ಫೈಟರ್ ಟೀಸರ್ ಔಟ್; ಹೃತಿಕ್- ದೀಪಿಕಾ ಅಭಿನಯದ ಚಿತ್ರ ಜನವರಿ 26 ರಂದು ಬಿಡುಗಡೆ ; ಇಲ್ಲಿದೆ ಟೀಸರ್..!
ಬೆಂಗಳೂರು; ದೀಪಿಕಾ ಪಡುಕೋಣೆ (Deepika Padukone) ಮತ್ತು ಹೃತಿಕ್ ರೋಷನ್ (Hrithik Roshan) ಒಟ್ಟಿಗೆ ತೆರೆ ಹಂಚಿಕೊಂಡಿರುವ ʻಫೈಟರ್ʼ ಸಿನಿಮಾದ ಟೀಸರ್ ಬಿಡುಗಡೆಗೊಂಡಿದೆ. ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಮತ್ತು ಅನಿಲ್ ಕಪೂರ್ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ 2024ರ ಜನವರಿ 26ರ ಗಣರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಯಾಗಲಿದೆ. ಫೈಟರ್ ಟೀಸರ್ನಲ್ಲಿ, ಜೆಟ್ ವಿಮಾನವೇರಿ ಸಾಹಸ ಪ್ರದರ್ಶಿಸಿದ್ದಾರೆ ಹೃತಿಕ್ ಮತ್ತು ದೀಪಿಕಾ. ಇದಕ್ಕೂ ಮೀರಿ ಈ ಜೋಡಿಯ ಅವರ ಕೆಲವು ಇಂಟಿಮೇಟ್ ಸೀನ್ಗಳು ಹೈಲೈಟ್ ಆಗಿವೆ.
ವರದಿಯ ಪ್ರಕಾರ, ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಸಿನಿಮಾ 3D ನಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಪಠಾಣ್ ಮೂಲಕ 1000 ಕೋಟಿಯ ಹಿಟ್ ಸಿನಿಮಾ ನೀಡಿರುವ ಸಿದ್ಧಾರ್ಥ್ ಆನಂದ್, ಫೈಟರ್ ಮೂಲಕ ಮತ್ತೊಂದು ಹಿಟ್ ಸಿನಿಮಾ ನೀಡಲಿದ್ದಾರೆ. ನಿರ್ದೇಶಕ ಸಿದ್ಧಾರ್ಥ್ ಆನಂದ್ ಒಂದು ನಿಮಿಷ 10 ಸೆಕೆಂಡ್ನ ಟೀಸರ್ ಮೂಲಕ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ. ಪ್ಯಾಟಿ, ಮಿನ್ನಿ ಮತ್ತು ರಾಕಿ ಸ್ಕ್ವಾಡ್ರನ್ ಕೂಡ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರು ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟಿಸಿದ ಪಠಾಣ್ ಸಿನಿಮಾ ನಂತರ ಈ ಸಿನಿಮಾ ಮೂಲಕ ಮತ್ತೆ ಕಮ್ ಬ್ಯಾಕ್ ಆಗಿದ್ದಾರೆ.
ಈ ಸಿನಿಮಾಗೆ ಹೃತಿಕ್ ರೋಷನ್ 85 ಕೋಟಿ ರೂ. ಸಂಭಾವನೆ ಪಡೆದರೆ, ದೀಪಿಕಾ ಚಿತ್ರಕ್ಕೆ 20 ಕೋಟಿ ರೂ. ಪಡೆಯುತ್ತಿದ್ದಾರೆ ಎಂದೂ ವರದಿಯಾಗಿದೆ. ಸಿದ್ಧಾರ್ಥ್ ಆನಂದ್ ಅವರು ದೀಪಿಕಾಗಿಂತ ಹೆಚ್ಚು, ಅಂದರೆ 40 ಕೋಟಿ ರೂ. ಪಡೆದುಕೊಳ್ಳುತ್ತಿದ್ದಾರೆ. ದೀಪಿಕಾಗಿಂತ ದುಪ್ಪಟ್ಟು ಹಣ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ʻಉಳಿದ ಸೆಲೆಬ್ರಿಟಿಗಳು 15 ಕೋಟಿ ರೂ. ಪಡೆದುಕೊಳ್ಳುತ್ತಿದ್ದು, ಸಂಭಾವನೆ ಮೊತ್ತವೇ 160 ಕೋಟಿ ರೂ. ತಲುಪಲಿದೆ’ ಎಂದು ಕಮಾಲ್ ಆರ್. ಖಾನ್ ಈ ಹಿಂದೆ ಟ್ವೀಟ್ ಮಾಡಿದ್ದರು. 350 ಕೋಟಿ ರೂ. ಬಜೆಟ್ ಈಗಾಗಲೆ ಮೀರಿದೆ. ಹೃತಿಕ್ ರೋಷನ್ ಜತೆ ಸಿದ್ಧಾರ್ಥ್ ಆನಂದ್ ಅವರು ಈ ಹಿಂದೆ ‘ವಾರ್’ ಮತ್ತು ‘ಬ್ಯಾಂಗ್ ಬ್ಯಾಂಗ್’ ಚಿತ್ರಗಳನ್ನು ಮಾಡಿದ್ದರು. ಆ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಯಶಸ್ಸು ಕಂಡವು. ಈಗ ಮತ್ತೆ ಅವರು ‘ಫೈಟರ್’ ಚಿತ್ರದಲ್ಲಿ ಹೃತಿಕ್ ರೋಷನ್ ಜತೆ ಕೈ ಜೋಡಿಸಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಜೋರಾಗಿದೆ.