ಬುಧವಾರ, ಫೆಬ್ರವರಿ 5, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಉಳ್ಳಾಲ :ಅಕ್ರಮ ಸಾರಾಯಿ ಅಡ್ಡೆಗೆ ಅಬಕಾರಿ ಪೊಲೀಸ್ ದಾಳಿ ;ಮೂವರು ಪೊಲೀಸ್ ವಶಕ್ಕೆ..!

Twitter
Facebook
LinkedIn
WhatsApp
ಉಳ್ಳಾಲ :ಅಕ್ರಮ ಸಾರಾಯಿ ಅಡ್ಡೆಗೆ ಅಬಕಾರಿ ಪೊಲೀಸ್ ದಾಳಿ ;ಮೂವರು ಪೊಲೀಸ್ ವಶಕ್ಕೆ..!

ಉಳ್ಳಾಲ: ಗಡಿಭಾಗವಾದ ತಲಪಾಡಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಅಕ್ರಮ ಸಾರಾಯಿ ದಂಧೆ ಜಾಲವೊಂದನ್ನು ಪತ್ತೆಹಚ್ಚಿರುವ ಅಬಕಾರಿ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.

ದಾಳಿ ಸಂದರ್ಭ ತಲಪಾಡಿ ಮಸೀದಿ ಬಳಿಯ ನಿವಾಸಿ ಸತೀಶ್ ತಲಪಾಡಿ, ಕುಂಜತ್ತೂರು ನಿವಾಸಿಗಳಾದ ನೌಷಾದ್ ಹಾಗೂ ಅನ್ಸೀಫ್ ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ದಾಳಿ ವೇಳೆ ಸತೀಶ್ ತಲಪಾಡಿ ಮನೆಯಿಂದ ಲೀಟರ್ ಗಟ್ಟಲೆ ಸ್ಪಿರಿಟ್ ಹಾಗೂ ಅವುಗಳ ಸಾಗಾಟಕ್ಕೆ ಅನುವಾಗಿದ್ದ ಕಾರು ಹಾಗೂ ಪ್ಯಾಕಿಂಗ್ ಗೆಂದು ದಾಸ್ತಾನಿರಿಸಿದ್ದ ಪ್ಲಾಸ್ಟಿಕ್ ಕ್ಯಾನುಗಳನ್ನು ವಶಕ್ಕೆ ಪಡೆದಿರುವುದಾಗಿ ಅಬಕಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಕಿನ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಂತ್ಯ ಎಂಬಲ್ಲಿ ನಕಲಿ ಸಾರಾಯಿ ಘಟಕ ಕಾರ್ಯಾಚರಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಅಬಕಾರಿ ಪೊಲೀಸರು ಇಲ್ಲಿನ ನಿತ್ಯಾನಂದ ಭಂಡಾರಿ ಎಂಬಾತನ ಮನೆಗೆ ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ದಾಳಿ ನಡೆಸಿದ್ದಾರೆ. ಈ ವೇಳೆ 60ಕ್ಕೂ ಅಧಿಕ ಕ್ಯಾನ್ ಗಳಲ್ಲಿ 2,240 ಲೀ ಮದ್ಯಸಾರ, 2022ರ ಅವಧಿ ಪೂರ್ಣಗೊಂಡ ಬಾಟಲಿಗಳಲ್ಲಿ ನಕಲಿ ಸಾರಾಯಿ, ಪಾಸ್ಟಿಕ್ ಪ್ಯಾಕೆಟ್, 222 ಲೀ. ನಕಲಿ ಬ್ರ್ಯಾಂಡಿ ಹಾಗೂ ನಕಲಿ ಸಾರಾಯಿ ಪ್ಯಾಕಿಂಗ್ ನಡೆಸುತ್ತಿದ್ದ ಯಂತ್ರಗಳು ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿ ಸಂದರ್ಭ ಆರೋಪಿ ನಿತ್ಯಾನಂದ ಭಂಡಾರಿ ಪರಾರಿಯಾಗಿದ್ದಾನೆ ಎಂದು ಅಬಕಾರಿ ಪೊಲೀಸರು ತಿಳಿಸಿದ್ದಾರೆ.ದಾಳಿ ನಡೆದ ಮನೆಯಿಂದ ಕೇರಳದ ರಾ.ಹೆ.ಯನ್ನು ಒಳಮಾರ್ಗವಾಗಿ ಸಂಪರ್ಕಿಸಲು ಕೇವಲ 1.5 ಕಿ.ಮೀ. ದೂರವಷ್ಟೇ ಕ್ರಮಿಸಬೇಕಿದೆ. ಇದೇ ದಾರಿಯಾಗಿ ಹಲವು ವರ್ಷಗಳಿಂದ ಅಂತಾರಾಜ್ಯವಾಗಿ ಈ ದಂಧೆ ನಡೆಯುತ್ತಿರುವ ಶಂಕೆಯನ್ನು ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡ ವ್ಯಕ್ತಪಡಿಸಿದೆ.

ಪುತ್ತೂರು – ಪೋಕರಿ ವಿಧ್ಯಾರ್ಥಿ ವಿರುದ್ದ ಶಾಲೆಯಲ್ಲಿ ಪೋಷಕರ ಪ್ರತಿಭಟನೆ

ಪುತ್ತೂರು ಡಿಸೆಂಬರ್ 11: ಶಾಲೆಯಲ್ಲಿ ಕಿಟಲೆ, ತುಂಟಾಟ ಮಾಡಿ ತನ್ನ ಸಹಪಾಠಿಗಳಿಗೆ ತೊಂದರೆ ಕೊಡುತ್ತಿದ್ದಾನೆ ಎಂದು ಆರೋಪಿಸಿ ವಿಧ್ಯಾರ್ಥಿಗಳ ಪೋಷಕರು ವಿಧ್ಯಾರ್ಥಿಯೊಬ್ಬನ ಮೇಲೆ ಶಾಲೆಯಲ್ಲಿ ಪ್ರತಿಭಟಿಸಿದ ಘಟನೆ ಪುತ್ತೂರಿನ ಮೇನಾಲ ಶಾಲೆಯಲ್ಲಿ ನಡೆದಿದೆ.

ಮೇನಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲಿಯುತ್ತಿರುವ 6ನೇ ತರಗತಿ ವಿಧ್ಯಾರ್ಥಿ ತನ್ನ ತುಂಟಾಟ, ಕೀಟಲೆ, ಪೋಕರಿತನದಿಂದ ಶಾಲೆಯಲ್ಲಿ ಕುಖ್ಯಾತಿ ಪಡೆದಿದ್ದ ಅಲ್ಲದೆ ನಿಷೇಧಿತ ವಸ್ತುಗಳನ್ನು ಸೇವಿಸಿ ಶಾಲೆಗೆ ಬಂದು ಇತರ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ತೊಂದರೆ ಕೊಡುತ್ತಿರುವುದಾಗಿ ಆರೋಪಿಸಿರುವ ಮಕ್ಕಳ ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರಸ್ತುತ ಶಾಲೆಯಲ್ಲಿ 123 ವಿದ್ಯಾರ್ಥಿಗಳಿದ್ದು ಎಲ್ಲಾ ವಿದ್ಯಾರ್ಥಿಗಳ ಹೆತ್ತವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಪೋಕರಿ ವಿದ್ಯಾರ್ಥಿಯನ್ನು ಡಿಬಾರ್‌ ಮಾಡುವಂತೆ ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ತಮ್ಮ ಮಕ್ಕಳನ್ನು ಶಾಲೆಯಿಂದ ಕರೆದೊಯ್ಯುವುದಾಗಿ ಹೇಳಿರುವ ಪ್ರತಿಭಟನಾ ನಿರತ ಪೋಷಕರು ಶಿಕ್ಷಣಾಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಿವಂತೆ ಆಗ್ರಹಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist