ಮತ್ತೆ ವಿಪಕ್ಷದ ಇಬ್ಬರು ಸಂಸದರು ಅಮಾನತು..!
ದೆಹಲಿ ಡಿಸೆಂಬರ್ 20: ಲೋಕಸಭೆಯಲ್ಲಿ (Lok sabha) ಡಿಸೆಂಬರ್ 13 ರಂದು ನಡೆದ ಭದ್ರತಾ ಲೋಪದ (Security breach)ಕುರಿತು ಚರ್ಚೆ ನಡೆಸಬೇಕೆಂದು ಒತ್ತಾಯಿಸಿ ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ ಇನ್ನೂ ಇಬ್ಬರು ವಿರೋಧ ಪಕ್ಷದ ಸಂಸದರನ್ನು ಬುಧವಾರ ಸಂಸತ್ತಿನ ಚಳಿಗಾಲದ ಅಧಿವೇಶನದ (Winter Session of Parliament) ಉಳಿದ ಅವಧಿಗೆ ಅಮಾನತುಗೊಳಿಸಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ. ಇದೇ ಕಾರಣಕ್ಕಾಗಿ 49 ಪ್ರತಿಪಕ್ಷ ಸಂಸದರನ್ನು ಅಮಾನತುಗೊಳಿಸಿದ ಒಂದು ದಿನದ ನಂತರ ಇದೀಗ ಇಬ್ಬರನ್ನು ಅಮಾನತು ಮಾಡಲಾಗಿದೆ. ಇದು ಡಿಸೆಂಬರ್ 14 ರಿಂದ ಉಭಯ ಸದನಗಳಿಂದ ಅಮಾನತುಗೊಂಡಿರುವ ಒಟ್ಟು ಸಂಸದರ ಸಂಖ್ಯೆ 143ಕ್ಕೇರಿದೆ. ಲೋಕಸಭೆಯಲ್ಲಿ 97 ಮತ್ತು ರಾಜ್ಯಸಭೆಯಲ್ಲಿ 46 ಕ್ಕೆ ಸದಸ್ಯರನ್ನು ಅಮಾನತು ಮಾಡಲಾಗಿದೆ.
ಬುಧವಾರ, ಲೋಕಸಭೆಯ ಸಂಸದರಾದ ಥಾಮಸ್ ಚಾಝಿಕ್ಕಾಡನ್ ಮತ್ತು ಎಎಂ ಆರಿಫ್ ಅವರನ್ನು “ಫಲಕ ಪ್ರದರ್ಶಿಸಿದ ಮತ್ತು ಸದನದ ಬಾವಿಗೆ ಪ್ರವೇಶಿಸಿದ” ಕಾರಣಕ್ಕಾಗಿ ಅಮಾನತುಗೊಳಿಸಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ. ಚಾಝಿಕ್ಕಾಡನ್ ಕೇರಳ ಕಾಂಗ್ರೆಸ್ (ಮಾಣಿ) ಮತ್ತು ಆರಿಫ್ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪಕ್ಷದವರು.
#WATCH | Lok Sabha MPs C Thomas and AM Ariff suspended for the winter session of Parliament for "displaying placards and entering the Well of the House" pic.twitter.com/SkMYPMa2TO
— ANI (@ANI) December 20, 2023
ಭದ್ರತಾ ಉಲ್ಲಂಘನೆ ಬಗ್ಗೆ.ಗೃಹ ಸಚಿವರು ಸದನಕ್ಕೆ ಬಂದು ಏನಾಯಿತು ಮತ್ತು ಅದರ ಹಿಂದಿನ ಕಾರಣದ ಬಗ್ಗೆ ವಿವರಣೆ ನೀಡಬೇಕು ಎಂಬುದು ಪ್ರತಿಪಕ್ಷಗಳ ಬೇಡಿಕೆಯಾಗಿದೆ ಎಂದಿದ್ದಾರೆ ಥಾಮಸ್ ಚಾಝಿಕ್ಕಾಡನ್.
ಡಿಸೆಂಬರ್ 13 ರಂದು ಇಬ್ಬರು ವ್ಯಕ್ತಿಗಳು ಸಂದರ್ಶಕರ ಗ್ಯಾಲರಿಯಿಂದ ಲೋಕಸಭೆಯ ಸಭಾಂಗಣಕ್ಕೆ ಜಿಗಿದು ಗ್ಯಾಸ್ ಡಬ್ಬಿಗಳನ್ನು ತೆರೆದ ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣ ಬಗ್ಗೆ ಚರ್ಚೆಗೆ ವಿರೋಧ ಪಕ್ಷದ ಶಾಸಕರು ಒತ್ತಾಯಿಸುತ್ತಿದ್ದಾರೆ. ಸಂಸತ್ತಿನ ಹೊರಗೆ ಒಬ್ಬ ಪುರುಷ ಮತ್ತು ಮಹಿಳೆ ಹೊಗೆ ಬಾಂಬ್ ಸಿಡಿಸಿದ್ದರು.
ಇದಕ್ಕೂ ಮುನ್ನ ಮಾತನಾಡಿದ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಆಡಳಿತಾರೂಢ ಬಿಜೆಪಿ ದೇಶದಲ್ಲಿ “ಒಂದೇ ಪಕ್ಷದ ಆಡಳಿತ” ಸ್ಥಾಪಿಸಲು ಬಯಸಿದೆ ಮತ್ತು ಆ ಕಾರಣಕ್ಕಾಗಿ ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಲಾಗುತ್ತಿದೆ ಎಂದಿದ್ದಾರೆ.
#WATCH | On his suspension for winter session, Lok Sabha MP Thomas Chazhikadan of the Kerala Congress (Mani) says, "The demand of the Opposition is that the Home Minister comes to the House and gives an explanation on what happened and the reason behind it (security breach in… pic.twitter.com/ZiuqaokBEe
— ANI (@ANI) December 20, 2023
“ಅವರು (ಮೋದಿ ಮತ್ತು ಬಿಜೆಪಿ) ಏಕ್ ಅಖೇಲಾ(ಒಬ್ಬರೇ ಸಾಕು) ಬಗ್ಗೆ ಮಾತನಾಡುತ್ತಾರೆ ಅದು ಪ್ರಜಾಪ್ರಭುತ್ವವನ್ನು ಕೆಡವುವಂತಿದೆ” ಎಂದು ಖರ್ಗೆ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಹೇಳಿದ್ದಾರೆ. “ಪ್ರತಿಪಕ್ಷದ ಸಂಸದರನ್ನು ಅಮಾನತುಗೊಳಿಸುವ ಮೂಲಕ ಅವರು ನಿಖರವಾಗಿ ಇದನ್ನೇ ಮಾಡಿದ್ದಾರೆ ಎಂದಿದ್ದಾರೆ ಖರ್ಗೆ.
ಸಂಸತ್ತಿನಲ್ಲಿ ಭದ್ರತಾ ಲೋಪದ ಕುರಿತು ಕೇಂದ್ರ ಗೃಹ ಸಚಿವರಿಂದ ಹೇಳಿಕೆ ಪಡೆಯಲು 140 ಕ್ಕೂ ಹೆಚ್ಚು ಪ್ರತಿಪಕ್ಷಗಳ ಶಾಸಕರನ್ನು ಅಮಾನತುಗೊಳಿಸಲಾಗಿದ್ದು, ಡಿಸೆಂಬರ್ 13 ರಂದು ಒಳನುಗ್ಗುವವರ ಪ್ರವೇಶಕ್ಕೆ ಅನುಕೂಲ ಮಾಡಿಕೊಟ್ಟ ಬಿಜೆಪಿ ಸಂಸದರನ್ನು ಯಾವುದೇ ವಿಚಾರಣೆಗೆ ಒಳಪಡಿಸಲಾಗಿಲ್ಲ ಎಂದು ಖರ್ಗೆ ಹೇಳಿದ್ದಾರೆ.
ಮಂಗಳವಾರ, ಲೋಕಸಭೆಯಿಂದ ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಿದ ನಂತರ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೆಳಮನೆಗೆ ಬಂದು ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಮತ್ತು ಇಂಡಿಯನ್ ಎವಿಡೆನ್ಸ್ ಕಾಯ್ದೆಯನ್ನು ಬದಲಿಸುವ ಮೂರು ನಿರ್ಣಾಯಕ ಮಸೂದೆಗಳನ್ನು ಚರ್ಚಿಸಲು ಪ್ರಸ್ತಾವನೆಯನ್ನು ಮಂಡಿಸಿದ್ದಾರೆ.