ಐಶ್ವರ್ಯಾ - ಅಭಿಷೇಕ್ ಒಂದೇ ವೇದಿಕೆಯಲ್ಲಿ; ಡಿವೋರ್ಸ್ ವದಂತಿಗಳಿಗೆ ಫುಲ್ ಸ್ಟಾಪ್!
ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಮತ್ತೊಮ್ಮೆ ಭಿನ್ನಾಭಿಪ್ರಾಯ ಮತ್ತು ಡಿವೋರ್ಸ್ ವದಂತಿಗಳನ್ನು ತಮ್ಮದೇ ಶೈಲಿಯಲ್ಲಿ ತಳ್ಳಿ ಹಾಕಿದ್ದಾರೆ. ಕಳೆದ ಕೆಲ ದಿನಗಳಿಂದ ಅಭಿಷೇಕ್ ಮತ್ತು ಐಶ್ವರ್ಯ ವಿಚ್ಛೇದನ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದು ಇಬ್ಬರ ಅಭಿಮಾನಿಗಳಲ್ಲೂ ಬೇಸರ ತರಿಸಿತ್ತು. ಇದೀಗ ಇಬ್ಬರೂ ಮಂಗಳವಾರ ದಿ ಆರ್ಚೀಸ್ ಸ್ಕ್ರೀನಿಂಗ್ ಗೆ ಸ್ಟೈಲಿಶ್ ಲುಕ್‌ನಲ್ಲಿ ಒಟ್ಟಿಗೆ ಹಾಜರಾಗುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಅಮಿತಾಬ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಅವರು ಜೋಯಾ ಅಖ್ತರ್ ನಿರ್ದೇಶನದ ದಿ ಆರ್ಚೀಸ್ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಇಡೀ ಬಚ್ಚನ್ ಕುಟುಂಬ ದಿ ಆರ್ಚೀಸ್ ವಿಶೇಷ ಪ್ರದರ್ಶನಕ್ಕೆ ಹಾಜರಾಗಿತ್ತು. ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಈ ಈವೆಂಟ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.
ಐಶ್ವರ್ಯಾ, ಅಭಿಷೇಕ್ ಮತ್ತು ಅವರ ಮಗಳು ಆರಾಧ್ಯ ಮೂವರೂ ಕಪ್ಪು ಬಟ್ಟೆ ಧರಿಸಿ ಆಗಮಿಸಿದರು. ದಿ ಆರ್ಚೀಸ್ ವಿಶೇಷ ಸ್ಕ್ರೀನಿಂಗ್ ಈವೆಂಟ್‌ನಿಂದ ಬಚ್ಚನ್ ಕುಟುಂಬದ ಅನೇಕ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಆರಾಧ್ಯ ಮತ್ತು ಅಭಿಷೇಕ್ ಪಾಪರಾಜಿಗಾಗಿ ಪೋಸ್ ನೀಡುತ್ತಿದ್ದಾಗ, ಐಶ್ ಅಗಸ್ತ್ಯನನ್ನು ಕರೆದು ಒಟ್ಟಿಗೆ ಫೋಟೋ ಕ್ಲಿಕ್ಕಿಸಲು ಕೇಳುತ್ತಾರೆ. ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಅಭಿಷೇಕ್ ಬಚ್ಚನ್ ಕಪ್ಪು ಬಣ್ಣದ ಕೋಟ್ ಮತ್ತು ಪ್ಯಾಂಟ್ ಧರಿಸಿ ತಮ್ಮ ಸ್ಟೈಲಿಶ್ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಐಶ್ವರ್ಯಾ ರೈ ಕಪ್ಪು ಬಣ್ಣದ ಉದ್ದನೆಯ ಉಡುಪನ್ನು ಧರಿಸಿದ್ದರು. ಅದರ ಮೇಲೆ ಸಿಲ್ವರ್ ದಾರದ ಡಿಸೈನ್ ಮಾಡಲಾಗಿದೆ. ಐಶ್ವರ್ಯ-ಅಭಿಷೇಕ್ ಪುತ್ರಿ ಆರಾಧ್ಯ ಕೂಡ ಕಪ್ಪು ಬಣ್ಣದ ಸ್ಟೈಲಿಶ್ ಕೋಟ್-ಫ್ರಾಕ್ ಧರಿಸಿ ಕಾಣಿಸಿಕೊಂಡಿದ್ದರು. ಅಭಿಷೇಕ್, ಐಶ್ವರ್ಯಾ ಮತ್ತು ಆರಾಧ್ಯ ಅವರ ಲುಕ್‌ಗೆ ನೆಟಿಜನ್‌ಗಳು ಫಿದಾ ಆಗಿದ್ದಾರೆ.
Rashmika Mandanna: ʻದಿಯಾʼ ಹೀರೊ ಜತೆ ರಶ್ಮಿಕಾ ಮಂದಣ್ಣ ರೊಮ್ಹಾನ್ಸ್!
ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ (Rashmika Mandanna) ‘ದಿ ಗರ್ಲ್‌ಫ್ರೆಂಡ್’ ಎಂಬ ರೋಮಾಂಚಕ ಪ್ರೇಮಕಥೆಯಲ್ಲಿ ನಾಯಕಿಯಾಗಿ ನಟಿಸಲು ಸಿದ್ಧರಾಗಿದ್ದಾರೆ. ಏಳು ವರ್ಷಗಳ ವೃತ್ತಿಜೀವನದಲ್ಲಿ ಇದು ನಟಿಯ 24ನೇ ಚಿತ್ರವಾಗಿದೆ. ‘ದಿ ಗರ್ಲ್‌ಫ್ರೆಂಡ್’ ರಶ್ಮಿಕಾ ಅವರ ಸೋಲೊ ಸಿನಿಮಾ ಎನ್ನಲಾಗಿದೆ. ಚಿತ್ರವನ್ನು ರಾಹುಲ್ ರವೀಂದ್ರನ್ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾಗೆ ಕನ್ನಡದ ‘ದಿಯಾ’ ಚಿತ್ರದಲ್ಲಿ ನಟಿಸಿ ಗೆದ್ದಿದ್ದ ನಟ ದೀಕ್ಷಿತ್ ಶೆಟ್ಟಿ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದಾರೆ. ಇತ್ತೀಚೆಗೆ ತೆಲುಗಿನ ‘ದಸರಾ’ ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ ನಟ ನಾನಿ ಸ್ನೇಹಿತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ರಶ್ಮಿಕಾ ಮಂದಣ್ಣ ‘ಅನಿಮಲ್’ ಸಿನಿಮಾ ಸಕ್ಸೆಸ್ ಅಲ್ಲಿ ತೇಲುತ್ತಿದ್ದಾರೆ. ರಶ್ಮಿಕಾ ಬೋಲ್ಡ್ ದೃಶ್ಯಗಳಲ್ಲಿ ನಟಿಸಿರುವ ಬಗ್ಗೆಯೂ ಚರ್ಚೆ ಆಗುತ್ತಿದೆ. ಇದೀಗ ರಶ್ಮಿಕಾ ‘ದಿ ಗರ್ಲ್‌ಫ್ರೆಂಡ್’ ಎನ್ನುವ ಮಹಿಳಾ ಪ್ರಧಾನ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಗೀತಾ ಆರ್ಟ್ಸ್ ಬ್ಯಾನರ್‌ನಲ್ಲಿ ಅಲ್ಲು ಅರವಿಂದ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಬರಹಗಾರ ರಾಹುಲ್ ರವೀಂದ್ರನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ದೀಕ್ಷಿತ್ ಶೆಟ್ಟಿ ಅವರು ಕನ್ನಡದಲ್ಲಿ ‘ಬ್ಲಿಂಕ್’, ‘ಕೆಟಿಎಂ’, ‘ಶೀಘ್ರವೇಮ ಕಲ್ಯಾಣ ಪ್ರಾಪ್ತಿರಸ್ತು’, ‘ಸ್ಟ್ರಾಬೆರಿ’ ಹಾಗೂ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಚಿತ್ರಗಳಲ್ಲಿ ದೀಕ್ಷಿತ್ ನಟಿಸುತ್ತಿದ್ದಾರೆ. 15 ದಿನಗಳ ಹಿಂದೆಯಷ್ಟೆ ‘ದಿ ಗರ್ಲ್‌ಫ್ರೆಂಡ್’ ಸಿನಿಮಾ ಮುಹೂರ್ತ ನೆರವೇರಿತ್ತು. ಇದೀಗ ಸಿನಿಮಾ ಚಿತ್ರೀಕರಣ ಸಹ ಆರಂಭವಾಗಿದೆ. ಮೊದಲ ದಿನ ದೀಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಇಬ್ಬರೂ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ.
ಗೀತಾ ಆರ್ಟ್ಸ್ ಅವರ 51ನೇ ಸಿನಿಮಾವಿದು. ರಶ್ಮಿಕಾ ಮಂದಣ್ಣ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಅವರು, ‘ರೇನ್ಬೋ, ‘ಡಿ 51’, ‘ಛಾವಾ’, ‘ಪುಷ್ಪ: ದಿ ರೂಲ್’, ಮತ್ತು ರವಿತೇಜಾ ಅವರೊಂದಿಗೆ ಹೆಸರಿಡದ ಚಿತ್ರದಲ್ಲಿ ಮುಂದಿನ ದಿನಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಶೀಘ್ರದಲ್ಲೇ ಚಿತ್ರಕ್ಕಾಗಿ ಮತ್ತೆ ಒಂದಾಗುತ್ತಾರೆ ಎಂದು ವದಂತಿಗಳಿವೆ.