ಕುತೂಹಲ ಮೂಡಿಸಲಿರುವ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥೆಯ ಮೂಲಕ ತೆರೆಗೆ ಅಪ್ಪಳಿಸಲಿದೆ ಮಂಗಳೂರಿನ ಚೈತ್ರಾ ಶೆಟ್ಟಿ, ಮೋಹನ್ ಶೇನಿ ಮುಖ್ಯ ಪಾತ್ರದ ಚಲನಚಿತ್ರ ಸಾ೦ಕೇತ್
ಕನ್ನಡ ಚಲನಚಿತ್ರದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿರುವ ಯುವ ತಂಡ ಹೊಸ ಚಲನಚಿತ್ರವನ್ನು ತೆರೆಗೆ ಅಪ್ಪಳಿಸಲು ಸಿದ್ಧವಾಗಿ ನಿಂತಿದೆ. ರಿವರ್ ಸ್ಟೀಮ್ ಪ್ರೊಡಕ್ಷನ್ ಅಡಿಯಲ್ಲಿ ಮೂಡಿ ಬಂದಿರುವ ಕನ್ನಡ ಚಲನಚಿತ್ರ ಸ೦ಕೇತ್ ವಿಭಿನ್ನ ಕುತೂಹಲ ಭರಿತ ಕಥಾ ಹ೦ದರವನ್ನು ಹೊಂದಿಕೊಂಡಿದೆ.
ಪ್ರತಿಭಾವಂತ ನಟಿ ಮಂಗಳೂರಿನ ಚೈತ್ರಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿರುವ ಈ ಚಲನಚಿತ್ರ ಹೊಸ ಕನ್ನಡ ಚಲನಚಿತ್ರ ರಂಗದಲ್ಲಿ ಹೊಸ ಪ್ರಯೋಗಕ್ಕೆ ನಾಂದಿ ಹಾಡಿದೆ. ಉದಯೋನ್ಮುಖ ನಟ ವಿಕ್ಕಿ ರಾವ್ ನಟಿಸಿರುವ ಈ ಚಲನಚಿತ್ರವನ್ನು ಮಂಗಳೂರು ಮೂಲದ ಜೋಶ್ನಾ ರಾಜ್ ನಿರ್ದೇಶಿಸಿದ್ದಾರೆ.
ರೂಪಶ್ರೀ ವಾರ್ಕಡಿ, ಮೋಹನ್ ಶೇನಿ ಗಮನಸೆಳೆಯುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಜನವರಿ ತಿಂಗಳು ತೆರೆಗೆ ಅಪ್ಪಳಿಸಲು ಚಲನಚಿತ್ರ ಸಿದ್ಧವಾಗಿ ನಿಂತಿದೆ.
ಪ್ರತಿಭಾವಂತ ಕಲಾವಿದರು ಮನೋಜ್ಞವಾಗಿ ಅಭಿನಯಿಸಿರುವ ಕುತೂಹಲ ಭರಿತ ಈ ಚಲನಚಿತ್ರ ಕನ್ನಡ ಚಲನಚಿತ್ರ ರಂಗದಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡುವುದರಲ್ಲಿ ಸಂಶಯವಿಲ್ಲ ಎನ್ನಲಾಗುತ್ತಿದೆ.
ಇಬ್ಬರು ಮೂವರಾಗುತ್ತಿದ್ದೇವೆ, ಅಮ್ಮನಾಗುತ್ತಿರುವ ಸಿಹಿಸುದ್ದಿ ಹಂಚಿಕೊಂಡ ‘ಹೆಬ್ಬುಲಿ’ ನಟಿ
ಕನ್ನಡದ ‘ಹೆಬ್ಬುಲಿ’ (Hebbuli) ನಟಿ ಅಮಲಾ ಪೌಲ್ (Amala Paul) ಅವರು ತಮ್ಮ ಅಭಿಮಾನಿಗಳಿಗೆ ಅಮ್ಮನಾಗುತ್ತಿರುವ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸ್ಪೆಷಲ್ ಫೋಟೋ ಮೂಲಕ ಸಿಹಿಸುದ್ದಿ ಹಂಚಿಕೊಂಡಿದ್ದಾರೆ.
ಇಬ್ಬರು ಮೂವರಾಗುತ್ತಿದ್ದೇವೆ’ ಎಂದು ನಟಿ ಅಮಲಾ ಬೇಬಿ ಬಂಪ್ (Baby Bump) ಫೋಟೋ ಶೇರ್ ಮಾಡಿ ಬರೆದುಕೊಂಡಿದ್ದಾರೆ. ನಟಿಯ ಪೋಸ್ಟ್ಗೆ ನಟ-ನಟಿಯರು, ಅಭಿಮಾನಿಗಳು ಶುಭಕೋರಿದ್ದಾರೆ.
‘ಹೆಬ್ಬುಲಿ’ ನಟಿ ಅಮಲಾ ಪೌಲ್ ಅವರು 2023ರ ನವೆಂಬರ್ನಲ್ಲಿ ಜಗತ್ ದೇಸಾಯಿ ಜೊತೆ ಕೊಚ್ಚಿಯಲ್ಲಿ ಮದುವೆಯಾದರು. ಇದು ಅಮಲಾ 2ನೇ ಮದುವೆಯಾಗಿತ್ತು. ನಿರ್ದೇಶಕ ವಿಜಯ್ ಜೊತೆಗಿನ ಡಿವೋರ್ಸ್ ನಂತರ ಜಗತ್ ಜೊತೆ ಹಲವು ವರ್ಷಗಳು ಡೇಟಿಂಗ್ ಮಾಡಿದ್ದರು ಅಮಲಾ.
ಕನ್ನಡ, ತಮಿಳು ಸೇರಿದಂತೆ ಬಹುಭಾಷೆಯಲ್ಲಿ ನಾಯಕಿಯಾಗಿ ನಟಿಸುತ್ತಾ ಅಪಾರ ಅಭಿಮಾನಿಗಳ ಗಳಿಸಿದ್ದಾರೆ. ಮದುವೆ ನಂತರವೂ ಮತ್ತೆ ಸಿನಿಮಾ ಮಾಡುತ್ತಾರಾ ಅಮಲಾ ಈ ಬಗ್ಗೆ ಸ್ಪಷ್ಟನೆ ಇಲ್ಲ.