ಬುಧವಾರ, ಫೆಬ್ರವರಿ 5, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಶಬರಿಮಲೆಯಲ್ಲಿ 10 ಕಿಮೀ ಕ್ಯೂ, ನೂಕುನುಗ್ಗಲು; ಮೂಲಭೂತ ಸೌಕರ್ಯಗಳಿಲ್ಲದೆ ಭಕ್ತರ ಪರದಾಟ!

Twitter
Facebook
LinkedIn
WhatsApp
ಶಬರಿಮಲೆಯಲ್ಲಿ 10 ಕಿಮೀ ಕ್ಯೂ, ನೂಕುನುಗ್ಗಲು; ಮೂಲಭೂತ ಸೌಕರ್ಯಗಳಿಲ್ಲದೆ ಭಕ್ತರ ಪರದಾಟ!

ತಿರುವನಂತಪುರಂ: ಹರಿಹರಪುತ್ರ ಅಯ್ಯಪ್ಪ ದೇವರ ನೆಲೆಯಾದ ಶಬರಿಮಲೆಯಲ್ಲಿ (Sabarimala) ಮೂಲಸೌಕರ್ಯಗಳು ಅವ್ಯವಸ್ಥೆಯಾಗಿದ್ದು, ಭಕ್ತರು ಈ ಬಾರಿ ತೀವ್ರ ಸಮಸ್ಯೆ, ಕಿರಿಕಿರಿ ಅನುಭವಿಸಿದ್ದಾರೆ. ಹಿಂದೆಂದೂ ಇಲ್ಲದಷ್ಟು ಜನಸಂದಣಿ ಈ ವರ್ಷ ಕಂಡುಬಂದಿದ್ದು, ನೂಕುನುಗ್ಗಲಿನಲ್ಲಿ ದರ್ಶನವೇ ಸಾಧ್ಯವಾಗಲಿಲ್ಲ ಎಂದು ಸಾವಿರಾರು ಭಕ್ತರು ದೂರಿದ್ದಾರೆ.

ಶಬರಿಮಲೆ ದೇಗುಲದಲ್ಲಿ (Shabarimale Temple) ಈ ವರ್ಷ ಉಂಟಾದ ಗೊಂದಲ, ಮೂಲಭೂತ ಸೌಕರ್ಯಗಳು ಮತ್ತು ಸುರಕ್ಷತಾ ಕ್ರಮಗಳ ಕೊರತೆಯ ಬಗ್ಗೆ ಯಾತ್ರಾರ್ಥಿಗಳು ದೂರಿದ್ದಾರೆ. ಆಂಧ್ರಪ್ರದೇಶ, ತಮಿಳುನಾಡು, ತ್ರಿಶೂರ್, ಕೋಝಿಕ್ಕೋಡ್ ಮತ್ತು ಮಲಪ್ಪುರಂ ಮುಂತಾದ ಸ್ಥಳಗಳಿಂದ ಬಂದ ಸಾವಿರಾರು ಯಾತ್ರಾರ್ಥಿಗಳು ಈ ಭಾರಿ ದಟ್ಟಣೆಯನ್ನು ನೋಡಿ, ತಮ್ಮ ದೇಗುಲದ ಪ್ರವಾಸವನ್ನು ಅಲ್ಲಿಗೇ ಮೊಟಕುಗೊಳಿಸಿ ಹಿಂದಿರುಗಿದರು ಎಂದು ಸ್ಥಳೀಯ ವರದಿಗಳು ತಿಳಿಸಿವೆ.

ಸುಮಾರು ಹತ್ತು ಕಿಲೋಮೀಟರ್‌ಗಳಷ್ಟುದ್ದದ ವಾಹನಗಳ ಹಾಗೂ ಜನರ ಕ್ಯೂ ಕಂಡುಬಂತು. ಊಟ, ತಿಂಡಿ, ಶೌಚಕ್ಕೆ ವ್ಯವಸ್ಥೆ ಇಲ್ಲದೆ ಭಕ್ತರು ಪರದಾಡುತ್ತಿರುವುದು ಕಂಡುಬಂದಿದೆ. ಆರೋಗ್ಯ ಕೆಟ್ಟರೆ ತಕ್ಷಣದ ವೈದ್ಯಕೀಯ ಸೇವೆಯ ವ್ಯವಸ್ಥೆಯೂ ಶಬರಿಮಲೆಯಲ್ಲಿ ಕಂಡುಬಂದಿಲ್ಲ.

ಪೊಲೀಸರು ಅರ್ಧ ದಾರಿಯಲ್ಲೇ ವಾಹನಗಳನ್ನು ತಡೆದರು. ಪ್ರವಾಸಿಗರು ಗಂಟೆಗಳ ಕಾಲ ಕಾಯುವಂತಾಯಿತು. ಇದರಿಂದ ರೊಚ್ಚಿಗೆದ್ದ ಶಬರಿಮಲೆ ಯಾತ್ರಾರ್ಥಿಗಳು ಮಂಗಳವಾರ ಎರುಮೇಲಿಯಲ್ಲಿ ರಸ್ತೆ ತಡೆ ನಡೆಸಿ ಪಂಪಾಕ್ಕೆ ಅನುಮತಿ ನೀಡದಿರುವ ಅಧಿಕಾರಿಗಳ ನಿರ್ಧಾರವನ್ನು ವಿರೋಧಿಸಿದರು ಎಂದು ಮಲಯಾಳ ಮನೋರಮಾ ಪತ್ರಿಕೆ ವರದಿ ಮಾಡಿದೆ.

ವಿವಿಧ ರಾಜ್ಯಗಳ ಭಕ್ತರು ಎರುಮೇಲಿ- ರಣ್ಣಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಪ್ರಮುಖ ಯಾತ್ರಾ ಕೇಂದ್ರವಾದ ಎಟ್ಟುಮನೂರು ಮಹಾದೇವ ದೇವಸ್ಥಾನದಲ್ಲಿ ಮುಂಜಾನೆ ಭಕ್ತರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದ್ದು, ಗಂಟೆಗಟ್ಟಲೆ ಕಾದರೂ ಯಾತ್ರಾರ್ಥಿಗಳನ್ನು ಶಬರಿಮಲೆಗೆ ತೆರಳದಂತೆ ತಡೆಯಲಾಗಿದೆ ಎಂದು ವರದಿ ತಿಳಿಸಿದೆ. ಎರುಮೇಲಿ ಮತ್ತು ಪಂಪಾದಲ್ಲಿ ಜನಜಂಗುಳಿ ಇದ್ದ ಕಾರಣ ಹಿಂದಿನ ದಿನ ಬೆಳಗ್ಗೆ ಎಟ್ಟುಮನೂರು ದೇವಸ್ಥಾನಕ್ಕೆ ಆಗಮಿಸಿದ್ದ ನೂರಾರು ಭಕ್ತರಿಗೆ ಶಬರಿಮಲೆಗೆ ತೆರಳಲು ಅವಕಾಶ ನೀಡಲಿಲ್ಲ.

“ದಶಕಗಳ ಹಿಂದೆ ನಾನು ಮಗುವಾಗಿದ್ದಾಗ ನನ್ನ ತಂದೆಯೊಂದಿಗೆ ಶಬರಿಮಲೆಗೆ ಬಂದಿದ್ದೆ. ಇನ್ನೂ ನಾನು ಆಗಿನ ಸುಂದರವಾದ ಮಾರ್ಗವನ್ನು ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತೇನೆ. ವಯಸ್ಸಾದ ನಂತರ ನನ್ನ ಕುಟುಂಬದೊಂದಿಗೆ ಬೆಟ್ಟದ ದೇಗುಲಕ್ಕೆ ಹೋಗುತ್ತಿರುವುದು ಇದೇ ಮೊದಲು. ಪಂಪಾದಿಂದ ಶಬರಿಮಲೆಗೆ ತೆರಳುವ ಟ್ರೆಕ್ಕಿಂಗ್ ಮಾರ್ಗದ ಇಂದಿನ ಸ್ಥಿತಿಗತಿ ಕಂಡು ಗಾಬರಿಯಾಗಿದೆ. ದುರದೃಷ್ಟವಶಾತ್ ಇಂದು (ಮಂಗಳವಾರ) ನಿಲಕ್ಕಲ್‌ನಲ್ಲಿ ನಮ್ಮ ಪ್ರಯಾಣವನ್ನು ಮೊಟಕುಗೊಳಿಸಬೇಕಾಯಿತು. ನಿಲಕ್ಕಲ್‌ನ ಪರಿಸ್ಥಿತಿ ನಮ್ಮಲ್ಲಿ ಭಯ ಹುಟ್ಟಿಸಿತು. ನಾವು ಈಗ ಪಂದಳಂನಿಂದ ಹಿಂತಿರುಗುತ್ತಿದ್ದೇವೆ” ಎಂದು ತ್ರಿಶೂರ್‌ನ ಅರಿಮ್‌ಪುರದ 60 ವರ್ಷದ ಭಕ್ತೆಯಾದ ಓಮನಾ ಹೇಳಿದರು.

ದೇಗುಲಕ್ಕೆ ಆಗಮಿಸುವ ಶಬರಿಮಲೆ ಯಾತ್ರಾರ್ಥಿಗಳಿಗೆ ಅನುಕೂಲ, ವಾಹನಗಳಿಗೆ ಸಾಕಷ್ಟು ಪಾರ್ಕಿಂಗ್ ಸೌಲಭ್ಯ ಮತ್ತು ಶುಚಿತ್ವವನ್ನು ಕಾಪಾಡಿಕೊಳ್ಳುವಂತೆ ಕೇರಳ ಹೈಕೋರ್ಟ್ ಮಂಗಳವಾರ ಅಧಿಕಾರಿಗಳಿಗೆ ಸೂಚಿಸಿದೆ. ನ್ಯಾಯಮೂರ್ತಿ ಅನಿಲ್ ನರೇಂದ್ರನ್ ಮತ್ತು ಜಿ. ಗಿರೀಶ್ ಅವರ ಪೀಠ, ಶಬರಿಮಲೆ ದೇಗುಲದ ನೂಕು ನುಗ್ಗಲು ನಿಯಂತ್ರಿಸಲು ರಾಜ್ಯ ಪೊಲೀಸರಿಗೆ ಆದೇಶಿಸಿದೆ.

ಯಾಕೆ ಶಬರಿಮಲೆ ದೇವಸ್ಥಾನದಲ್ಲಿ ರಶ್?

ಡಿಸೆಂಬರ್ 8ರಂದು ಬೆಳಿಗ್ಗೆ ಪ್ರಾರಂಭವಾದ ಟ್ರಾಫಿಕ್ ಜಾಮ್ ಹಾಗೂ ನೂಕುನುಗ್ಗಲು ನಾಲ್ಕು ದಿನಗಳ ಕಾಲ ಪಂಪಾ, ನಿಲಕ್ಕಲ್ ಮತ್ತು ಸನ್ನಿಧಾನಂನಲ್ಲಿ ಮುಂದುವರಿಯಿತು. ಯಾತ್ರೆಯ ಮೊದಲ ಎರಡು ವಾರಗಳಲ್ಲಿ ಯಾತ್ರಾರ್ಥಿಗಳ ದೈನಂದಿನ ಸರಾಸರಿ ಅರ್ಧ ಲಕ್ಷ. ಡಿಸೆಂಬರ್ 7ರ ನಂತರ ಹೆಚ್ಚಿನ ಭಕ್ತರ ಹರಿವು ಪ್ರಾರಂಭವಾಯಿತು. ಇದಕ್ಕೆ ಹಲವು ಕಾರಣ ಊಹಿಸಲಾಗಿದೆ.

ಚೆನ್ನೈನಲ್ಲಿ ಪ್ರವಾಹ ಉಂಟಾದಾಗ ಕೇರಳಕ್ಕೆ ತೆರಳುವ ಹಲವು ರೈಲುಗಳನ್ನು ರದ್ದುಗೊಳಿಸಲಾಗಿತ್ತು. ಆಗ ಬಾಕಿಯಾದವರು ಈಗ ಬರುತ್ತಿದ್ದಾರೆ. ನೆರೆಯ ರಾಜ್ಯ ತೆಲಂಗಾಣದಲ್ಲಿ ಚುನಾವಣೆ ಮುಗಿಸಿದ ನಂತರ ಅಲ್ಲಿಂದ ಬರುವ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಪೊಲೀಸರು ಹಾಗೂ ಭದ್ರತಾ ವ್ಯವಸ್ಥೆಯಲ್ಲಿಯೂ ತುಸು ಲೋಪವಾಗಿದ್ದು, ಜನರನ್ನು ನಿಯಂತ್ರಿಸುವುದು ಕಷ್ಟವಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist