ಶನಿವಾರ, ಮಾರ್ಚ್ 15, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಮಂಗಳೂರು :ಹಲವು ಪ್ರಕರಣಗಳಲ್ಲಿದ್ದು ಡ್ರಗ್ಸ್ ಮಾರುತ್ತಿದ್ದ ಆರೋಪಿಗಳು 19 ಗ್ರಾಂ ಎಮ್​ಡಿಎಮ್ಎ ಸಹಿತ ಅರೆಸ್ಟ್..!

Twitter
Facebook
LinkedIn
WhatsApp
ಮಂಗಳೂರು :ಹಲವು ಪ್ರಕರಣಗಳಲ್ಲಿದ್ದು ಡ್ರಗ್ಸ್ ಮಾರುತ್ತಿದ್ದ ಆರೋಪಿಗಳು 19 ಗ್ರಾಂ ಎಮ್​ಡಿಎಮ್ಎ ಸಹಿತ ಅರೆಸ್ಟ್..!

ಮಂಗಳೂರು, ಜನವರಿ 03: ನಗರದಲ್ಲಿಡ್ರಗ್ಸ್ (Drugs) ಮಾರುತ್ತಿದ್ದ ಆರೋಪಿಗಳನ್ನು ಕಂಕನಾಡಿ ಪೊಲೀಸರು (Police) ಮಂಗಳೂರಿನ (Mangaluru) ಪಡೀಲು ರೈಲ್ವೇ ಬ್ರಿಡ್ಜ್ ಬಳಿ ಬಂಧಿಸಿದ್ದಾರೆ. ಬಜಾಲ್ ನಿವಾಸಿ ಅಶ್ಪಕ್ ಅಲಿಯಾಸ್ ಜುಟ್ಟು ಅಶ್ಪಕ್ (27), ಕಾಟಿಪಳ್ಳ ನಿವಾಸಿ ಉಮ್ಮರ್ ಫಾರೂಕ್ ಇರ್ಫಾನ್ (26) ಬಂಧಿತ ಆರೋಪಿಗಳು. ಕುಖ್ಯಾತ ಕ್ರಿಮಿನಲ್ ಹಿನ್ನೆಲೆ ಉಳ್ಳವರಾದ ಆರೋಪಿಗಳು ನಗರದಲ್ಲಿ ಡ್ರಗ್ಸ್​ ಮಾರುತ್ತಿದ್ದರು. ಈ ವಿಚಾರ ತಿಳಿದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳ ಬಳಿ ಇದ್ದ 19 ಗ್ರಾಂ ಎಮ್​ಡಿಎಮ್ಎ ಮತ್ತು 1.92 ಲಕ್ಷ ಮೌಲ್ಯದ ಸ್ವತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜುಟ್ಟು ಅಶ್ಪಕ್ ಮೇಲೆ 6 ಠಾಣೆಗಳಲ್ಲಿ ಕೊಲೆ ಯತ್ನ, ದರೋಡೆ, ಸುಲಿಗೆ, ಗಲಾಟೆ ಸೇರಿದಂತೆ 12 ವಿವಿಧ ಪ್ರಕರಣಗಳು ದಾಖಲಾಗಿದೆ. ಉಮ್ಮರ್ ಫಾರೂಕ್ ಮೇಲೆ ಕೊಲೆ ಯತ್ನ, ದರೋಡೆ, ಸುಲಿಗೆ, ಸರಗಳ್ಳತನ, ದೊಂಬಿ, ವಾಹನ ಕಳ್ಳತನ ಸೇರಿದಂತೆ 12 ಪೊಲೀಸ್ ಠಾಣೆಗಳಲ್ಲಿ 25 ಪ್ರಕರಣಗಳು ದಾಖಲಾಗಿವೆ.

ಕೊನೆಗೂ ಸಿಕ್ಕಿ ಬಿದ್ದ ಕೊಲೆಗಾರ: ಹಣ ಪಡೆದವನಿಂದಲೆ ಹತ್ಯೆಯಾಗಿದ್ದ ಧಾರವಾಡದ ನಿವೃತ್ತ ಶಿಕ್ಷಕಿ

ಆಕೆ ಅದೆಷ್ಟೋ ವಿದ್ಯಾರ್ಥಿಗಳ ಪಾಲಿಗೆ ದಾರಿದೀಪವಾದ ಶಿಕ್ಷಕಿ. ನಿವೃತ್ತಿ ನಂತರ ಆಕೆ ತನ್ನ ಪಾಡಿಗೆ ಬದುಕಿದ್ದರೆ ಇಷ್ಟೊತ್ತಿಗೆ ಸುಂದರ ಜೀವನ ಅವಳದಾಗುತ್ತಿತ್ತು. ದುಡ್ಡಿನ ಆಸೆಗೆ ಬಿದ್ದ ಆಕೆ ದುಡ್ಡು ಪಡೆದವನಿಂದಲೇ ಭೀಕರವಾಗಿ ಹತ್ಯೆಯಾಗಿದ್ದಾಳೆ (Murder). ಅಷ್ಟಕ್ಕೂ ಯಾರು ಆಕೆ? ಆಕೆಯ ಹತ್ಯೆಗೆ ಕಾರಣ ಏನು ಗೊತ್ತಾ? ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ. ಹೀಗೆ ಖಾಲಿ ಖಾಲಿ ಮನೆ; ಮನೆ ಎದುರು ನೆಮ್ಮದಿ ಎನ್ನುವ ಬೋರ್ಡ್; ಆದ್ರೆ ಆ ನೆಮ್ಮದಿಯೇ ಇಂದು ದುಡ್ಡಿನ ಆಸೆಗೆ ಜೀವನ ಅಂತ್ಯಗೊಳಿಸಿದೆ; ಧಾರವಾಡದ ನಗರದ (Dharwad) ಓಂ ನಗರ ಬಡಾವಣೆಯಲ್ಲಿರುವ ಈ ನೆಮ್ಮದಿ ಎನ್ನುವ ಮನೆಯಲ್ಲಿ ನಿವೃತ್ತ ಶಿಕ್ಷಕಿ (Retired teacher)ಗಿರಿಜಾ ನಡೂರಮಠ ಏಕಾಂಗಿ ಜೀವನ ನಡೆಸುತ್ತಿದ್ದರು.

ಗಂಡ ಮಕ್ಕಳು ಇಲ್ಲದೆ ಏಕಾಂಗಿಯಾಗಿದ್ದ ಗಿರಿಜಾ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದರು. ಇತ್ತೀಚೆಗೆ ನಿವೃತ್ತಿಯಾಗಿ ಜೀವನ ನಡೆಸುತ್ತಿದ್ದರು. ಆದ್ರೆ ಡಿಸಂಬರ್ 15ರಂದು ಗಿರಿಜಾ ಸಾವನ್ನಪ್ಪಿದರು. ಆ ಸಾವು ಮೊದಲು ಸಹಜ ಅಂತಲೇ ಭಾವಿಸಲಾಗಿತ್ತು. 8 ದಿನಗಳ ಬಳಿಕ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಮನೆಯಲ್ಲಿ ದೇಹ ಸಿಕ್ಕಿತ್ತು. ಆದ್ರೆ ಯಾವಾಗ ಬಡ್ಡಿ ವ್ಯವಹಾರ ಗೊತ್ತಾಗುತ್ತೋ ಆಗ ಇದು ಮರ್ಡರ್ ಅನ್ನೋದು ತನಿಖೆಯ ವೇಳೆ ಗೊತ್ತಾಗಿದೆ. ಅಮರಗೋಳ ಬಡಾವಣೆಯ ಮಂಜುನಾಥ್ ದಂಡಿನ ಎನ್ನುವ ವ್ಯಕ್ತಿಗೆ 10 ಲಕ್ಷ ನೀಡಿದ್ದ ಗಿರಿಜಾ ನಿತ್ಯ ಹಣ ವಾಪಸ್ ನೀಡುವಂತೆ ಒತ್ತಾಯಿಸಿದ್ದಾರೆ. ಆದ್ರೆ ಅದಕ್ಕೆ ಒಪ್ಪದ ಮಂಜುನಾಥ್ ಮನೆಗೆ ಬಂದು ನೀರು ಕೇಳುವ ನೆಪದಲ್ಲಿ ಗಿರಿಜಾ ಹಾಕಿದ್ದ ವೇಲ್ ನಿಂದಲೆ ಕುತ್ತಿಗೆ ಹಿಸುಕಿ ಹತ್ಯೆ ಮಾಡಿದ್ದಾನೆ ಎಂದು ರೇಣುಕಾ ಸುಕುಮಾರ, ಹು-ಧಾ ನಗರ ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.

ಹಲವು ವರ್ಷಗಳಿಂದ ಗಿರಿಜಾ ತಮ್ಮ ಸುತ್ತಮುತ್ತಲೂ ಹಾಗೂ ಇತರರ ಜೊತೆಯಲ್ಲಿ ಬಡ್ಡಿ ವ್ಯವಹಾರ ಮಾಡುತ್ತಲೇ ಬಂದಿದ್ದಾರೆ. ನಿವೃತ್ತಿ ಬಳಿಕ ಬಡ್ಡಿ ವ್ಯವಹಾರದ ಮೂಲಕ ಹಣ ಗಳಿಸುವ ಗೋಜು ಗೀಳಿಗೆ ಬಿದ್ದ ಗಿರಿಜಾ ತಮ್ಮ ಹಣವನ್ನು ಬಡ್ಡಿ ಮೂಲಕ ಪಡೆಯುವ ಇರಾದೆಯಿಂದಲೆ ಮಂಜುನಾಥ್ ಗೆ ಪದೇ ಪದೇ ಕರೆ ಮಾಡಿ ಹಣ ಕೇಳಿದ್ದಾರೆ.

ಆದ್ರೆ ಹಣ ಕೊಡಬೇಕಿದ್ದ ಮಂಜುನಾಥ್ ಹತ್ಯೆ ಮಾಡಿ ಯಾವುದೇ ಒಂದು ಒಂದು ಕ್ಲೂ ಬಿಡದೆ ಎಸ್ಕೇಪ್ ಆಗಿದ್ದ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಧಾರವಾಡದ ವಿದ್ಯಾಗಿರಿಯ ಪೊಲೀಸರು ಪೋಸ್ಟ್ ಮಾರ್ಟಂ ಗೆ ದೇಹವನ್ನ ಕಳಿಸುತ್ತಾರೆ. ಆಗ ಇದು ಸಹಜ ಸಾವು ಅಲ್ಲ, ಪ್ರೀ ಪ್ಲಾನ್ಡ್​​​ ಮರ್ಡರ್ ಅನ್ನೋದು ಗೊತ್ತಾಗುತ್ತೆ. ಸಾವನ್ನಪ್ಪಿ 8 ದಿನಗಳ ಬಳಿಕ ಮೃತದೇಹ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದ್ದು, ಅಕ್ಕಪಕ್ಕದವರಿಗೆ ವಾಸನೆ ಬಡಿದಿದೆ. ಅಲ್ಲಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗಲೇ ಇಲ್ಲೊಂದು ದೇಹ ಇದೆ ಅಂತ ಗೊತ್ತಾಗಿದೆ.

ಒಟ್ಟಾರೆ ಹಿಂದೆ ಮುಂದೆ ಯಾರೂ ಇಲ್ಲದೆ ಏಕಾಂಗಿ ಜೀವನ ನಡೆಸುತ್ತಿದ್ದ ಗಿರಿಜಾ ನಿವೃತ್ತಿ ಬಳಿಕ ಅದೇ ಹಣದಲ್ಲಿ ಚೆಂದದ ಬದುಕು ಸಾಗಿಸಬಹುದಿತ್ತು. ಆದ್ರೆ ಹಣದ ಆಸೆಗೆ ಬಿದ್ದಿದ್ದ ಶಿಕ್ಷಕಿ ಈ ರೀತಿಯಾಗಿ ಹಣ ಪಡೆದವನಿಂದಲೆ ಹತ್ಯೆಯಾಗಿದ್ದು ವಿಪರ್ಯಾಸವೇ ಸರಿ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist