ಸೋಮವಾರ, ಡಿಸೆಂಬರ್ 23, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಮಗನ ಸಾಧನೆ ನೋಡೋಕೆ ಅವನ ತಂದೆ ನಮ್ಮೊಂದಿಗಿಲ್ಲ: ಮೈಸೂರಿನ ಶಿಲ್ಪಿ ಯೋಗಿರಾಜ್‌ ತಾಯಿ ಮನದಾಳದ ಮಾತು

Twitter
Facebook
LinkedIn
WhatsApp
ಮಗನ ಸಾಧನೆ ನೋಡೋಕೆ ಅವನ ತಂದೆ ನಮ್ಮೊಂದಿಗಿಲ್ಲ: ಮೈಸೂರಿನ ಶಿಲ್ಪಿ ಯೋಗಿರಾಜ್‌ ತಾಯಿ ಮನದಾಳದ ಮಾತು
– ಮೈಸೂರಿನ ಯೋಗಿರಾಜ್‌ ಕೆತ್ತಿರುವ ರಾಮನ ಮೂರ್ತಿ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ

ನವದೆಹಲಿ: ಜ.22 ರಂದು ಅಯೋಧ್ಯೆ (Ayodhya) ರಾಮಮಂದಿರದಲ್ಲಿ (Ram Mandir) ನಡೆಯಲಿರುವ ಪ್ರಾಣ ಪ್ರತಿಷ್ಠಾಪನೆಗೆ ಮೈಸೂರಿನ ಶಿಲ್ಪಿ ಯೋಗಿರಾಜ್‌ ಅರುಣ್‌ ಕೆತ್ತನೆ ಮಾಡಿರುವ ಮೂರ್ತಿ ಆಯ್ಕೆಯಾಗಿದೆ. ಇದಕ್ಕೆ ಯೋಗಿರಾಜ್‌ ತಾಯಿ ಸಂತಸ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಸೋಮವಾರ ಎಕ್ಸ್‌ ಖಾತೆಯಲ್ಲಿ ಈ ವಿಚಾರವನ್ನು ದೃಢಪಡಿಸಿದ್ದಾರೆ. “ಎಲ್ಲಿ ರಾಮನೋ ಅಲ್ಲಿ ಹನುಮನು”. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ಕೆ ವಿಗ್ರಹ ಆಯ್ಕೆ ಅಂತಿಮಗೊಂಡಿದೆ. ನಮ್ಮ ನಾಡಿನ ಹೆಸರಾಂತ ಶಿಲ್ಪಿ ನಮ್ಮ ಹೆಮ್ಮೆಯ ಯೋಗಿರಾಜ್‌ ಅರಣ್‌ (Yogiraj Arun) ಅವರು ಕೆತ್ತಿರುವ ಶ್ರೀರಾಮನ ವಿಗ್ರಹ ಪುಣ್ಯಭೂಮಿ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ. ರಾಮ ಹನುಮರ ಅವಿನಾಭಾವ ಸಂಬಂಧಕ್ಕೆ ಇದು ಮತ್ತೊಂದು ನಿದರ್ಶನ. ಹನುಮನ ನಾಡು ಕರ್ನಾಟಕದಿಂದ ರಾಮಲಲ್ಲಾನಿಗೆ ಇದೊಂದು ಮಹತ್ವಪೂರ್ಣ ಸೇವೆ ಎಂದರೆ ತಪ್ಪಾಗಲಾರದು ಎಂದು ಜೋಶಿ ಟ್ವೀಟ್‌ ಮಾಡಿದ್ದರು.

ಯೋಗಿರಾಜ್ ಅವರ ತಾಯಿ ಸರಸ್ವತಿ, ನನ್ನ ಮಗ 6 ತಿಂಗಳ ಹಿಂದೆಯೇ ಅಯೋಧ್ಯೆಗೆ ಹೋಗಿದ್ದಾನೆ. ಅವನ ಬೆಳವಣಿಗೆ ಕಂಡು ಖುಷಿಯಾಗಿದೆ. ಈ ಸಾಧನೆ ನೋಡುವುದಕ್ಕೆ ಅವನ ತಂದೆ ನಮ್ಮೊಂದಿಗೆ ಇಲ್ಲದಿರುವುದು ಬೇಸರದ ಸಂಗತಿ ಎಂದು ಮಾತನಾಡಿದ್ದಾರೆ.

ಇದು ನಮಗೆ ಅತ್ಯಂತ ಸಂತೋಷದ ಕ್ಷಣ. ಮಗ ಶಿಲ್ಪ ಕೆತ್ತುವುದನ್ನು ನೋಡಲು ಬಯಸಿದ್ದೆ. ಆದರೆ ಅದು ಆಗಲಿಲ್ಲ. ಪ್ರತಿಷ್ಠಾಪನೆ ದಿನ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾನೆ. ಆ ದಿನ ನಾನು ಅಯೋಧ್ಯೆಗೆ ಹೋಗುತ್ತೇನೆ ಎಂದು ಖುಷಿ ಹಂಚಿಕೊಂಡಿದ್ದಾರೆ. 

ಇದೇ ಜ.22 ರಂದು ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾಗಲಿದ್ದಾರೆ.

ಅಯೋಧ್ಯೆ ರಾಮಮಂದಿರದ 24‌ ಅರ್ಚಕರಲ್ಲಿ ಇಬ್ಬರು ಎಸ್ಸಿ, ಓರ್ವ ಒಬಿಸಿ ಅರ್ಚಕರು, ಮೂರು ತಿಂಗಳ ಗುರುಕುಲ ತರಬೇತಿ

ಅಯೋಧ್ಯೆ(Ayodhya) ರಾಮಜನ್ಮಭೂಮಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮಂದಿರಕ್ಕೆ‌ 24 ಅರ್ಚಕರನ್ನು ನೇಮಕ ಮಾಡಲಾಗಿದೆ. ಇವರಲ್ಲಿ ಇಬ್ಬರು ಎಸ್‌ಸಿ ಮತ್ತು ಒಬ್ಬರು ಒಬಿಸಿ ಸಮುದಾಯದವರಾಗಿದ್ದು ಮೂರು ತಿಂಗಳ ತರಬೇತಿ ನಂತರ ಈ ಅರ್ಚಕರು ನಿಯೋಜನೆಗೊಳ್ಳಲಿದ್ದಾರೆ. ತರಬೇತಿಯಲ್ಲಿರುವ ಅರ್ಚಕರು ಗುರುಕುಲದ ನಿಯಮಗಳನ್ನು ಪಾಲಿಸುತ್ತಿದ್ದಾರೆ.

ರಾಮಲಲ್ಲಾ‌ ಪೂಜೆಗೆ ಆಯ್ಕೆಯಾಗಿರುವ ಅರ್ಚಕರು ಮೊಬೈಲ್ ಫೋನ್ ಬಳಸುವಂತಿಲ್ಲ ಅಥವಾ ಯಾವುದೇ ಹೊರಗಿನವರೊಂದಿಗೆ ಸಂಪರ್ಕ ಹೊಂದುವಂತಿಲ್ಲ. ರಾಮಮಂದಿರದ ಮಹಂತ್ ಮಿಥಿಲೇಶ್ ನಂದಿನಿ ಶರಣ್ ಮತ್ತು ಮಹಂತ್ ಸತ್ಯನಾರಾಯಣ ದಾಸ್ ಅವರು ದೇವಾಲಯದ ವಿಗ್ರಹ ಪೂಜಿಸಲು ಪೌರೋಹಿತ್ಯ ಮತ್ತು ಆಚರಣೆಗಳ ತರಬೇತಿಯನ್ನು ನೀಡುತ್ತಿದ್ದಾರೆ.

ಬ್ರಾಹ್ಮಣೇತರರು ಮಂದಿರದ ಅರ್ಚಕರಾಗಿರುವುದು ಇದೆ ಮೊದಲಲ್ಲ, ದಕ್ಷಿಣ ಭಾರತದ ದೇವಾಲಯಗಳಲ್ಲಿ ಶೇ 70 ಪ್ರತಿಶತದಷ್ಟು ಅರ್ಚಕರು ಬ್ರಾಹ್ಮಣೇತರರು. ಶೈವ ಸಂಪ್ರದಾಯದ ದೇವಾಲಯಗಳಲ್ಲಿ ಬಹುತೇಕ ಬ್ರಾಹ್ಮಣೇತರ ಅರ್ಚಕರು ಪ್ರಾಬಲ್ಯ ಹೊಂದಿದ್ದಾರೆ.

ರಾಮಮಂದಿರ‌ಕ್ಕೆ‌ ಅರ್ಚಕರ‌ ನೇಮಕ ವಿಚಾರದಲ್ಲಿ ಕೇವಲ ಅರ್ಹತೆಯ ಆಧಾರದ ಮೇಲೆ ಮಾತ್ರ ಅರ್ಚಕರನ್ನು ಆಯ್ಕೆ ಮಾಡಲಾಗಿದೆ. ರಾಮನಂದಿ ಸಂಪ್ರದಾಯದಂತೆ ಎಲ್ಲ ಅರ್ಚಕರಿಗೂ ಮೂರು ತಿಂಗಳ ತರಬೇತಿ ನೀಡಲಾಗುತ್ತಿದೆ. ಈ ಸಮಯದಲ್ಲಿ ಈ ಯುವಕರು ಗುರುಕುಲದ ನಿಯಮಗಳನ್ನು ಅನುಸರಿಸುತ್ತಿದ್ದಾರೆ. ಮೊಬೈಲ್ ಬಳಸುವಂತಿಲ್ಲ ಅಥವಾ ಹೊರಗಿನವರನ್ನು ಸಂಪರ್ಕಿಸುವಂತಿಲ್ಲ.

ಅರ್ಚಕರ‌‌‌ ನೇಮಕದ‌ ಸಂದರ್ಶನದ‌ ವೇಳೆ‌ 14 ಪ್ರಶ್ನೆಗಳನ್ನು ಕೇಳಲಾಗಿತ್ತು. ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ 24 ಯುವಕರನ್ನು ಅರ್ಚಕರ‌ ಹುದ್ದೆಗೆ ನವೆಂಬರ್‌ನಲ್ಲಿ ಆಯ್ಕೆ ಮಾಡಲಾಗಿದೆ. ಮೂರು ಸುತ್ತಿನ ಸಂದರ್ಶನದ ನಂತರ 3240 ಅಭ್ಯರ್ಥಿಗಳ ಪೈಕಿ 25 ಮಂದಿಯನ್ನು ತರಬೇತಿಗೆ ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಲ್ಲಿ ಒಬ್ಬರಾದ ಆಚಾರ್ಯ ದೈವಜ್ಞ ಕೃಷ್ಣ ಶಾಸ್ತ್ರಿ ಅವರು ಹಿಂದೆ‌ ಸರಿದಿದ್ದಾರೆ.

ಕೊನೆಯ ಸುತ್ತಿನ ಮೂರು ಪ್ರಶ್ನೆಗಳು ಅತ್ಯಂತ ಕಠಿಣವಾಗಿದ್ದವು. ಹನುಮಾನ್ ವೇದ ಧ್ಯಾನ ಮಂತ್ರ, ಸೀತೆಯ ಧ್ಯಾನ ಮಂತ್ರ ಮತ್ತು ಭರತ ಧ್ಯಾನ ಮಂತ್ರ ಹೆಚ್ಚು ಕಷ್ಟದ ಪ್ರಶ್ನೆಗಳಾಗಿದ್ದವು ಎನ್ನಲಾಗಿದೆ. ಮೊದಲ ಹಂತದಲ್ಲಿ ಸಂಧ್ಯಾ ವಂದನೆ, ಹೆಸರು, ಗೋತ್ರ, ಶಾಖ, ಪ್ರವರ ಮತ್ತು ಎರಡನೇ ಹಂತದಲ್ಲಿ ಆಚಾರ್ಯ ಪದವಿಗೆ ಅನುಗುಣವಾಗಿ ಪ್ರಶ್ನೆಗಳನ್ನು ಕೇಳಲಾಗಿತ್ತು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist