ಬಳ್ಳಾರಿ : ಸಿನಿಮಾ ಸ್ಟೈಲ್‍ನಲ್ಲಿ ಕಾರಿನಲ್ಲಿ ಮದುವೆಯಾದ ಪ್ರೇಮಿಗಳು

ಬಳ್ಳಾರಿ (ಜ.03): ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕಿರಾತಕ ಸಿನಿಮಾ ಸ್ಟೈಲ್‍ನಲ್ಲಿ ಪೇಮಿಗಳು ಕಾರಿನಲ್ಲಿ ಮದುವೆಯಾದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಹೌದು! ಕಿರಾತಕ ಸಿನಿಮಾ ಸ್ಟೈಲ್‌ನಲ್ಲಿ ಪ್ರೇಮಿಗಳು ಕಾರಿಯಲ್ಲಿ ಹಾರ ಬದಲಿಸಿ ಮದ್ವೆಯಾಗಿದ್ದಾರೆ. ಶಿವಪ್ರಸಾದ್ ಹಾಗೂ ಅಮೃತಾ ಪ್ರೇಮ ವಿವಾಹದ ಜೋಡಿ. ಯುವತಿ ಪೋಷಕರು ಪ್ರೇಮ ವಿವಾಹಕ್ಕೆ ವಿರೋಧ ವ್ಯಕ್ತಿಪಡಿದ್ದರು. ಇಬ್ಬರು ಬೇರೆ ಬೇರೆ ಜಾತಿಯವರಾದ್ದರಿಂದ ಪೋಷಕರು ಪ್ರೇಮ ವಿವಾಹಕ್ಕೆ ಒಪ್ಪಿಗೆ ನೀಡಿರಲಿಲ್ಲ.
ಕೊಪ್ಪಳ ಮೂಲದ ಯುವತಿ ಅಮೃತಾ ಹಾಗೂ ಬಳ್ಳಾರಿಯ ತೆಕ್ಕಲಕೋಟೆಯ ಯುವಕ ಶಿವಪ್ರಸಾದ್ ಇಬ್ಬರು ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಇದಕ್ಕೆ ಯುವತಿಯ ಪೋಷಕರ ವಿರೋಧವಿತ್ತು. ಹುಡುಗಿ ಮೇಲಿನ ಜಾತಿ, ಹುಡುಗ ಕೆಳ ಜಾತಿ ಹಿನ್ನಲೆ ಪ್ರೇಮ ವಿವಾಹಕ್ಕೆ ಪೋಷಕರಿಂದ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಯುವತಿ ಅಮೃತಾ ಒಂದು ಬಾರಿ ಪೋಷಕರು ಬೇಕೆಂದು, ಮತ್ತೊಂದು ಬಾರಿ ಪ್ರೇಮಿಬೇಕೆಂದು ದ್ವಂದ್ವ ಹೇಳಿಕೆ ನೀಡಿದ್ದಾಳೆ. ಅಮೃತಾ ದ್ವಂದ್ವ ಹೇಳಿಕೆ ಹಿನ್ನಲೆ ಶಾಂತಿಧಾಮ ಮುಂದೆ ಯುವತಿ ಹಾಗೂ ಪ್ರೇಮಿಯ ನಡುವೆ ಹೈಡ್ರಾಮವೇ ನಡೆದಿದೆ.
ಸಿನಿಮೀಯ ರೀತಿಯಲ್ಲಿ ಯುವತಿಯನ್ನ ಯುವಕ ಎಳೆದೊಯ್ಯಲು ಯತ್ನಿಸಿದ್ದರಿಂದ ಕೆಲಕಾಲ ಸಾಂತ್ವನ ಕೇಂದ್ರದ ಮುಂದೆ ಗೊಂದಲ ವಾತಾವರಣ ಉಂಟಾಗಿತ್ತು. ಜೊತೆಗೆ ಇಬ್ಬರೂ ಪೋಷಕರ ನಡುವೆ ಗಲಾಟೆ ಕೂಡ ನಡೆದಿದೆ. ಬಲವಂತವಾಗಿ ಅಮೃತಾಳನ್ನು ಪೋಷಕರು ಕಾರಿನಲ್ಲಿ ಕರೆದೊಯ್ಯುತ್ತಿದ್ದಂತೆ ಅಮೃತಾ ‘ಗಂಡ ಬೇಕು’ ಅಂತಾ ಕಿರುಚಾಡಿದ್ದಾಳೆ. ಈ ವೇಳೆ ಪ್ರೇಮಿ ಕಾರು ಅಡ್ಡಗಟ್ಟಿ ಪ್ರೇಯಸಿಗಾಗಿ ಪೋಷಕರ ಮುಂದೆ ಗೋಗರೆದಿದ್ದಾನೆ. ಇದೆಲ್ಲವೂ ಪೊಲೀಸರ ಮುಂದೆಯೇ ನಡೆದಿದೆ. ಶಿವಪ್ರಸಾದ್ ಹೆಂಡ್ತಿನೂ ಬೇಕು, ರಕ್ಷಣೆನೂ ಬೇಕು ಇಡೀ ರಾತ್ರಿ ಸಾಂತ್ವನ ಕೇಂದ್ರ ಮುಂದೆ ಕುಳಿತು ಪಟ್ಟು ಹಿಡಿದಿದ್ದರಿಂದ ಅಮೃತಾ ಘೋಷಕರು ಆಕೆಯನ್ನು ಸಾಂತ್ವನ ಕೇಂದ್ರದಲ್ಲಿ ಬಿಟ್ಟು ಹೋಗಿದ್ದಾರೆ.
ಕಾಂಗ್ರೆಸ್ ಸೇರ್ಪಡೆಗೆ 15 ಶಾಸಕರು ಸಿದ್ಧ: ಸಚಿವ ಚಲುವರಾಯಸ್ವಾಮಿ
ಬೆಂಗಳೂರು (ಜ.03): ಆಪರೇಷನ್ ಕಮಲಕ್ಕೆ ಒಳಗಾಗುವವರು ನಮ್ಮಲ್ಲಿ ಯಾರೂ ಇಲ್ಲ. ಬಿಜೆಪಿ ಮತ್ತು ಜೆಡಿಎಸ್‌ನ ಹತ್ತು-ಹದಿನೈದು ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಲು ಸಿದ್ಧರಿದ್ದಾರೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದರು. ಆಪರೇಷನ್ ಕಮಲಕ್ಕೆ ನಮ್ಮಲ್ಲಿನ ಒಬ್ಬ ಶಾಸಕರೂ ಒಳಗಾಗುವುದಿಲ್ಲ. ಐದು ವರ್ಷವೂ ಕಾಂಗ್ರೆಸ್ ಆಡಳಿತ ನಡೆಸಲಿದೆ. ಲೋಕಸಭಾ ಚುನಾವಣೆಯ ಮೊದಲು ಅಥವಾ ನಂತರ ಬಿಜೆಪಿ, ಜೆಡಿಎಸ್‌ನ ಹತ್ತು-ಹದಿನೈದು ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಸಿದ್ಧರಾಗಿದ್ದಾರೆ.
ಅವರಿಗೆ ಅನುಕೂಲವಾದಾಗ ಬರಲಿ ಎಂದು ನಾವು ಒತ್ತಾಯ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಆರ್.ಅಶೋಕ್ ವಿಧಾನ ಸಭೆ ಪ್ರತಿಪಕ್ಷ ನಾಯಕ ಹಾಗೂ ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಬಿಜೆಪಿಯಲ್ಲಿ ಹಲವು ಶಾಸಕರಿಗೆ ಅಸಮಾಧಾನ ಉಂಟಾಗಿದೆ. ಅಸಮಾಧಾನಿತರು ಪಕ್ಷ ತ್ಯಜಿಸಬಾರದು ಎಂದು ಇವರು ಸರ್ಕಾರ ಪತನದ ಹೇಳಿಕೆ ನೀಡುತ್ತಿದ್ದಾರೆ. 130 ಸ್ಥಾನ ಇರುವ ನಾವು ಕಿವಿಗೆ ಹೂ ಮೂಡಿಸಿಕೊಂಡಿದ್ದೇವಾ. ರಾಜಕಾರಣದ ಪ್ರಜ್ಞೆ ಕಾಂಗ್ರೆಸಿಗರಿಗೆ ಇಲ್ಲವಾ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಿಂದ 7764 ಮೆಟ್ರಿಕ್ ಟನ್ ಸಿರಿಧಾನ್ಯ ರಫ್ತು: 2022-23 ನೇ ಸಾಲಿನಲ್ಲಿ ರಾಜ್ಯದಿಂದ 36 ಕೋಟಿ ರು. ಮೌಲ್ಯದ 7764 ಮೆಟ್ರಿಕ್ ಟನ್ ಸಿರಿಧಾನ್ಯ ಮತ್ತು ಸಿರಿಧಾನ್ಯ ಮೌಲ್ಯವರ್ಧಿತ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ. ಅಮೆರಿಕಾ, ಆಸ್ಟ್ರೇಲಿಯಾ, ಯುಎಇ, ಕೆನಡಾ, ಕತಾರ್, ಥಾಯ್ಲೆಂಡ್, ಸಿಂಗಾಪುರ ಮುಂತಾದವು ಸಿರಿಧಾನ್ಯಗಳ ಪ್ರಮುಖ ರಫ್ತು ತಾಣಗಳಾಗಿವೆ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು. ಜ.5 ರಿಂದ 7 ರವರೆಗೂ ಅರಮನೆ ಮೈದಾನದಲ್ಲಿ ಆಯೋಜಿಸಲಿರುವ ಸಿರಿಧಾನ್ಯ ಮೇಳದ ಪೂರ್ವಭಾವಿಯಾಗಿ ಹೋಟೆಲ್‌ವೊಂದರಲ್ಲಿ ಆಯೋಜಿಸಿದ್ದ ‘ರಫ್ತುದಾರರ ಸಮಾವೇಶ’ಕ್ಕೆ ರಾಗಿ ಸಸಿಗಳಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.