ಭರ್ಜರಿ ಐಟಿ ರೈಡ್ ; 200 ಕೋಟಿಗೂ ಅಧಿಕ ಹಣ ಸೀಝ್..!
ದೆಹಲಿ ಡಿಸೆಂಬರ್ 07: ಆದಾಯ ತೆರಿಗೆ ಇಲಾಖೆಯು(Income Tax Department) ಒಡಿಶಾ (Odisha) ಮತ್ತು ಜಾರ್ಖಂಡ್‌ನ ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ (Boudh Distilleries Pvt Ltd) ದಾಳಿ ನಡೆಸಿದೆ .ನಿನ್ನೆಯವರೆಗೆ ಕಂಪನಿಯೊಂದಿಗೆ ಸಂಬಂಧಹೊಂದಿರುವ ಆವರಣದಿಂದ ಅಪಾರ ಪ್ರಮಾಣದ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಂಡಿದೆ ಎಂದು ಐಟಿ ಇಲಾಖೆ ಮೂಲಗಳು ಗುರುವಾರ (ಡಿಸೆಂಬರ್ 7) ತಿಳಿಸಿವೆ. ಅಧಿಕಾರಿಗಳ ಪ್ರಕಾರ, ಒಡಿಶಾದ ಬೋಲಂಗಿರ್ ಮತ್ತು ಸಂಬಲ್‌ಪುರ ಮತ್ತು ಜಾರ್ಖಂಡ್‌ನ ರಾಂಚಿ, ಲೋಹರ್ದಗಾದಲ್ಲಿ ಶೋಧ ನಡೆಸಲಾಗಿದೆ.
“ನಿನ್ನೆಯವರೆಗೆ 50 ಕೋಟಿ ರೂಪಾಯಿಗಳವರೆಗಿನ ನೋಟುಗಳ ಎಣಿಕೆ ಪೂರ್ಣಗೊಂಡಿದೆ. ಆದರೆ ನೋಟುಗಳ ಸಂಖ್ಯೆ ತುಂಬಾ ಹೆಚ್ಚಾಗಿರುವುದರಿಂದ ಯಂತ್ರಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿವೆ” ಎಂದು ಮೂಲಗಳು ತಿಳಿಸಿವೆ.
https://x.com/ANI/status/1732636559458124152?s=20
ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ವೆಬ್‌ಸೈಟ್ ಪ್ರಕಾರ, ಇದು ಒಡಿಶಾದಲ್ಲಿ ಗ್ರೂಪ್ ಪ್ರಧಾನ ಕಚೇರಿಯನ್ನು ಹೊಂದಿದೆ, 6 ವ್ಯಾಪಾರ ವಿಭಾಗಗಳಲ್ಲಿ 4 ಕಂಪನಿಗಳನ್ನು ಒಳಗೊಂಡಿದೆ. ಗುಂಪು ಒಡಿಶಾದಾದ್ಯಂತ ಕಾರ್ಯನಿರ್ವಹಿಸುತ್ತದೆ.
“ಕಂಪನಿಗಳಲ್ಲಿ ಬೌಧ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್ (ENA, CO2, DDGS), ಬಾಲ್ಡಿಯೊ ಸಾಹು ಇನ್ಫ್ರಾ ಪ್ರೈವೇಟ್ ಲಿಮಿಟೆಡ್ (ಫ್ಲೈ ಆಶ್ ಬ್ರಿಕ್ಸ್) ಕ್ವಾಲಿಟಿ ಬಾಟ್ಲರ್ಸ್ ಪ್ರೈವೇಟ್ ಲಿಮಿಟೆಡ್ (IMFL ಬಾಟ್ಲಿಂಗ್) ಮತ್ತು ಕಿಶೋರ್ ಪ್ರಸಾದ್ ಬಿಜಯ್ ಪ್ರಸಾದ್ ಬೆವರೇಜಸ್ ಪ್ರೈವೇಟ್ ಲಿಮಿಟೆಡ್ (ಸೇಲ್ಸ್ & IMFL ಬ್ರ್ಯಾಂಡ್ ಮಾರ್ಕೆಟಿಂಗ್) ಸೇರಿದೆ ಎಂದು ವೆಬ್‌ಸೈಟ್ ಹೇಳಿದೆ.
ಕಟಕ್ನಲ್ಲಿ ಹೊತ್ತಿ ಉರಿದ ಭುವನೇಶ್ವರ-ಹೌರಾ ಜನ್ ಶತಾಬ್ದಿ ಎಕ್ಸ್ಪ್ರೆಸ್ ರೈಲು
ಕಟಕ್ ನಿಲ್ದಾಣದಲ್ಲಿ ಭುವನೇಶ್ವರ-ಹೌರಾ ಜನ್ ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಅಗ್ನಿ ಅವಘಡ(Fire Accident) ಸಂಭವಿಸಿದೆ. ಬಳಿಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಆದರೆ, ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಬೆಂಕಿಯನ್ನು ನಿಯಂತ್ರಣಕ್ಕೆ ತಂದ ನಂತರ ರೈಲು ತನ್ನ ಪ್ರಯಾಣವನ್ನು ಪುನರಾರಂಭಿಸಿತು.
ಸಧ್ಯಕ್ಕೆ ಯಾವುದೇ ಪ್ರಾಣಹಾನಿಯಾದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ, ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬುದು ತಿಳಿದುಬಂದಿಲ್ಲ. ಸೆಪ್ಟೆಂಬರ್ನಲ್ಲಿ ಗುಜರಾತ್ನ ವಲ್ಸಾದ್ ಬಳಿ ಹಮ್ಸಫರ್ ಎಕ್ಸ್ಪ್ರೆಸ್ನ ಪವರ್ ಕೋಚ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿ ಅಕ್ಕಪಕ್ಕದ ಎರಡು ಬೋಗಿಗಳಿಗೆ ಆವರಿಸಿತ್ತು.
ಹಮ್ಸಫರ್ ರೈಲು ತಿರುಚಿರಾಪಳ್ಳಿ ಮತ್ತು ಶ್ರೀ ಗಂಗಾನಗರ ನಡುವೆ ಚಲಿಸುತ್ತದೆ. ರೈಲು ಸೂರತ್ ಕಡೆಗೆ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿತ್ತು. ರೈಲು ಕಂಪಾರ್ಟ್ಮೆಂಟ್ಗಳಿಂದ ಬೆಂಕಿ ಮತ್ತು ಹೊಗೆ ಬರುತ್ತಿರುವುದನ್ನು ಜನರು ನೋಡಿದ್ದರು, ಇದಾದ ನಂತರ ಪ್ರಯಾಣಿಕರಲ್ಲಿ ಆತಂಕ, ಗೊಂದಲ ಸೃಷ್ಟಿಯಾಗಿತ್ತು, ಆರ್ಪಇಎಫ್ ಮತ್ತು ಜಿಆರ್ಪಿಎಫ್ ತಂಡದ ನೆರವಿನಿಂದ ಬೆಂಕಿಯನ್ನು ಹತೋಟಿಗೆ ತರಲಾಗಿತ್ತು.