ಬುಧವಾರ, ಮಾರ್ಚ್ 12, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

5ನೇ ಗ್ಯಾರಂಟಿ ಜಾರಿಗೆ ತಂದಿದ್ದೇವೆ; ನಾನು ಶ್ರೀರಾಮನ ಭಕ್ತ - ನಾನು ಕೂಡ ಅಯೋಧ್ಯೆಗೆ ಹೋಗುತ್ತೇನೆ : ಸಿದ್ದರಾಮಯ್ಯ

Twitter
Facebook
LinkedIn
WhatsApp
5ನೇ ಗ್ಯಾರಂಟಿ ಜಾರಿಗೆ ತಂದಿದ್ದೇವೆ; ನಾನು ಶ್ರೀರಾಮನ ಭಕ್ತ - ನಾನು ಕೂಡ ಅಯೋಧ್ಯೆಗೆ ಹೋಗುತ್ತೇನೆ : ಸಿದ್ದರಾಮಯ್ಯ

ಶಿವಮೊಗ್ಗ: ಜನವರಿ 22 ನಂತರ ನಾನು ಕೂಡ ಅಯೋಧ್ಯೆಗೆ (Ayodhya Ram Mandir) ಹೋಗುತ್ತೇನೆ. ನಮ್ಮ ಕಾರ್ಯಕರ್ತರು ಕೂಡ ದೇವಸ್ಥಾನಕ್ಕೆ ಹೋಗ್ತಾರೆ. ಬಿಜೆಪಿಯ (BJP) ರಾಜಕೀಯ ವಿರೋಧ ಹೊರತು ರಾಮನ ವಿರೋಧಿಗಳಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಶ್ರೀರಾಮನಚಂದ್ರನ ವಿರೋಧಿಗಳಲ್ಲ. ನಾವು ಬಿಜೆಪಿ (BJP) ರಾಜಕಾರಣಕ್ಕೆ ಮಾತ್ರ ವಿರೋಧ. ಶ್ರೀರಾಮನ ಭಕ್ತರು ನಾವು. ಆದರೆ ಇವರು ಶ್ರೀರಾಮನ ರಾಜಕೀಯ ಮಾಡಲು ಹೋಗುತ್ತಿದ್ದಾರೆ. ಅದರ ವಿರುದ್ಧವೇ ಹೊರತು ಶ್ರೀರಾಮನ ವಿರೋಧ ಮಾಡುತ್ತಿಲ್ಲ ಎಂದರು.

ಐದನೇ ಗ್ಯಾರೆಂಟಿ ಯೋಜನೆಯನ್ನು ಜಾರಗೊಳಿಸುತ್ತಿದ್ದೇವೆ. ಮತಕ್ಕಾಗಿ ಮಾಡಿದ ಕಾರ್ಯಕ್ರಮ ಇದಲ್ಲ. ಯುವಜನರ ಅನುಕೂಲಕ್ಕಾಗಿ ಮಾಡಿದ ಕಾರ್ಯಕ್ರಮ. ನಮ್ಮ ಪ್ರಣಾಳಿಕೆಯಲ್ಲಿ ಕೊಟ್ಟ ಮಾತಿನಂತೆ 5ನೇ ಗ್ಯಾರಂಟಿ ಯೋಜನೆ ಜಾರಿ ತಂದಿದ್ದೇವೆ. ಕುಮಾರಸ್ವಾಮಿಯೆಂದರೆ ಸುಳ್ಳು, ಸುಳ್ಳೆಂದರೆ ಕುಮಾರಸ್ವಾಮಿ. ಅವರ ಬಗ್ಗೆ ಹೆಚ್ಚು ಮಾತಾನಾಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು. 

ಐದನೇ ಗ್ಯಾರಂಟಿ ಯುವನಿಧಿ ಪ್ರಕಾರ, ನಿರುದ್ಯೋಗ ಯುವಕರಿಗೆ ಹಾಗೂ ಪದವೀಧರ ಯುವಕರಿಗೆ 3 ಸಾವಿರ ಹಣ ಕೊಡ್ತೀವಿ. ಎರಡು ವರ್ಷದವರೆಗೂ ಹಣ ಕೊಡ್ತೀವಿ. ಯುವಕರಿಗೆ ಉದ್ಯೋಗ ತರಬೇತಿ ಕೂಡ ನೀಡ್ತೀವಿ. ಗ್ಯಾರಂಟಿ ಕೊಡುತ್ತಿರುವುದು ಅವರಿಗೆ ಹೊಟ್ಟೆ ಉರಿ ಆಗ್ತೀದೆ. ಹಾಗಾಗಿ ಬಿಜೆಪಿ ಯವರಿಗೆ ಹೊಟ್ಟೆ ಉರಿ ಶುರುವಾಗಿದೆ. 130 ಕೋಟಿ ಮಹಿಳೆಯರು ಉಚಿತವಾಗಿ ಸಂಚಾರ ಮಾಡಿದ್ದಾರೆ. ಫ್ರೀ ಆಗಿ ವಿದ್ಯುತ್ ಕೊಡ್ತಾ ಇದ್ದೀವಿ. 1 ಕೋಟಿ 58 ಲಕ್ಷ ಜನರಿಗೆ ಪ್ರೀ ಆಗಿ ವಿದ್ಯುತ್ ಕೊಡ್ತಾ ಇದ್ದೀವಿ. ನಾವು ಗ್ಯಾರಂಟಿ ಯೋಜನೆ ಗಳು ಚುನಾವಣೆಗಾಗಿ ಮಾಡಿಲ್ಲ. ಇದು ಜನರಿಗಾಗಿ ಮಾಡಿರುವುದು. ಒಂದು ಕುಟುಂಬಕ್ಕೆ ನಾಲ್ಕರಿಂದ ಐದು ಸಾವಿರ ಹಣ ಸಿಗ್ತಾ ಇದೆ ಎಂದರು.

ಶಿವಮೊಗ್ಗದಲ್ಲಿ ಯುವನಿಧಿ ಕಾರ್ಯಕ್ರಮಕ್ಕೆ ಸಿಎಂ ಚಾಲನೆ

ಶಿವಮೊಗ್ಗ: ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಚಾಲನೆ ನೀಡಿದರು.

ಶಿವಮೊಗ್ಗದ ಫ್ರೀಡಂ ಪಾರ್ಕ್ (Freedom Park Shivamogga) ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಂಬಾಳೆ ಬಿಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಮೂಲಕ ಇನ್ಮುಂದೆ ಯುವನಿಧಿ (Yuvanidhi Scheme) ಯೋಜನೆಯಡಿ ಡಿಪ್ಲೋಮಾ ವ್ಯಾಸಂಗ ಮುಗಿಸಿರುವವರಿಗೆ 1,500 ರೂ., ಪದವಿ ಮುಗಿಸಿರುವವರಿಗೆ 3 ಸಾವಿರ ರೂ. ಹಣ ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗಲಿದೆ.

ಸರ್ಕಾರದಿಂದ ಹಣ ವರ್ಗಾವಣೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar), ಸಚಿವರಾದ ಮಧು ಬಂಗಾರಪ್ಪ, ಶರಣ ಪ್ರಕಾಶ ಪಾಟೀಲ್, ಕೆ.ಜೆ.ಜಾರ್ಜ್, ಮಂಕಾಳ ವೈದ್ಯ, ನಾಗೇಂದ್ರ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಬಿ.ಕೆ.ಸಂಗಮೇಶ್ವರ, ಶಾಂತನಗೌಡ, ಜೆಡಿಎಸ್ ಶಾಸಕಿ ಶಾರದ ಪೂರ್ಯನಾಯ್ಕ, ಬಿಜೆಪಿ ಶಾಸಕ ಚನ್ನಬಸಪ್ಪ, ಬಿ.ವೈ.ರಾಘವೇಂದ್ರ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಉತ್ತರಕನ್ನಡ ಫಲಾನುಭವಿಗಳು, ಕಾರ್ಯಕರ್ತರು ಹೀಗೆ ಸಹಸ್ರಾರು ಸಂಖ್ಯೆಯಲ್ಲಿ ಜನ ಭಾಗಿಯಾಗಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist