ಮದ್ವೆಯಾದ ಕೆಲ ಗಂಟೆಗಳಲ್ಲೇ ವಿವೇಕ್ ಬಿಂದ್ರಾ ವಿರುದ್ಧ ಕೇಸ್ ದಾಖಲಿಸಿದ ಪತ್ನಿ...!
ನವದೆಹಲಿ: ಜನಪ್ರಿಯ ಪ್ರೇರಕ ಭಾಷಣಕಾರ (Motivational Speaker) ಮತ್ತು ಸಾಮಾಜಿಕ ಮಾಧ್ಯಮದ ಪ್ರಭಾವಿಯಾಗಿರುವ (Social Media Influencer) ವಿವೇಕ್ ಬಿಂದ್ರಾ (Vivek Bindra) ವಿರುದ್ಧ ಅವರ ಪತ್ನಿಯೇ ಕೇಸ್ ದಾಖಲಿಸಿದ್ದಾರೆ.
ಪತ್ನಿ ಹಾಗೂ ಆಕೆಯ ಸಹೋದರನೇ ಕೌಟುಂಬಿಕ ದೌರ್ಜನ್ಯದ ಆರೋಪ ಹೊರಿಸಿ ದೂರು ದಾಖಲಿಸಿರುವುದಾಗಿ ನೋಯ್ಡಾ ಸೆಕ್ಟರ್ 126ರ ಪೊಲೀಸರೊಬ್ಬರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಬಿಂದ್ರಾ ಪತ್ನಿ ಯಾನಿಕಾ (Yanika) ಸಹೋದರ ವೈಭವ್ ಕ್ವಾತ್ರಾ (Vaibhav Kwatra) ಅವರು ಈ ದೂರು ದಾಖಲಿಸಿದ್ದು, ದಂಪತಿ ವಾಸಿಸುವ ನೋಯ್ಡಾದ ಸೆಕ್ಟರ್ 94 ರ ಸೂಪರ್ನೋವಾ ವೆಸ್ಟ್ ರೆಸಿಡೆನ್ಸಿಯಲ್ಲಿ ಈ ಘಟನೆ ನಡೆದಿದೆ ಎಂದು ಆರೋಪಿಸಿದ್ದಾರೆ.
ನಡೆದಿದ್ದೇನು..?: ಡಿಸೆಂಬರ್ 7 ರ ಮುಂಜಾನೆ ಬಿಂದ್ರಾ ಮತ್ತು ಅವರ ತಾಯಿ ಪ್ರಭಾ ನಡುವೆ ತೀವ್ರ ವಾಗ್ವಾದ ನಡೆಯಿತು. ಈ ವೇಳೆ ಅವರಿಬ್ಬರ ನಡುವೆ ಯಾನಿಕಾ ಮಧ್ಯಸ್ಥಿಕೆ ವಹಿಸಲು ಮುಂದಾಗಿದ್ದಾರೆ. ಈ ವೇಳೆ ಸಿಟಿನಿಂದ ಬಿಂದ್ರಾ ಅವರು ಪತ್ನಿ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ. ಪರಿಣಾಮ ಯಾನಿಕಾ ದೇಹಕ್ಕೆ ಗಾಯಗಳಾಗಿವೆ. ಇದರ ವೀಡಿಯೋ ಕೂಡ ಮಾಡಲಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Yanika Bindra is in fear and trying to get of the compound while, Vivek Bindra constantly saying 'Everyone is watching you'... this is the same night Yanika was hospitalized!#vivekbindra pic.twitter.com/tCGTgcCt6d
— Akassh Ashok Gupta (@peepoye_) December 23, 2023
ಎಫ್‍ಐಆರ್ ನಲ್ಲೇನಿದೆ..?: ಡಿಸೆಂಬರ್ 6ರಂದು ಬಿಂದ್ರಾ ಹಾಗೂ ಯಾನಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಮದುವೆಯಾದ ಕೆಲವೇ ಗಂಟೆಗಳಲ್ಲಿ ಯಾನಿಕಾಳನ್ನು ರೂಮಿನೊಳಗೆ ಕರೆದುಕೊಂಡು ಹೋಗಿದ್ದ ಬಿಂದ್ರಾ, ಆಕೆಯ ಮೇಲೆ ದೌರ್ಜನ್ಯ ಎಸಗಿದ್ದಾನೆ. ಅಲ್ಲದೆ ಆಕೆಯ ಕೂದಲು ಎಳೆದುಕೊಂಡು ಮತ್ತು ಆಕೆಯ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಫೋನ್ ಕೂಡ ಒಡೆದು ಹಾಕಿದ್ದಾರೆ. ಇನ್ನು ಹಲ್ಲೆಯಿಂದಾಗಿ ಯಾನಿಕಾಗೆ ಸರಿಯಾಗಿ ಕಿವಿ ಕೇಳಿಸುತ್ತಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಡಾ ಬ್ಯುಸಿನೆಸ್ ಪ್ರೈವೇಟ್ ಲಿಮಿಟೆಡ್ (BBPL) ನ ಸಿಇಒ ಆಗಿರುವಾ ಬಿಂದ್ರಾ ಅವರನ್ನು ಯೂಟ್ಯೂಬ್ ಮತ್ತು ಇನ್‍ಸ್ಟಾಗ್ರಾಮ್‍ನಲ್ಲಿ ಲಕ್ಷಾಂತರ ಜನರು ಫಾಲೋ ಮಾಡುತ್ತಿದ್ದಾರೆ.