ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ, ಯಾವ್ಯಾವ ದಿನ ಯಾವ ವಿಷಯದ ಪರೀಕ್ಷೆ ನಡೆಯಲಿದೆ?
ಬೆಂಗಳೂರು: 2023-24ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟವಾಗಿದೆ.
ಮಾರ್ಚ್ 1 ರಿಂದ ಮಾರ್ಚ್ 22 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಯ ವೇಳಾಪಟ್ಟಿಯನ್ನು ನಿಗದಿ ಮಾಡಲಾಗಿದೆ. ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30ರವರೆಗೆ ದ್ವೀತಿಯ ಪಿಯು ಪರೀಕ್ಷೆಗಳು ನಡೆಯಲಿವೆ.
ದ್ವೀತಿಯ ಪಿಯುಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ
01-03-2024 ಕನ್ನಡ ಹಾಗೂ ಅರೇಬಿಕ್ ಪರೀಕ್ಷೆ
04-03-2024 ಗಣಿತ ಪರೀಕ್ಷೆ
05-03-2024 ರಾಜ್ಯ ಶಾಸ್ತ್ರ, ಸಂಖ್ಯಾಶಾಸ್ತ್ರ ಪರೀಕ್ಷೆ
06-03-2024 ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋ ಮೊಬೈಲ್, ಪರೀಕ್ಷೆ
07-03-2024 ಇತಿಹಾಸ ಹಾಗೂ ಭೌತಶಾಸ್ತ್ರ ಪರೀಕ್ಷೆ
09-03-2024 ಐಚ್ಛಿಕ ಕನ್ನಡ,ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ,ಗೃಹ ವಿಜ್ಞಾನ ಪರೀಕ್ಷೆ
11-03-2024 ತರ್ಕಶಾಸ್ತ್ರ,ವ್ಯವಹಾರ ಅಧ್ಯಯನ ಪರೀಕ್ಷೆ
13-03-2024 ಇಂಗ್ಲಿಷ್ ಪರೀಕ್ಷೆ
15-03-2024 ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನ ಶಾಸ್ತ್ರ, ಮೂಲಗಣಿತ ಪರೀಕ್ಷೆ
16-03-2024 ಅರ್ಥಶಾಸ್ತ್ರ ಪರೀಕ್ಷೆ
18-03-2024 ಭೂಗೋಳ ಶಾಸ್ತ್ರ, ಜೀವಶಾಸ್ತ್ರ ಪರೀಕ್ಷೆ
20-03-2024 ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ ಪರೀಕ್ಷೆ
22-03-2024 ಹಿಂದಿ ಪರೀಕ್ಷೆ
ಭಾರತದಲ್ಲೇ ಅತಿದೊಡ್ಡ ಎಚ್ಎಸ್ಬಿಸಿ ಶಾಖಾ ಕಛೇರಿ ಬೆಂಗಳೂರಿನಲ್ಲಿ ಕಾರ್ಯಾರಂಭ
ಬೆಂಗಳೂರು, ಜನವರಿ 17: ಇಂಗ್ಲೆಂಡ್ ಮೂಲದ ಅಂತಾರಾಷ್ಟ್ರೀಯ ಬ್ಯಾಂಕಿಂಗ್ ದೈತ್ಯ ಎಚ್ಎಸ್ಬಿಸಿ ಬ್ಯಾಂಕ್ (HSBC India) ಬೆಂಗಳೂರಿನಲ್ಲಿ ಇಂದು ಬುಧವಾರ (ಜ. 17) ಹೊಸ ಶಾಖಾ ಕಚೇರಿಯೊಂದನ್ನು ತೆರೆದಿದೆ. ವೈಟ್ಫೀಲ್ಡ್ನಲ್ಲಿರುವ ಈ ಕಚೇರಿ 8,300 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಲಾಗಿದೆ. ವರದಿ ಪ್ರಕಾರ ಎಚ್ಎಸ್ಬಿಸಿಯ ಭಾರತದ ಶಾಖಾ ಕಚೇರಿಗಳ ಪೈಕಿ ವೈಟ್ಫೀಲ್ಡ್ನಲ್ಲಿರುವ ಕಚೇರಿ ಅತಿದೊಡ್ಡದು ಎನ್ನಲಾಗಿದೆ. ವೈಟ್ಫೀಲ್ಡ್ನಲ್ಲಿ ಶಾಖಾ ಕಚೇರಿ ತೆರೆಯಲಾಗಿರುವ ಸಂಗತಿಯನ್ನು ಎಚ್ಎಸ್ಬಿಸಿ ಇಂಡಿಯಾ ಸಂಸ್ಥೆ ಬಿಡುಗಡೆ ಮಾಡಲಾಗಿರುವ ಹೇಳಿಕೆಯಲ್ಲಿ ತಿಳಿಸಿದೆ.
ವಿಶ್ವದ ಅತಿದೊಡ್ಡ ಹಾಗೂ ಹಳೆಯ ಬ್ಯಾಂಕುಗಳಲ್ಲಿ ಒಂದಾದ ಎಚ್ಎಸ್ಬಿಸಿ ಭಾರತಕ್ಕೆ ವ್ಯವಹಾರ ಆರಂಭಿಸಿ 170 ವರ್ಷವೇ ಆಗಿದೆ. 14 ನಗರಗಳಲ್ಲಿ 25ಕ್ಕೂ ಹೆಚ್ಚು ಶಾಖಾ ಕಚೇರಿಗಳನ್ನು ಹೊಂದಿದೆ. ಈಗ ವೈಟ್ಫೀಲ್ಡ್ನಲ್ಲಿ ಹೊಸ ಕಚೇರಿ ತೆರೆದಿರುವುದರಿಂದ ಭಾರತದಲ್ಲಿ ಬ್ಯಾಂಕ್ನ ಉಪಸ್ಥಿತಿ ಇನ್ನೂ ಪ್ರಬಲಗೊಳ್ಳಲಿದೆ ಎಂಬುದು ಎಚ್ಎಸ್ಬಿಸಿ ಇಂಡಿಯಾದ ಅನಿಸಿಕೆ.
ವೈಟ್ಫೀಲ್ಡ್ಗೆ ಸುಲಭ ಕನೆಕ್ಟಿವಿಟಿ ಹೊಂದಿರುವ ಬೆಂಗಳೂರು ದಕ್ಷಿಣ ಪ್ರದೇಶದಲ್ಲಿ ತಲಾದಾಯ 9.37 ಲಕ್ಷ ರೂ ಇದೆ. ಅತಿಹೆಚ್ಚು ತಲಾದಾಯ ಇರುವ ಪ್ರದೇಶಗಳ ಪೈಕಿ ಬೆಂಗಳೂರು ದಕ್ಷಿಣ ಇದೆ. ಭಾರತದ ಸರಾಸರಿ ತಲಾದಾಯವಾದ 2.16 ಲಕ್ಷ ರೂಗಿಂತ ನಾಲ್ಕು ಪಟ್ಟು ಹೆಚ್ಚಿದೆ ಎಂದು ಎಚ್ಎಸ್ಬಿಸಿ ಸಂಸ್ಥೆ ವೈಟ್ಫೀಲ್ಡ್ನಲ್ಲಿ ಕಚೇರಿ ಆರಂಭಿಸಿದ್ದರಿಂದ ಆಗುವ ಅನುಕೂಲದ ಬಗ್ಗೆ ವಿವರಣೆ ನೀಡಿದೆ.
ಭಾರತದ ಹೆಚ್ಚಿನ ಐಟಿ ಕಂಪನಿಗಳು ವೈಟ್ಫೀಲ್ಡ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕೇಂದ್ರಿತವಾಗಿವೆ. ಇದು ಟೆಕ್ನಾಲಜಿ ಹಬ್ ಎಂದೇ ಹೆಸರುವಾಸಿಯಾಗಿದೆ. ಇಲ್ಲಿ ಹೊಸ ಶಾಖಾ ಕಚೇರಿ ತೆರೆಯುವುದರಿಂದ ಟೆಕ್ ಸಮುದಾಯಗಳ ಹಣಕಾಸು ಬೇಡಿಕೆಗಳನ್ನು ಪೂರೈಸಲು ಸುಲಭವಾಗಬಹುದು ಎಂದು ಲಂಡನ್ನಲ್ಲಿ ಮುಖ್ಯ ಕಚೇರಿ ಹೊಂದಿರುವ ಈ ಬ್ಯಾಂಕ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತದಲ್ಲಿ ಮೂರನೇ ಅತಿಹೆಚ್ಚು ಟೆಕ್ ಯೂನಿಕಾರ್ನ್ ಕಂಪನಿಗಳಿವೆ. ವಿಶ್ವದ ಅತಿದೊಡ್ಡ 100 ಟೆಕ್ ಯೂನಿಕಾರ್ನ್ಗಳ ಪೈಕಿ 50ಕ್ಕೆ ನಾವು ಬ್ಯಾಂಕಿಂಗ್ ಸರ್ವಿಸ್ ನೀಡುತ್ತಿದ್ದೇವೆ ಎಂದು ಅದು ಹೇಳಿಕೊಂಡಿದೆ.