ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಮಂಗಳೂರು : ಹಂಪನಕಟ್ಟೆ ಬಳಿ ನೈತಿಕ ಪೊಲೀಸ್ ಗಿರಿ ; ಮೂವರು ಅರೆಸ್ಟ್..!

Twitter
Facebook
LinkedIn
WhatsApp
ಮಂಗಳೂರು : ಹಂಪನಕಟ್ಟೆ ಬಳಿ ನೈತಿಕ ಪೊಲೀಸ್ ಗಿರಿ ; ಮೂವರು ಅರೆಸ್ಟ್..!

ಮಂಗಳೂರು ಡಿಸೆಂಬರ್ 23: ಹಂಪನಕಟ್ಟೆ ಬಳಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ಬಂಟ್ವಾಳ ನಿವಾಸಿ ಸಂದೇಶ್ (28), ಆತನ ಸಹಚರರಾದ ಪ್ರಶಾಂತ್ (31) ಮತ್ತು ರೋನಿತ್ (31 ವರ್ಷ) ಎಂದು ಗುರುತಿಸಲಾಗಿದೆ.

ಡಿಸೆಂಬರ್ 21 ರಂದು ಅನ್ಯಕೋಮಿನ ಜೋಡಿಯೊಂದು ಜೊತೆಯಾಗಿ ನಿಂತಿರುವುದನ್ನು ಗಮನಿಸಿ ಈ ಮೂವರು ತಡೆದು ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರು ಆಟೋ ಒಂದನ್ನು ಹತ್ತಿ ಹೋಗಲು ಪ್ರಯತ್ನಿಸಿದ ವೇಳೆ ಆಟೋ ತಡೆದು ಯುವಕನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. 

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಆಟೋ ಚಾಲಕನ ದೂರಿನ ಮೇರೆಗೆ ಉತ್ತರ ಪಿಎಸ್ ಐ ಅಪರಾಧ ಕ್ರಮಾಂಕ 148/2023 ಯು/ಸೆ 341, 504 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, , ತನಿಖೆ ಮುಂದುವರೆದಿದೆ.

ಶ್ರೀನಿವಾಸ ಕಲ್ಯಾಣೋತ್ಸವ ಕರಪತ್ರ ಹಂಚುವ ಮೂಲಕ ಮತದಾನಕ್ಕೆ ಅಮಿಷ – ಪುತ್ತಿಲ ಪರಿವಾರದ ಅಭ್ಯರ್ಥಿಗಳಿಗೆ ನೋಟೀಸ್

ಪುತ್ತೂರು ಡಿಸೆಂಬರ್ 23 : ಚುನಾವಣಾ ಪ್ರಚಾರ ಪತ್ರಿಕೆ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವದ ಕರ ಪತ್ರದಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವರ ಚಿತ್ರ ಹಾಗೂ ಪುತ್ತಿಲ ಪರಿವಾರ ಎಂಬ ಚಿಹ್ನೆಯನ್ನು ಬಳಸುವ ಮೂಲಕ ಮತದಾರರಿಗೆ ಆಮಿಷ ಒಡ್ಡುವ ಕಾರ್ಯ ಮಾಡಲಾಗುತ್ತಿದೆ ಎಂದು ನಗರ ಸಭೆಯ ನೋಡಲ್ ಅಧಿಕಾರಿ ಅಭ್ಯರ್ಥಿಯೊಬ್ಬರಿಗೆ ನೋಟೀಸ್ ಜಾರಿಗೊಳಿಸಿದ್ದಾರೆ.

ಪುತ್ತೂರು ನಗರಸಭಾ ಉಪಚುನಾವಣೆ ಕಾರ್ಯ ಕಲಾಪಗಳು ನಡೆಯುತ್ತಿರುವ ಸಂದರ್ಭದಲ್ಲಿ ಪುತ್ತಿಲ ಪರಿವಾರ ಎಂಬ ಸಂಘಟಣೆಯ ಬೆಂಬಲಿತ ಅಭ್ಯರ್ಥಿಗಳಾದ ಅನ್ನಪೂರ್ಣ ಎಸ್. ಕೆ. ರಾವ್ ಹಾಗೂ ಚಿಂತನ್ ಪಿ. ಎಂಬವರು ಪತ್ರಕಗಳಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಚಿತ್ರವನ್ನು ಹಾಗೂ ಪುತ್ತಿಲ ಪರಿವಾರ ಎಂದು ಚಿಹ್ನೆ ಪ್ರಕಟಿಸುತ್ತಿದ್ದು, ಮತದಾರರ ಮೇಲೆ ಪ್ರಭಾವ ಬೀರುವ ಕೆಲಸವನ್ನು ಮಾಡುತ್ತಿದೆ. ಚುನಾವಣಾಧಿಕಾರಿಗಳನ್ನು ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಡಿ.22ಕ್ಕೆ ದೂರು ದಾಖಲಾಗಿರುತ್ತದೆ.

ಪುತ್ತೂರು 11ನೇ ವಾರ್ಡ್ ನೆಲ್ಲಿಕಟ್ಟೆಯ ವ್ಯಾಪ್ತಿಯಲ್ಲಿ ಚುನಾವಣೆಯಲ್ಲಿ ಸ್ಪರ್ದಿಸುತ್ತಿರುವ ಈ ಸಂದರ್ಭದಲ್ಲಿ ಅಲ್ಲಿನ ಮತದಾರರಿಗೆ ಪುತ್ತಿಲ ಪರಿವಾರದಿಂದ ರಾಜಕೀಯ ದೃಷ್ಟಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಎಂಬ ಕರಪತ್ರ ಹಂಚುವ ಮೂಲಕ ಮತದಾನಕ್ಕೆ ಅಮಿಷ ಒಡುತ್ತಿದ್ದಾರೆ. ಹಣದ ಲಾಭಿಯು ಉಚಿತ ಊಟ, ತಿಂಡಿ ಬಟ್ಟೆ, ದೇವರ ಪ್ರಸಾರ ನೀಡುವ ಆಮಿಷವನ್ನು ಈ ಕಾರ್ಯಕ್ರಮದ ಮುಖಾಂತರ ಪುತ್ತಿಲ ಪರಿವಾರ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ದೂರು ದಾಖಲಾಗಿರುತ್ತದೆ.

ಫಲಕಗಳನ್ನು ಈ ಕೂಡಲೇ ತೆರವುಗೊಳಿಸ ತಕ್ಕದ್ದು. ಈ ನೋಟೀನು ನೀಡಿದ 24 ಗಂಟೆಯೊಳಗೆ ಕ್ರಮ ಕೈಗೊಂಡು ವರದಿ ಮಾಡುವಂತೆ ಸೂಚಿಸಿದೆ ಎಂದು ಪುತ್ತೂರು ನಗರ ಸಭಾ ಉಪಚುನಾವಣೆ 2023 ಎಂ.ಸಿ.ಸಿ. ನೋಡಲ್ ಅಧಿಕಾರಿಗಳು ಅನ್ನಪೂರ್ಣ ಎಸ್. ಕೆ. ರಾವ್ ಹಾಗೂ ಚಿಂತನ್ ಪಿ. ಅವರಿಗೆ ಡಿ.22ರಂದು ನೋಟೀಸ್ ನೀಡಿದ್ದು, ಪ್ರತಿಯನ್ನು ಪುತ್ತೂರು ನಗರ ಸಭಾ ಚುನಾವಣಾಧಿಕಾರಿ ಹಾಗೂ ಪುತ್ತೂರು ತಹಸೀಲ್ದಾರರಿಗೆ ನೀಡಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist