ನಯನಾಡು: ಆರು ತಿಂಗಳ ಕರುವನ್ನು ಕೊಂದು ಹಾಕಿದ ಚಿರತೆ..!
ಬಂಟ್ವಾಳ: ಹಟ್ಟಿಯ ಹೊರಗಡೆ ಕಟ್ಟಿ ಹಾಕಿದ್ದ ಸಣ್ಣ ಕರುವೊಂದನ್ನು ಚಿರತೆ ಕೊಂದು ತಿಂದ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ನೈನಾಡು ಎಂಬಲ್ಲಿ ಇಂದು ನಡೆದಿದೆ.
ನೈನಾಡು ವಿಠಲ ಶೆಟ್ಟಿ ಎಂಬವರ ಮನೆಯ ಸುಮಾರು 6 ತಿಂಗಳು ಕರುವನ್ನು ಚಿರತೆ ಕೊಂದು ಅರ್ಧ ತಿಂದು ಹಾಕಿದೆ.
ಮನೆಯ ಸಮೀಪದಲ್ಲಿರುವ ಹಟ್ಟಿಯ ಹೊರಗಡೆ ಈ ಒಂದು ಕರುವನ್ನು ಕಟ್ಟಿಹಾಕಲಾಗಿತ್ತು. ಮಧ್ಯರಾತ್ರಿ ವೇಳೆ ಚಿರತೆ ಕರುವನ್ನು ಕೊಂಡುಹೋಗಿರಬಹುದು ಎಂದು ಶಂಕಿಸಲಾಗಿದೆ.
ನಾಯಿಗಳು ಬೊಗಳಿದೆಯಾದರು ಚಿರತೆ ಬಂದು ಈ ತರಹ ಮಾಡಬಹುದು ಎಂಬುದು ತಿಳಿದಿರಲಿಲ್ಲ ಎಂದು ಮನೆಯವರು ಹೇಳುತ್ತಾರೆ.
ಯಾಕೆಂದರೆ ಈವರೆಗೆ ಪರಿಸರದಲ್ಲಿ ಚಿರತೆ ದಾಳಿ ಬಗ್ಗೆ ತಿಳಿದಿಲ್ಲ. ಹಾಗಾಗಿ ನಾಯಿಗಳು ಅಷ್ಟು ಜೋರಾಗಿ ಬೊಗಳಿದರೂ ಇಂತಹ ಯೋಚನೆ ಬಂದಿರಲಿಲ್ಲ.
ಹಟ್ಟಿಯಿಂದ ಸುಮಾರು 50 ಮೀ.ದೂರದ ಅಡಿಕೆ ತೋಟಕ್ಕೆ ಕರುವನ್ನು ಎಳೆದುಕೊಂಡು ಹೋಗಿ ಕೊಂದುಬಳಿಕ ತಿಂದಿದೆ.
ಘಟನೆಯ ಬಗ್ಗೆ ಅರಣ್ಯ ಇಲಾಖೆ ಹಾಗೂ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಾಸರಗೋಡು : ಸೊಳ್ಳೆ ನಿವಾರಕ ದ್ರಾವಣ ಸೇವಿಸಿ ಹಸುಳೆ ಮೃತ್ಯು..!
ಕಾಸರಗೋಡು: ಸೊಳ್ಳೆ ನಿವಾರಕ ದ್ರಾವಣ ಸೇವಿಸಿದ ಪರಿಣಾಮ ಒಂದೂವರೆ ವರ್ಷದ ಹಸುಳೆ ಮೃತಪಟ್ಟ ದಾರುಣ ಘಟನೆ ಕಾಸರಗೋಡಿನ ಕಲ್ಲೂರಾವಿ ಎಂಬಲ್ಲಿ ನಡೆದಿದೆ.
ಕಾಞಂಗಾಡ್ ಕಲ್ಲೂರಾವಿಯ ಬಾವನಗರದ ರಂಶೀದ್ ಅವರ ಪುತ್ರಿ ಜೆಸಾ ಮೃತಪಟ್ಟ ಮಗುವಾಗಿದೆ. ಎರಡು ದಿನಗಳ ಹಿಂದೆ ಮನೆಯಲ್ಲಿ ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ಸೊಳ್ಳೆ ನಿವಾರಕ ದ್ರಾವಣವನ್ನು ಸೇವಿಸಿದ್ದು, ಇದನ್ನು ಗಮನಿಸಿದ ಮನೆಯವರು ಮಗುವಿಗೆ ಕಾಞಂಗಾಡ್ ನ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮಗು ಮಂಗಳವಾರ ಬೆಳಗ್ಗೆ ಮೃತ ಪಟ್ಟಿದೆ ಎಂದು ತಿಳಿದುಬಂದಿದೆ.