋರ್‌ನಲ್ಲಿ ಇದು ಕನಿಷ್ಠ ನಾಲ್ಕು ಜೀವಗಳನ್ನು ಬಲಿ ತೆಗೆದುಕೊಂಡಿದೆ ಎಂದು ಮಾಧ್ಯಮ ವರದಿಗಳು ಹೇಳುತ್ತವೆ.

ಹರಾನಿ ಸರೋವರದಲ್ಲಿ ದೋಣಿ ಮುಳುಗಿ 9 ಮಕ್ಕಳು ಸೇರಿ 12 ಮಂದಿ ದಾರುಣ ಸಾವು

ಗಾಂಧೀನಗರ: ಗುಜರಾತ್‌ನ ವಡೋದರದ (Gujrat Vadodara) ಹರಾನಿ ಸರೋವರದಲ್ಲಿ (Harani Lake) ದೋಣಿ ಮುಳುಗಿ 9 ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಸಾವನ್ನಪ್ಪಿದ್ದಾರೆ.

ಅಧಿಕಾರಿಗಳ ಪ್ರಕಾರ, ವಿಹಾರಕ್ಕೆಂದು ತೆರಳಿದ್ದ ದೋಣಿಯಲ್ಲಿ (Boat) 23 ಮಕ್ಕಳು ಮತ್ತು ನಾಲ್ವರು ಶಿಕ್ಷಕರು ಇದ್ದರು. ಘಟನೆ ನಡೆದ ಕೂಡಲೇ ಸ್ಥಳಕ್ಕೆ ರಕ್ಷಣಾ ತಂಡ ದೌಡಾಯಿಸಿ ಕೆರೆಯಿಂದ ಐವರು ಮಕ್ಕಳನ್ನು ರಕ್ಷಣೆ ಮಾಡಿದೆ. ಉಳಿದ ವಿದ್ಯಾರ್ಥಿಗಳ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ವಡೋದರಾದ ಮುಖ್ಯ ಅಗ್ನಿಶಾಮಕ ಅಧಿಕಾರಿ ಪಾರ್ಥ್ ಬ್ರಹ್ಮಭಟ್ ಅವರು, ವಿಹಾರಕ್ಕೆಂದು ಬಂದಿದ್ದ ಶಾಲಾ ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ದೋಣಿ ಹರಾನಿ ಸರೋವರದಲ್ಲಿ ಮಗುಚಿ ಬಿದ್ದಿದೆ. ಅಗ್ನಿಶಾಮಕ ದಳವು ಇದುವರೆಗೆ 7 ವಿದ್ಯಾರ್ಥಿಗಳನ್ನು ರಕ್ಷಿಸಿದೆ, ನಾಪತ್ತೆಯಾದವರಿಗಾಗಿ ಶೋಧ ನಡೆಯುತ್ತಿದೆ. ಅಲ್ಲದೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತಲುಪುವ ಮೊದಲೇ ಸ್ಥಳೀಯರು ಕೆಲವು ಮಕ್ಕಳನ್ನು ರಕ್ಷಿಸಿದ್ದಾರೆ ಎಂದು ಹೇಳಿದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist