ಮಲ್ಪೆ : ಕೆಂಡಸೇವೆ ವೇಳೆ ಬೆಂಕಿ ಮೇಲೆ ನಡೆಯಲು ಹೋಗಿ ಆಯತಪ್ಪಿ ಬೆಂಕಿಯ ಮೇಲೆ ಬಿದ್ದ ಅಯ್ಯಪ್ಪ ಮಾಲಾಧಾರಿ; ಇಲ್ಲಿದೆ ವಿಡಿಯೋ
ಉಡುಪಿ ಜನವರಿ 4: ಅಯ್ಯಪ್ಪ ಮಾಲಾಧಾರಿಯೊಬ್ಬರು ಕೆಂಡಸೇವೆ ವೇಳೆ ಬೆಂಕಿ ಮೇಲೆ ನಡೆಯಲು ಹೋಗಿ ಆಯತಪ್ಪಿ ಬೆಂಕಿಯ ಮೇಲೆ ಬಿದ್ದ ಘಟನೆ ಮಲ್ಪೆಯಲ್ಲಿ ನಡೆದಿದ್ದು ಘಟನೆಯ ವಿಡಿಯೋ ವೈರಲ್ ಆಗಿದೆ.
ಮಲ್ಪೆಯ ಅಯ್ಯಪ್ಪ ಮಂದಿರದ ವಾರ್ಷಿಕೋತ್ಸವ ವೇಳೆ ಅವಘಡ ನಡೆದಿದ್ದು ಕೆಂಡ ಹಾಯುವ ವೇಳೆ ಆಯ ತಪ್ಪಿ ಮಾಲಾಧಾರಿ ವ್ಯಕ್ತಿ ಬೆಂಕಿಗೆ ಬಿದ್ದಿದ್ದಾರೆ. ಸ್ಥಳೀಯರ ಮೊಬೈಲ್ ನಲ್ಲಿ ವಿಡಿಯೋ ಸೆರೆಯಾಗಿದ್ದು ಆಯತಪ್ಪಿ ಬೀಳುತ್ತಿದ್ದಂತೆ ಜನ ಹೌಹಾರಿದ್ದಾರೆ.
ಕೂಡಲೇ ಇತರೇ ಮಾಲಾಧಾರಿಗಳು ಆ ವ್ಯಕ್ತಿಯನ್ನು ಎತ್ತಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬರಿ ಮೈಯಲ್ಲಿ ಕೆಂಡ ಹಾಯುತ್ತಿದ್ದಾಗ ಘಟನೆ ನಡೆದಿದ್ದರಿಂದ ಮೈಯಲ್ಲಿ ಸುಟ್ಟ ಗಾಯಗಳಾಗಿವೆ.
ಇಲ್ಲಿದೆ ವಿಡಿಯೋ 🔥⚡
ಉಡುಪಿ – ಪಿಜಿಯಿಂದ ಹೊರ ಹೋಗಿದ್ದ ಯೋಗಿತಾ ವಾಪಾಸ್ ಬಾರದೆ ನಾಪತ್ತೆ…!!
ಉಡುಪಿ, ಜನವರಿ : ಉಡುಪಿ ತಾಲೂಕು 76 ಬಡಗಬೆಟ್ಟು ಗ್ರಾಮದ ಪಿಜಿಯೊಂದರಲ್ಲಿ ವಾಸವಾಗಿದ್ದ ಯೋಗಿತಾ (20) ಎಂಬ ಯುವತಿಯು ಜನವರಿ 2 ರಂದು ಪಿಜಿಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.
157 ಸೆಂ.ಮೀ ಎತ್ತರ, ಎಣ್ಣೆಕಪ್ಪು ಮೈಬಣ್ಣ, ದಪ್ಪ ಮೈಕಟ್ಟು, ದುಂಡುಮುಖ ಹೊಂದಿದ್ದು, ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.