ಮಂಗಳೂರಿನಲ್ಲಿ ಸಿಕ್ಕಿಬಿದ್ದ ಖೋಟಾ ನೋಟು ಜಾಲ ; ಆರೋಪಿ ಬಂಧನ.!
ಮಂಗಳೂರು : ಮಂಗಳೂರು ನಗರದಲ್ಲಿ ಖೋಟಾ ನೋಟು ಜಾಲ ಸಕ್ರೀಯವಾಗಿದ್ದು ಕೇರಳ ಮೂಲದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು ತನಿಖೆ ತೀವ್ರಗೊಂಡಿದೆ.
ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ನಗರದಲ್ಲಿ ಖೋಟಾ ನೋಟು ಚಲಾವಣೆ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಕೇರಳ ಮಂಜೇಶ್ವರ ಮೂಲದ ಪ್ರಶ್ವಿತ್(25) ಬಂಧಿತ ಆರೋಪಿಯಾಗಿದ್ದಾನೆ. ಭಾನುವಾರ ನಗರದ ಕಂಕನಾಡಿ ಬಳಿಯಲ್ಲಿ ಒಬ್ಬನು ಖೋಟಾ ನೋಟುಗಳನ್ನು ವಶದಲ್ಲಿರಿಸಿಕೊಂಡು ಚಲಾವಣೆ ಮಾಡಲು ಪ್ರಯತ್ನಿಸುತ್ತಿದ್ದಾನೆ ಎಂಬುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಸದ್ರಿ ಸ್ಥಳಕ್ಕೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಆರೋಪಿ ಪ್ರಶ್ವಿತ್ ನನ್ನು ದಸ್ತಗಿರಿ ಮಾಡಿದ್ದಾರೆ.
ಆರೋಪಿ 500 ರೂಪಾಯಿ ಮುಖಬೆಲೆಯ, 200 ರೂಪಾಯಿ ಮುಖಬೆಲೆಯ ಮತ್ತು 100 ರೂಪಾಯಿ ಮುಖಬೆಲೆಯ ಖೋಟಾ ನೋಟುಗಳನ್ನು ಚಲಾವಣೆ ಮಾಡಿದ್ದು 500 ರೂ ಮುಖಬೆಲೆಯ 3 ನೋಟುಗಳು, 200 ರೂ ಮುಖಬೆಲೆಯ 2 ನೋಟುಗಳು ಹಾಗೂ 100 ರೂ ಮುಖಬೆಲೆಯ 3 ನೋಟುಗಳು ಹಾಗೂ ಮೊಬೈಲ್ ಫೋನ್ ನ್ನು ವಶಪಡಿಸಿಕೊಂಡಿರುತ್ತಾರೆ. , ಈವರೆಗೆ ಸುಮಾರು 8 ರಿಂದ 9 ಸಾವಿರ ರೂಗಳ ಖೋಟಾ ನೋಟುಗಳನ್ನು ಆರೋಪಿ ಚಲಾವಣೆ ಮಾಡಿದ್ದಾನೆ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಹುಚ್ಚು ನಾಯಿ ಎಂದ ರೇಣುಕಾಚಾರ್ಯ..!
ದಾವಣಗೆರೆ : ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದು ಯತ್ನಾಳ್ ಹುಚ್ಚು ನಾಯಿ ಎಂದು ಜರೆದಿದ್ದಾರೆ .
ಯತ್ನಾಳರಿಗೆ ಅಶ್ಲೀಲ ಪದ ಬಳಸುವುದೇ ಚಾಳಿ. ಅಂತವರ ಬಗ್ಗೆ ಮಾತಾಡೋಕೆ ನನಗೆ ಅಸಹ್ಯ ಅನಿಸುತ್ತೆ, ನಾಚಿಕೆ ಆಗುತ್ತೆ ಎಂದು ರೇಣುಕಾಚಾರ್ಯ ತಿರುಗೇಟನ್ನ ನೀಡಿದ್ದಾರೆ. ಆನೆ ಬೀದಿಗೆ ಇಳಿದಾಗ ಹುಚ್ಚು ನಾಯಿ ಬೊಗಳುತ್ತವೆ. ಅವುಗಳು ಬೊಗಳಿದರೆ ಆನೆಯ ತೂಕವೇನು ಕಡಿಮೆಯಾಗಲ್ಲ. ಹೀಗೆ ಯತ್ನಾಳ್ ಕೂಡ ಮಾತಾನಾಡುತ್ತಾರೆ. ಅವರು ಮಾತಾಡುವುದರಿಂದ ಯಡಿಯೂರಪ್ಪನ ತೂಕವೇನು ಕಡಿಮೆಯಾಗಲ್ಲ. ನಾಯಿಗೆ ಇರುವ ನಿಯತ್ತು ಕೂಡ ಆ ಮನುಷ್ಯನಿಗೆ ಇಲ್ಲ. ನಿಮ್ಮನ್ನ ಬಿಜೆಪಿಗೆ ಕರೆ ತಂದದ್ದು ಯಡಿಯೂರಪ್ಪ, ಕೇಂದ್ರ ಮಂತ್ರಿ ಮಾಡಿದ್ದು ಯಡಿಯೂರಪ್ಪ. ಈತ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಬೆಳಕು ಚಲ್ಲಬೇಕಿತ್ತು. ಅದನ್ನು ಬಿಟ್ಟು ಕೇವಲ ಯಡಿಯೂರಪ್ಪ, ವಿಜಯೇಂದ್ರ ಬಗ್ಗೆ ಒಳಗು ಹೊರಗು ಅದನ್ನೇ ಮಾತಾಡಿದ್ದಾರೆ. ಈ ಮನುಷ್ಯನಿಗೆ ಮೆದುಳು ಮತ್ತು ನಾಲಿಗೆಗೂ ಲಿಂಕ್ ಇಲ್ಲ. ಆತನಿಗೆ ಗೌರವ ಕೊಡ್ತಿದ್ದೆ ಇನ್ಮುಂದೆ ಕೊಡಲ್ಲ ಎಂದು ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ. ಇಂತವರನ್ನ ನೋಡಿನೇ ಸರ್ವಜ್ಞ ವಚನಗಳನ್ನ ಬರೆದಿದ್ದಾನೆ ಅನಿಸತ್ತೆ. ಹುಚ್ಚು ನಾಯಿ ಬೊಗಳಿದರೆ ದೇವಲೋಕ ಹಾಳಾಗಲ್ಲ. ಹಾಗೆ ಇದು ಕೂಡ ಹುಚ್ವು ನಾಯಿ ಇದ್ದಂತೆ ಎಂದ ರೇಣುಕಾಚಾರ್ಯ, ಹುಚ್ಚು ನಾಯಿ ಬಗ್ಗೆ ಮಾತಾಡೋದೆ ವೇಸ್ಟ್ ಎಂದಿದ್ದಾರೆ. ಅಲ್ಲದೇ, ಇನ್ನು ಮುಂದೆ ಮಾತಾಡಿದರೆ ಸರಿ ಇರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.