ಆಟದ ವಸ್ತು ಎಂದು ಮೈದಾನದಲ್ಲಿ ಬಿದ್ದಿದ್ದ ಬಾಂಬ್ ಎತ್ಕೊಂಡ 2ನೇ ತರಗತಿ ವಿದ್ಯಾರ್ಥಿ ಸಾವು..!
ಕೋಲ್ಕತ : ಶಾಲಾ ಆವರಣದಲ್ಲಿ ಬಾಂಬ್ ಸ್ಫೋಟಗೊಂಡು ಎರಡನೇ ತರಗತಿ ವಿದ್ಯಾರ್ಥಿ ಮೃತಪಟ್ಟಿದ್ದು ಹಲವು ವಿಧ್ಯಾರ್ಥಿಗಳು ಗಾಯಗೊಂಡಿರುವ ದುರಂತ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ವರದಿಯಾಗಿದೆ.
ಮೃತ ವಿದ್ಯಾರ್ಥಿಯನ್ನು ಮುಕ್ಲೇಸೂರ್ ರೆಹಮಾನ್ (7) ಎಂದು ಗುರುತಿಸಲಾಗಿದೆ. ಈ ಘಟನೆ ಮುರ್ಷಿದಾಬಾದ್ ಜಿಲ್ಲೆಯ ದೌಲತಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಚೋಯಾದಂಗದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿ ಎಂದಿನಂತೆ ದೌಲತಾಬಾದ್ನ ಚೋಯಾದಂಗ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿ ವ್ಯಾಸಾಂಗಕ್ಕೆ ತೆರಳಿದ್ದ, ಮಧ್ಯಾಹ್ನ ಊಟ ಮುಗಿಸಿ ಮಕ್ಕಳೊಂದಿಗೆ ಶಾಲೆಯ ಮೈದಾನದಲ್ಲಿ ಆಟ ಆಡಲು ತೆರಳಿದ್ದ. ಮೈದಾನದಲ್ಲಿ ಬಾಲ್ ಕಣ್ಣಿಗೆ ಬಿದ್ದಿದೆ ಅದನ್ನು ತೆಗೆದುಕೊಂಡು ಗೋಡೆಗೆ ಎಸೆದಿದ್ದೇ ತಡ ಬಾಂಬ್ ಸ್ಫೋಟವಾಗಿದೆ. ಇದರಿಂದ ಮುಕ್ಲೇಸೂರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆತನ ಸ್ನೇಹಿತರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಂಬ್ ಸ್ಫೋಟದ ಶಬ್ಧಕ್ಕೆ ಸುತ್ತಮುತ್ತಲಿನ ಜನರು ಸ್ಥಳಕ್ಕೆ ಆಗಮಿಸಿದ್ದಾರೆ. ಸ್ಥಳದಲ್ಲೇ ಅಸುನೂಗಿದ್ದ ಮುಕ್ಲೇಸೂರು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ದೌಲತಾಬಾದ್ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮುಗ್ಧ ಮಕ್ಕಳು ಓದುತ್ತಿರುವ ಶಾಲೆಯಲ್ಲಿ ಬಾಂಬ್ ಸ್ಫೋಟ ಆಗಿರುವುದಕ್ಕೆ ತೀವ್ರ ನೋವು ವ್ಯಕ್ತಪಡಿಸಿದ ಸ್ಥಳೀಯರು, ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ. ಮೃತ ಶವವನ್ನು ಮುರ್ಷಿದಾಬಾದ್ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ ಎಂದು ವರಿದಿಯಾಗಿದೆ.
15 ಭಾರತೀಯರಿದ್ದ ಸರಕು ಸಾಗಣೆ ಹಡಗು ಅಪಹರಣ
ನವದೆಹಲಿ: 15 ಮಂದಿ ಭಾರತೀಯರಿದ್ದ ಸರಕು ಹಡಗನ್ನು (Cargo Ship) ಸೊಮಾಲಿಯಾ ಬಳಿ ಅಪಹರಣ ಮಾಡಲಾಗಿದ್ದು, ಭಾರತೀಯ ನೌಕಾಪಡೆ (Indian Navy) ತೀವ್ರ ನಿಗಾ ಇರಿಸಿದೆ.
ಸೋಮಾಲಿಯಾ ಕರಾವಳಿಯ ಬಳಿ ಗುರುವಾರ ಸಂಜೆ ‘MV LILA NORFOLK’ ಎಂಬ ಸರಕು ಸಾಗಣೆ ಹಡಗನ್ನು ಅಪಹರಿಸಲಾಗಿದ್ದು, ಭಾರತೀಯ ನೌಕಾಪಡೆಯು ಅದರತ್ತ ಯುದ್ಧನೌಕೆಯನ್ನು ಕಳುಹಿಸಿ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಅಪಹರಿಸಿದ ಹಡಗಿನಲ್ಲಿ 15 ಭಾರತೀಯರಿದ್ದಾರೆ. ಸಿಬ್ಬಂದಿಯೊಂದಿಗೆ ಸಂವಹನವನ್ನು ಸ್ಥಾಪಿಸಲಾಗಿದೆ. ಸೇನಾ ಅಧಿಕಾರಿಗಳ ಪ್ರಕಾರ, ಸೊಮಾಲಿಯಾ ಕರಾವಳಿಯಲ್ಲಿ ಹಡಗನ್ನು ಅಪಹರಿಸಿರುವ ಬಗ್ಗೆ ಗುರುವಾರ ಸಂಜೆ ಮಾಹಿತಿ ಲಭಿಸಿದೆ. ಅಲ್ಲದೇ ಭಾರತೀಯ ನೌಕಾಪಡೆಯ ವಿಮಾನವು ಹಡಗಿನ ಮೇಲೆ ನಿಗಾ ಇರಿಸಿದೆ.