Arecanut: ಕುಸಿತ ಕಂಡ ಅಡಿಕೆ ಧಾರಣೆ ; ಚೇತರಿಕೆ ಕಾಣದಿರಲು ಕಾರಣವೇನು?
ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಅಡಿಕೆ ಆಧಾರಿತ ಕೃಷಿ ಹೆಚ್ಚಾಗಿದ್ದು ತಮ್ಮ ಮೂಲ ಆದಾಯವನ್ನು ಅಡಿಕೆ ಕೃಷಿಯಿಂದಲೇ ಗಳಿಸುತ್ತಾರೆ ಕಳೆದ ಬಾರಿ ಈ ಸಮಯಕ್ಕೆ ಅಡಿಕೆ ದರ ಉತ್ತಮದಲ್ಲಿತ್ತು.
ಕರಾವಳಿ, ಮಲೆನಾಡು, ಅರೆಮಲೆನಾಡು ಪ್ರಾಂತ್ಯಕ್ಕೆ ಸೀಮಿತಗೊಂಡಿದ್ದ ಅಡಕೆ ಕೃಷಿ ಕಳೆದೆರಡು ವರ್ಷಗಳಿಂದ ವ್ಯಾಪಕ ಪ್ರಮಾಣದಲ್ಲಿ ವಿಸ್ತರಣೆಗೊಳ್ಳುತ್ತಿದ್ದು, ಅಡಕೆ ಮಾರುಕಟ್ಟೆಯ ಭವಿಷ್ಯ ಮಂಕಾಗಿದೆ.ಅಡಕೆ ಕೃಷಿಗೆ ತಗುಲಿರುವ ಹಳದಿ ರೋಗ ಇಡೀ ಬೆಳೆಯ ಬುಡವನ್ನೇ ಅಲ್ಲಾಡಿಸಿದೆ. ರೋಗದಿಂದ ಉಂಟಾದ ತಲ್ಲಣ, ಬೆಳೆ ವಿಸ್ತರಣೆಯಿಂದ ಉಂಟಾದ ಸಂಚಲನ ಮತ್ತು ಕಳ್ಳ ನುಸುಳುವಿಕೆ ಅವಾಂತರಗಳು ನಿರಂತರವಾಗಿ ಬೆಳೆಯ ಮೇಲೆ ತೂಗುಕತ್ತಿಯಾಗಿ ನೇತಾಡುತ್ತಿದ್ದು, ಅಡಕೆ ಕ್ಷೇತ್ರದ ಹಿತರಕ್ಷಣೆಗಾಗಿ ಸರಕಾರ ಸಮಗ್ರ ನೀತಿ ರೂಪಿಸಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಹಳೆ ಅಡಿಕೆಗೆ 420 ರಿಂದ 430 ವರೆಗೆ ಇದ್ದು ಹೊಸ ಅಡಿಕೆಗೆ 360 ರಿಂದ 370ರ ವರೆಗಿದೆ. ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೇ ಇತ್ತೀಚಿಗಿನ ಕೆಲ ತಿಂಗಳುಗಳಿಂದ ಅಡಿಕೆ ಧಾರಣೆಯಲ್ಲಿ ಭಾರೀ ಕುಸಿತ ಕಂಡಿದೆ ಹಾಗು ಚೇತರಿಸುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಈ ನಡುವೆ ಅಡಿಕೆಯ ಉತ್ಪಾದನ ವೆಚ್ಚ ಪ್ರತಿ ವರ್ಷ ಹೆಚ್ಚಳವಾಗುತ್ತಲೇ ಇದೆ.ಹೀಗಾಗಿ ಅಡಿಕೆಯನ್ನೆ ನಂಬಿ ಜೀವನ ನಡೆಸುವ ಸಾಂಪ್ರದಾಯಿಕ ಬೆಳೆಗಾರನ ಸ್ತಿತಿ ಅಡಕತ್ತರಿಯಲ್ಲಿ ಸಿಕ್ಕಮತಾಗಿದೆ.
ಕಳೆದ ಪೆಭ್ರವರಿ ತಿಂಗಳಿನಲ್ಲಿ ಕೇಂದ್ರ ಸರ್ಕಾರ ಅಡಿಕೆಯ ಕನಿಷ್ಠ ಆಮದು ದರವನ್ನು ಪ್ರತಿ ಕೆ.ಜಿ.ಗೆ ₹ 100ರಷ್ಟು ಏರಿಸಿತ್ತು.. ಈ ಬಳಿಕ ಅಡಿಕೆ ಧಾರಣೆ ಜಾಸ್ತಿ ಆಗಬಹುದು ಎಂಬ ನಿರೀಕ್ಷೆ ಇತ್ತು ಆದರೆ ಅದು ಸುಳ್ಳಾಗಿದೆ ಕಳೆದ ವರ್ಷದ ಈ ಅವಧಿಗೆ ಹೋಲಿಸಿದರೆ ಈ ವರ್ಷ ಪ್ರತಿ ಕೆ.ಜಿ. ಹಳೆ ಅಡಿಕೆ ದರ ಸುಮಾರು ₹ 100ರಷ್ಟು ಕಡಿಮೆ ಇದೆ. ಕೇಂದ್ರೀಯ ಅಡಿಕೆ ಮತ್ತು ಕೊಕ್ಕೊ ಮಾರುಕಟ್ಟೆ ಮತ್ತು ಸಂಸ್ಕರಣಾ ಸಹಕಾರಿ ಸಂಸ್ಥೆಯು (ಕ್ಯಾಂಪ್ಯೂ) ಬೆಳೆಗಾರರ ಹಿತ ಕಾಯುವ ಉದ್ದೇಶದಿಂದ ಕನಿಷ್ಠ ಆಮದು ಬೆಳೆ ಹೆಚ್ಚಿಸುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಿತು. ಪರಿಣಾಮ ಕೇಂದ್ರ ಸರ್ಕಾರ 2023ರ ಫೆಬ್ರುವರಿಯಲ್ಲಿ ಅಧಿಸೂಚನೆ ಹೊರಡಿಸುವುದರ ಮೂಲಕ ಅಡಿಕೆ ಆಮದಿನ ಕನಿಷ್ಠ ದರವನ್ನು ಪ್ರತಿ ಕೆ.ಜಿ.ಗೆ ₹251ರಿಂದ ₹351ಕ್ಕೆ ಹೆಚ್ಚಳ ಮಾಡಿತ್ತು. ಆದರೆ ಇದರಿಂದ ನಿರೀಕ್ಷಿತ ಲಾಭ ದೊರೆತಂತೆ ಕಾಣುವುದಿಲ್ಲ. ಆ ಬಳಿಕವು ಅಡಿಕೆ ರೇಟ್ ಇಳಿಮುಖವಾಗುತ್ತಲೇ ಸಾಗಿದೆ.
ಇನ್ನು ಕೋವಿಡ್ ಸಮಯದಲ್ಲಿ ಅಡಿಕೆ ಧಾರಣೆಗೆ ಒಳ್ಳೆಯ ದರ ಏರಿಕೆಯಾಗಿತ್ತು. ದೇಶದ ಗರಿ ಭಾಗಗಳಲ್ಲಿ ಕೋವಿಡ್ ಸರ್ಪಗಾವಲು ಇದ್ದುದರಿಂದ ಯಾವುದೇ ವಿದೇಶಿ ಅಡಿಕೆ, ದೇಶದೊಳಗೆ ಬಂದಿರಲಿಲ್ಲ ಹಾಗಾಗಿ ಒಳ್ಳೆಯ ದರ ಬಂದಿತ್ತು. ಇನ್ನು ಕಳ್ಳ ಸಾಗಾಣಿಕೆ ಗೆ ಕಡಿವಾಣ ಹಾಕಿದರೆ ಮಾತ್ರ ದರ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ಅಡಿಕೆ ವರ್ತಕರು.