ಭಾನುವಾರ, ಡಿಸೆಂಬರ್ 22, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಕ್ಯಾಂಡಲ್‌ ಬೆಳಕಲ್ಲಿ ಸ್ಕೂಟರ್‌ಗೆ ಪೆಟ್ರೋಲ್‌ ಹಾಕುತ್ತಿದ್ದ ಬಾಲಕಿಗೆ ಬೆಂಕಿ ತಗುಲಿ ಸಾವು!

Twitter
Facebook
LinkedIn
WhatsApp
ಕ್ಯಾಂಡಲ್‌ ಬೆಳಕಲ್ಲಿ ಸ್ಕೂಟರ್‌ಗೆ ಪೆಟ್ರೋಲ್‌ ಹಾಕುತ್ತಿದ್ದ ಬಾಲಕಿಗೆ ಬೆಂಕಿ ತಗುಲಿ ಸಾವು!

ತುಮಕೂರು: ಮೊಂಬತ್ತಿ ಬೆಳಕಿನಲ್ಲಿ ಸ್ಕೂಟರ್‌ಗೆ ಪೆಟ್ರೋಲ್ (Pourin Petrol to scooter) ಹಾಕುವ ವೇಳೆ ಅಗ್ನಿ ಅವಘಡ (Fire Accident) ಸಂಭವಿಸಿ ಸೌಂದರ್ಯ(16) ಎಂಬ ಬಾಲಕಿ ದಾರುಣವಾಗಿ ಮೃತಪಟ್ಟಿದ್ದಾಳೆ. ತುಮಕೂರು ಜಿಲ್ಲೆಯ (Tumkur News) ಕುಣಿಗಲ್ ತಾಲೂಕಿನ ಯಡೆಯೂರು ಬಳಿಯ ಕಟ್ಟಿಗೇಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಗಾಯಗೊಂಡಿದ್ದ ಸೌಂದರ್ಯಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಈಗ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪೆಟ್ರೋಲ್‌ ಪಕ್ಕದಲ್ಲಿಟ್ಟುಕೊಂಡು ಕ್ಯಾಂಡಲ್‌ ಉರಿಸಿ ಇಟ್ಟುಕೊಳ್ಳುವುದು ಅಪಾಯ ಎನ್ನುವುದರ ಅರಿವಿದ್ದರೂ ಸಾಕಷ್ಟು ಬಾರಿ ಅವಸರಕ್ಕೆ, ಅನಿವಾರ್ಯತೆಗೆ ಬಿದ್ದೂ ಈ ಕೆಲಸವನ್ನು ಮಾಡಲಾಗುತ್ತದೆ. ಹೆಚ್ಚಿನ ಸಂದರ್ಭದಲ್ಲಿ ಜೀವ ಉಳಿಯುತ್ತದೆ. ಆದರೆ, ಇಲ್ಲಿ ಬಾಲಕಿ ಪ್ರಾಣ ಕಳೆದುಕೊಂಡಿದ್ದಾಳೆ.

ಮುಸ್ಲಿಂ ಯುವತಿಗೆ ಡ್ರಾಪ್‌ ಕೊಟ್ಟ ಹಿಂದೂ ಯುವಕನಿಗೆ ಯದ್ವಾತದ್ವಾ ಹಲ್ಲೆ

ದಾವಣಗೆರೆ: ಮುಸ್ಲಿಂ ಯುವತಿಯೊಬ್ಬಳನ್ನು ‌(Muslim Girl) ಡ್ರಾಪ್‌ ಮಾಡಿದ ಎಂಬ ಕಾರಣಕ್ಕೆ ಹಿಂದು ಯುವಕನೊಬ್ಬನ (Hindu Youth) ಮೇಲೆ ಕೆಲವು ಮುಸ್ಲಿಮರು ಸೇರಿ ಯದ್ವಾತದ್ವಾ ಹಲ್ಲೆ ಮಾಡಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಈ ನೈತಿಕ ಪೊಲೀಸ್ ಗಿರಿಯ (Moral Policing) ವಿಡಿಯೊ ಕೂಡಾ ಲಭ್ಯವಾಗಿದೆ. ಅಷ್ಟು ಮಾತ್ರವಲ್ಲ, ಹಿಂದೂ ಯುವಕನ‌‌ ಮೇಲೆ ಹಲ್ಲೆ ನಡೆಸಿದ್ದು ಮಾತ್ರವಲ್ಲ, ಆತನ ವಿರುದ್ಧ ನಕಲಿ ಪೋಕ್ಸೊ ಕೇಸ್‌ (Pocso Case) ಕೂಡಾ ದಾಖಲಿಸಲಾಗಿದೆ.

ಶುಕ್ರವಾರ ಸಂಜೆ ದಾವಣಗೆರೆಯ ಎಸ್ಪಿ ಕಚೇರಿ ಸಮೀಪದ ಆರ್.ಟಿ.ಒ ಸರ್ಕಲ್ ಬಳಿ ಈ ಹಲ್ಲೆ ನಡೆದಿದೆ. ಜಾಲಿ ನಗರದ ನಿವಾಸಿ ಶ್ರೀನಿವಾಸ್ ಎಂಬವರ ಮೇಲೆ ಹಲ್ಲೆ ನಡೆಸಲಾಗಿದೆ. ಈತ ಪರಿಚಯಸ್ಥ ಮುಸ್ಲಿಂ ಯುವತಿಗೆ ಡ್ರಾಪ್ ಕೊಟ್ಟದ್ದಕ್ಕೆ ಈ ಹಲ್ಲೆ ನಡೆದಿತ್ತು.

ನಿಜವೆಂದರೆ ಯುವತಿ ಮತ್ತು ಯುವಕರು ಪರಿಚಿತರೇ ಆಗಿದ್ದಾರೆ. ಆಕೆಯೇ ಸ್ವತಃ ಸಹಾಯ ಮಾಡುವಂತೆ ಕೇಳಿಕೊಂಡಿದ್ದಳು. ಇದನ್ನು ಹಲ್ಲೆಯ ವೇಳೆ ಆಕೆಯೇ ಬಾಯಿ ಬಿಟ್ಟು ಹೇಳಿದ್ದಳು. ನೋಟ್ಸ್ ಜೆರಾಕ್ಸ್ ಮಾಡಿಸಲು‌‌ ನಾನೇ ಡ್ರಾಪ್‌‌ ಕೇಳಿದ್ದೆ ಎಂದು ಹೇಳಿದ ಆಕೆ ಹೊಡೆಯಬೇಡಿ ಎಂದು ಪರಿಪರಿಯಾಗಿ ಮನವಿ ಮಾಡಿದ್ದಳು. ಆದರೆ, ಈ ದುಷ್ಟರು ಆಕೆಯ ಮಾತನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.

ನಡು ರಸ್ತೆಯಲ್ಲೇ‌ ಬೈಕ್ ತಡೆದು ಹಲ್ಲೆ ನಡೆಸಿದ ಮುಸ್ಲಿಂ ಯುವಕತು, ಖಾಸಗಿ ಶಾದಿ ಮಹಲ್ ಗೂ ಕರೆದೊಯ್ದು ರಾತ್ರಿಯಿಡೀ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಶ್ರೀನಿವಾಸ್‌ ನನ್ನು ನಿರ್ಜನ ಪ್ರದೇಶದಲ್ಲಿ ಬಿಸಾಕಿ ಹೋಗಿದ್ದರು.

ಈ ನಡುವೆ, ತಡರಾತ್ರಿ 2.30ಕ್ಕೆ ಮಹಿಳಾ ಠಾಣೆಗೆ ಹೋದ ದುಷ್ಕರ್ಮಿಗಳು ಹಲ್ಲೆಗೊಳಗಾದ ಯುವಕನ ಮೇಲೆ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ. ಯುವತಿಯ ತಾಯಿಯನ್ನು ಮನವೊಲಿಸಿದ ತಂಡ, ಮಗಳ ಮೇಲೆ ಆತ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ದೂರು ಕೊಡಿಸಿದ್ದರು. ಯುವತಿ 18ರ ಕೆಳಹರೆಯದವಳಾಗಿರುವುದರಿಂದ ಪೋಕ್ಸೋ ಪ್ರಕರಣ ದಾಖಲಾಗಿದೆ. ಗಂಭೀರ ಗಾಯಗೊಂಡ ಶ್ರೀನಿವಾಸ್‌ ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist