ಮಂಗಳೂರು ಲೋಕಸಭಾ ಚುನಾವಣೆ 2024: ರಮಾನಾಥ್ ರೈ, ವಿನಯ್ ಕುಮಾರ್ ಸೊರಕೆ ಹೆಸರು ಅಂತಿಮ ಪಟ್ಟಿಯಲ್ಲಿ?
ಮಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯ ಮಂಗಳೂರು ಕ್ಷೇತ್ರದ ಅಭ್ಯರ್ಥಿಗಳ ಹೆಸರಿನಲ್ಲಿ ಮಾಜಿ ಸಚಿವರುಗಳಾದ ರಮನಾಥ ರೈ ಹಾಗೂ ವಿನಯ್ ಕುಮಾರ್ ಸೊರಕೆ ಹೆಸರು ಮುಂಚೂಣಿಯಲ್ಲಿದೆ ಹೈಕಮಾಂಡ್ ಮೂಲಗಳಿಂದ ತಿಳಿದುಬಂದಿದೆ.
ಲೋಕಸಭಾ ಚುನಾವಣೆಯ ವ್ಯಾಪ್ತಿ ಹೆಚ್ಚು ಇರುವುದರಿಂದ, ಕಾರ್ಯಕರ್ತರ ಸಂಪರ್ಕ ಈ ಎರಡು ಅಭ್ಯರ್ಥಿಗಳಿಗೆ ಪೂರಕವಾಗಿದೆ ಎಂದು ತಿಳಿದುಬಂದಿದೆ.
ಹೈಕಮಾಂಡ್ ನ ಒಂದು ಮೂಲಗಳ ಪ್ರಕಾರ ರಮಾನಾಥ ರೈ ಅಥವಾ ವಿನಯ್ ಕುಮಾರ್ ಸೊರಕೆ ಅವರನ್ನು ಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವುದು ಪಕ್ಕ ಎನ್ನಲಾಗುತ್ತಿದೆ. ಈ ಬಗ್ಗೆ ಹೈಕಮಾಂಡ್ ಅಂತಿಮ ತೀರ್ಮಾನಕ್ಕೆ ಬಂದಿದೆ ಎಂದು ತಿಳಿದುಬಂದಿದೆ.
ಈ ನಡುವೆ ಬಿಜೆಪಿ ಅಭ್ಯರ್ಥಿಯಾಗಿ ನಳಿನ್ ಕುಮಾರ್ ಕಟೀಲ್ ಆಯ್ಕೆಯಾಗುವುದು ಬಹುತೇಕ ಪಕ್ಕ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರ ಕುತೂಹಲ ಕೆರಳಿಸಿದ್ದು ಬಹುತೇಕ ಒಂದು ಭಾಗದ ಚಿತ್ರಣ ಮೂಡುತಿರುವುದು ಚುನಾವಣೆ ರಂಗೇರುತಿದೆ.
ಖೇಲೋ ಇಂಡಿಯಾಗೆ ಆಯ್ಕೆ – ಕ್ರೀಡಾಧಿಕಾರಿ, ವಿದ್ಯಾರ್ಥಿಗಳನ್ನು ಮೆರವಣಿಯೊಂದಿಗೆ ಬರಮಾಡಿಕೊಂಡ ಬೆಳ್ಳಾರೆ ಜನತೆ
ಮಂಗಳೂರು: ಖೇಲೋ ಇಂಡಿಯಾ (Khelo India) ರಾಷ್ಟ್ರ ಮಟ್ಟದ ಕಬಡ್ಡಿ (Kabaddi) ಪಂದ್ಯಾಟಕ್ಕೆ ಆಯ್ಕೆಯಾದ ಬೆಳ್ಳಾರೆಯ (Bellare) ಕೆಪಿಎಸ್‌ನ ಇಬ್ಬರು ವಿದ್ಯಾರ್ಥಿಗಳು ಮತ್ತು ಕ್ರೀಡಾಧಿಕಾರಿಯನ್ನು ನಾಗರಿಕರು ಮೆರವಣಿಗೆಯ ಮೂಲಕ ಸಂಸ್ಥೆಗೆ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.
ತೆಲಂಗಾಣದಲ್ಲಿ ನಡೆದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ (Karnataka) ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ರಾಜ್ಯದ ಕಬಡ್ಡಿ ತಂಡವನ್ನು ಪ್ರತಿನಿಧಿಸಿದ ಕಿಶನ್ ದ್ರಾವಿಡ್ ಹಾಗೂ ಹೇಮಂತ ಕೆ. ವಿ ಇವರು ಖೇಲೋ ಇಂಡಿಯಾ ರಾಷ್ಟ್ರೀಯ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆ ಆಗಿದ್ದಾರೆ. ಇವರ ಜೊತೆ ಖೇಲೋ ಇಂಡಿಯಾ ಕ್ರೀಡಾಧಿಕಾರಿಯಾಗಿ ಬೆಳ್ಳಾರೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಪುಷ್ಪಾವತಿ ಆಯ್ಕೆಗೊಂಡಿದ್ದಾರೆ.
ಸುಳ್ಯ ತಾಲೂಕಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕೆಪಿಎಸ್ ಶಾಲಾ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಖೇಲೋ ಇಂಡಿಯಾಗೆ ಆಯ್ಕೆಯಾಗಿ ಬೆಳ್ಳಾರೆಗೆ ಕೀರ್ತಿ ತಂದಿದ್ದಾರೆ. ಈ ವಿಶೇಷ ಸಾಧನೆಗೆ ಊರಿನ ನಾಗರಿಕರು ತೆಲಂಗಾಣದಿಂದ ಬೆಂಗಳೂರು ಮೂಲಕ ಸುಬ್ರಹ್ಮಣ್ಯ ಮಾರ್ಗವಾಗಿ ಆಗಮಿಸಿದ ಇಬ್ಬರು ಆಟಗಾರರನ್ನು ಮತ್ತು ಕ್ರೀಡಾಧಿಕಾರಿ ಪುಷ್ಪಾವತಿ ಇವರನ್ನು ಬರಮಾಡಿಕೊಂಡು ಸನ್ಮಾನಿಸಿ ಮೆರವಣಿಗೆಯ ಮೂಲಕ ಸಂಸ್ಥೆಗೆ ಬರಮಾಡಿದ್ದಾರೆ.