ದಕ್ಷಿಣ ಕನ್ನಡದಲ್ಲಿ ಹವಾಮಾನ ವೈಪರೀತ್ಯಗಳಿಂದ ಹೆಚ್ಚಾದ ವೈರಲ್ ಫಿವರ್..!
ಮಂಗಳೂರು, ಡಿ.21: ಕೇರಳದಲ್ಲಿ ಕೋವಿಡ್ ರೂಪಾಂತರಿ ಜೆಎನ್-1 ವೈರಸ್ (JN.1 Virus) ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ ಕೇರಳದ ಜೊತೆ ಗಡಿ ಹಂಚಿಕೊಂಡ ದಕ್ಷಿಣಕನ್ನಡ ಜಿಲ್ಲೆಯಲ್ಲಿಯೂ ಕೋವಿಡ್ ಆತಂಕ ಹೆಚ್ಚಾಗುತ್ತಿದೆ. ಹೀಗಾಗಿ ಜಿಲ್ಲೆಯ ಸ್ವರ್ಗ, ಸಾರಡ್ಕ, ಜಲ್ಸೂರು, ತಲಪಾಡಿ, ಈಶ್ವರಮಂಗಲ ಗಡಿಪ್ರದೇಶದಲ್ಲಿ ಅಲರ್ಟ್ಗೆ ಸೂಚಿಸಲಾಗಿದೆ. ಆದರೆ ಇದರ ನಡುವೆ ಹವಾಮಾನ ವೈಪರೀತ್ಯಗಳಿಂದ ವೈರಲ್ ಫಿವರ್ (Viral Fever) ಪ್ರಮಾಣ ದಿಢೀರ್ ಏರಿಕೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೈರಸ್ ಜ್ವರದ ಪ್ರಮಾಣ ಏರಿಕೆಯಾಗಿದೆ. ಇದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಜಿಲ್ಲೆಯ ಸುಳ್ಯ, ಕಡಬ, ಬಂಟ್ವಾಳ, ಬೆಳ್ತಂಗಡಿ ತಾಲೂಕು ಭಾಗದಲ್ಲಿ ಜ್ವರದ ಪ್ರಮಾಣ ಅಧಿಕವಾಗಿದೆ. ಖಾಸಗಿ ಕ್ಲಿನಿಕ್ಗಳಲ್ಲಿ ಕಳೆದ ಒಂದು ವಾರದಿಂದ ಜ್ವರದ ಕಾರಣಕ್ಕೆ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ SARI ಮತ್ತು ILI ಪ್ರಕರಣಗಳ ಬಗ್ಗೆ ನಿಗಾ ಇಡಲು ಆರೋಗ್ಯ ಇಲಾಖೆ ಮುಂದಾಗಿದೆ. ಈ ಬಗ್ಗೆ ಖಾಸಗಿ ಸಂಸ್ಥೆ, ವೈದ್ಯಕೀಯ ಕಾಲೇಜುಗಳಿಗೆ ಈಗಾಗಲೇ ಸುತ್ತೋಲೆ ಕಳಿಸಲಾಗಿದೆ ಎಂದು ದಕ್ಷಿಣ ಕನ್ನಡ DHO ಡಾ.ಎಚ್.ಆರ್ ತಿಮ್ಮಯ್ಯ ತಿಳಿಸಿದ್ದಾರೆ.
ಖಾಸಗಿ ಸಂಸ್ಥೆ, ವೈದ್ಯಕೀಯ ಕಾಲೇಜುಗಳಿಗೆ ಈಗಾಗಲೇ ಸುತ್ತೋಲೆ ಹೊರಡಿಸಿದ್ದೇವೆ. ILI ಮತ್ತು SARI ಪ್ರಕರಣಗಳ ಬಗ್ಗೆ ನಿಗಾ ಇಡಬೇಕು. ಈ ಬಗ್ಗೆ ಇಲಾಖೆಗೆ ಮಾಹಿತಿ ಕೊಡುವಂತೆ ಸೂಚನೆ ನೀಡಿದ್ದೇವೆ. ತಾಲೂಕು ವೈದ್ಯರುಗಳ ಸಭೆ ಕರೆದು ಸಹ ಸೂಚನೆ ಕೊಟ್ಟಿದ್ದೇವೆ. SARI ಪ್ರಕರಣಗಳೆಲ್ಲವನ್ನು ಪರೀಕ್ಷೆಗೆ ಒಳಪಡಿಸಬೇಕಾಗಿದೆ. ILI ಪ್ರಕರಣಗಳಲ್ಲಿ 20 ರಲ್ಲಿ ಒಂದು ಟೆಸ್ಟ್ ಗೆ ಒಳಪಡಿಸುತ್ತೇವೆ. ರಾಜ್ಯಮಟ್ಟದಲ್ಲಿ ಬರುವ ನಿರ್ದೇಶನವನ್ನು ಪಾಲಿಸುತ್ತೇವೆ. ಕೇರಳದಿಂದ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಜಿಲ್ಲೆಗೆ ಬರ್ತಾರೆ. ಎಲ್ಲಾ ವಿದ್ಯಾಸಂಸ್ಥೆಗಳಿಗೂ ಲಿಖಿತವಾಗಿ ತಿಳಿಸುತ್ತೇವೆ. ಕೇರಳದಿಂದ ಬರುವ ವಿದ್ಯಾರ್ಥಿಗಳಲ್ಲಿ ರೋಗ ಲಕ್ಷಣ ಕಂಡು ಬಂದ್ರೆ ಅವರನ್ನು ಐಸೋಲೇಟ್ ಮಾಡಬೇಕು. ಅಗತ್ಯ ಬಿದ್ರೆ ಚಿಕಿತ್ಸೆ ನೀಡಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದ್ದೇವೆ ಎಂದು ಡಾ.ಎಚ್.ಆರ್ ತಿಮ್ಮಯ್ಯ ಅವರು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಅಕ್ಕಿ, ದಿನಸಿ ದರ ಮತ್ತಷ್ಟು ಏರಿಕೆ; ಕಾರಣವೇನು?
ಬೆಂಗಳೂರು, ಡಿ.21: ಸಾಮಾನ್ಯ ಜನರ ಬದುಕು ಇನ್ಮುಂದೆ ಬಲು ದುಬಾರಿಯಾಗಲಿದೆ. ಒಂದು ತಿಂಗಳ ಹಿಂದೆಯಷ್ಟೇ ಏರಿಕೆಯಾಗಿದ್ದ ಅಕ್ಕಿ, ಬೆಳೆಗಳ ಬೆಲೆ ಈಗ ಮತ್ತೆ ಏರಿಕೆಯಾಗಿದೆ (Grocery). ಈ ವರ್ಷ ರಾಜ್ಯದಲ್ಲಿ ಮಳೆ ಕೊರತೆ ಇತ್ತು. ಅದೆಷ್ಟೋ ಜಿಲ್ಲೆಗಳಲ್ಲಿ ಬರ ಇತ್ತು. ಪ್ರತಿ ವರ್ಷದಂತೆ ಈ ವರ್ಷ ಬೆಳೆಗಳನ್ನು ಬೆಳೆಯಲಾಗಿಲ್ಲ (Karnataka Rain). ಅಲ್ಲದೆ ಹೊಸ ಸ್ಟಾಕ್ ಬಂದಿಲ್ಲ ಎನ್ನುವ ಕಾರಣ ಅಕ್ಕಿ, ಧಾನ್ಯಗಳ ಬೆಲೆ ಏರಿಕೆ ಮಾಡಲಾಗಿದೆ. ಸಾಮಾನ್ಯವಾಗಿ ಡಿಸೆಂಬರ್ ಹಾಗೂ ನವೆಂಬರ್ ತಿಂಗಳಲ್ಲಿ ಹೊಸ ಸ್ಟಾಕ್ ಬರುತ್ತಿತ್ತು. ಆದರೆ ಈ ತಿಂಗಳು ಹೊಸ ಸ್ಟಾಕ್ ಬಂದಿಲ್ಲ. ಅಕಾಲಿಕ ಮಳೆಯಿಂದಾಗಿ ಹೊಸ ಸ್ಟಾಕ್ ಬರುವುದಕ್ಕೆ ಸಮಸ್ಯೆಯಾಗಿದೆ. ಬೇಡಿಕೆಯಿಂತ ಉತ್ಪನ್ನ ಕಡಿಮೆ ಇರುವ ಹಿನ್ನಲೆ ದಿನಸಿ ಬೆಲೆ ಏರಿಕೆ ಮಾಡಲಾಗಿದೆ.
ಹೊಸ ಸ್ಟಾಕ್ ಬರುವುದಕ್ಕೆ ಒಂದು ತಿಂಗಳು ತಡವಾಗಲಿದೆ. ಸದ್ಯ ಹಳೆಯ ಸ್ಟಾಕ್ ಕಡಿಮೆ ಇರುವ ಕಾರಣ ಹಳೆಯ ಸ್ಟಾಕ್ಗೆ ಹೆಚ್ಚಿನ ಬೆಲೆ ನಿಗದಿ ಮಾಡಿ ವ್ಯಾಪಾರಸ್ಥರು ವ್ಯಾಪಾರ ಮಾಡಲು ಮುಂದಾಗಿದ್ದಾರೆ. ದುಬಾರಿ ಬೆಲೆಯಿಂದಾಗಿ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ. ಕಳೆದ ತಿಂಗಳು ಒಂದು ಕೆಜಿ ಅಕ್ಕಿಯ ಬೆಲೆ 50 ರೂ. ಇತ್ತು. ಈ ತಿಂಗಳು ಬರೋಬ್ಬರಿ 65 ರೂ.ಗೆ ಅಕ್ಕಿ ಮಾರಾಟ ಮಾಡಲಾಗುತ್ತಿದೆ. ಇನ್ನು ಬೇಳೆಕಾಳು 185 ರೂ ಇತ್ತು. ಈ ತಿಂಗಳು 170 ರಿಂದ 180 ಇದೆ. ತೊಗರಿ ಬೇಳೆ ಕಳೆದ ತಿಂಗಳು 160 ರೂ ಇತ್ತು. ಈ ತಿಂಗಳು ಬರೋಬ್ಬರಿ 170 ರಿಂದ 180 ರೂ ಆಗಿದೆ. ಉದ್ದಿನ ಬೇಳೆ ಕಳೆದ ತಿಂಗಳು 130 ರೂ ಇತ್ತು. ಈ ತಿಂಗಳು 145 ರೂ. ಆಗಿದೆ. ಹೆಸರು ಬೇಳೆ ಕಳೆದ ತಿಂಗಳು 120 ರೂ ಇತ್ತು. ಈ ತಿಂಗಳು 150 ರಿಂದ 160 ರೂ ಜಾಸ್ತಿಯಾಗಿದೆ. ಜೀರಿಗೆ ಕೆಜಿಗೆ 500 ರೂ ಆಗಿದೆ. ರಾಗಿ ಕೆಜಿಗೆ ಕಳೆದ ತಿಂಗಳು 35 ರೂ ಇತ್ತು. ಈ ತಿಂಗಳು 45 ರೂ ಆಗಿದೆ.
ಕಡ್ಲೇಬೇಳೆ ಕಳೆದ ತಿಂಗಳು 85 ರೂ ಇತ್ತು. ಈ ತಿಂಗಳು 95 ರೂ ಇದೆ. ಇನ್ನು ಕಡ್ಳೆಕಾಳು 85 ರೂ ಇತ್ತು. ಈ ತಿಂಗಳು 95 ರೂ ಆಗಿದೆ. ಇನ್ನು ಬಟಾಣಿ ಕೆಜಿ 90 ರೂ ಇತ್ತು. ಈಗ 120 ರೂ ಆಗಿದೆ. ಗೋಧಿ ಕೆಜಿ 35 ರೂಪಾಯಿ ಇತ್ತು. ಇದೀಗಾ 45 ರೂ ಆಗಿದೆ. ರಾಜ್ ಮುಡಿ ಅಕ್ಕಿ 60 ರೂ ಇತ್ತು. ಈ ತಿಂಗಳು 95 ರೂಪಾಯಿ ಆಗಿದೆ.