ಸೋಮವಾರ, ಡಿಸೆಂಬರ್ 23, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಅನಿಮಲ್ ಸಿನೆಮಾ ಸಕ್ಸಸ್ ನಲ್ಲಿ ರಣಬೀರ್ ಕಪೂರ್ ಜತೆ ತೃಪ್ತಿ ಡಿಮ್ರಿ ನಗ್ನವಾಗಿರುವ ಲಿಪ್-ಲಾಕ್ ದೃಶ್ಯ ಕೂಡ ಒಂದು..!

Twitter
Facebook
LinkedIn
WhatsApp
ಅನಿಮಲ್ ಸಿನೆಮಾ ಸಕ್ಸಸ್ ನಲ್ಲಿ ರಣಬೀರ್ ಕಪೂರ್ ಜತೆ ತೃಪ್ತಿ ಡಿಮ್ರಿ ನಗ್ನವಾಗಿರುವ ಲಿಪ್-ಲಾಕ್ ದೃಶ್ಯ ಕೂಡ ಒಂದು..!

ಬೆಂಗಳೂರು: ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ (Triptii Dimri) ʼಅನಿಮಲ್‌ʼ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಎಲ್ಲಾ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ. ಇನ್ನೆರಡು ವಾರಗಳಲ್ಲಿ 900 ಕೋಟಿ ರೂ. ಗಳಿಸುವ ಹಂತಕ್ಕೆ ತಲುಪಿದೆ. ಈ ಚಿತ್ರದಲ್ಲಿ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್, ಬಾಬಿ ಡಿಯೋಲ್, ತೃಪ್ತಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಹೆಚ್ಚಾಗಿ ಸಿನಿಮಾದಲ್ಲಿ ಸೌಂಡ್‌ ಮಾಡಿದ್ದು ನಟಿ ತೃಪ್ತಿ ಡಿಮ್ರಿ ಅವರ ಬೆತ್ತಲೆ ಸೀನ್‌. ಸಿನಿಮಾ ಸಕ್ಸೆಸ್‌ಗೆ ಹಲವಾರು ಕಾರಣಗಳಿದ್ದು, ಅವುಗಳಲ್ಲಿ ರಣಬೀರ್ ಕಪೂರ್ ಅವರ ಜತೆ ತೃಪ್ತಿ ಡಿಮ್ರಿ ನಗ್ನವಾಗಿರುವ ಲಿಪ್-ಲಾಕ್ ದೃಶ್ಯ ಕೂಡ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಚಿತ್ರದಲ್ಲಿ ತೃಪ್ತಿ ಡಿಮ್ರಿ ಅವರು ʻಜೋಯಾʼ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಪಾತ್ರದ ತೃಪ್ತಿ ಡಿಮ್ರಿ ಅಭಿನಯವನ್ನು ವಿಮರ್ಶಕರು ಮತ್ತು ಪ್ರೇಕ್ಷಕರು ಶ್ಲಾಘಿಸಿದ್ದಾರೆ. ಇತ್ತೀಚಿನ ಮಾಧ್ಯಮದ ಸಂದರ್ಶನವೊಂದರಲ್ಲಿ “ಜೋಯಾʼ ತಮ್ಮ ಬೋಲ್ಡ್‌ ಸೀನ್‌ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡರು. ಮಾತ್ರವಲ್ಲ ಬೋಲ್ಡ್‌ ಸೀನ್‌ ದೃಶ್ಯಗಳ ಚಿತ್ರೀಕರಣದ ಸಮಯದಲ್ಲಿ ರಣಬೀರ್‌ ಕಪೂರ್‌ ಅವರು ಹೇಗೆ ತಮಗೆ ಸಪೋರ್ಟಿವ್‌ ಆಗಿದ್ದರು ಎಂಬದನ್ನು ಬಹಿರಂಗಪಡಿಸಿದರು.

ಇಂಟಿಮೇಟ್ ದೃಶ್ಯದ ಕುರಿತು ತೃಪ್ತಿ ಡಿಮ್ರಿ ಮಾತನಾಡಿ ʻʻಪ್ರಾಜೆಕ್ಟ್‌ಗೆ ಸಹಿ ಮಾಡುವಾಗ ಈ ರೀತಿ ಒಂದು ಬೋಲ್ಡ್‌ ದೃಶ್ಯವಿದೆ ಎಂದಿದ್ದರು ನಿರ್ದೇಶಕರು. ಶೂಟ್‌ ಮಾಡುವ ಮುಂಚೆ ಕೂಡ ಪಾತ್ರದ ಬಗ್ಗೆ ಅದೆಷ್ಟೋ ಬಾರಿ ನನಗೆ ನಿರ್ದೇಶಕರು ವಿವರಿಸಿದ್ದರು. ಇಂತಹ ದೃಶ್ಯಗಳನ್ನು ಶೂಟ್‌ ಮಾಡುವಾಗ ಸುತ್ತಮುತ್ತಲಿನ ಪರಿಸರವೂ ಬಹಳ ಮುಖ್ಯ. ನಿಮ್ಮ ಸುತ್ತಲಿನ ಜನರು ಮೊದಲು ನಿಮಗೆ ಕಮ್‌ಫರ್ಟ್‌ ಆಗಿರಬೇಕು. ಆಗ ಮಾತ್ರ ಇಂತಹ ದೃಶ್ಯಗಳನ್ನು ಶೂಟ್‌ ಮಾಡಲು ಸಾದ್ಯʼʼ ಎಂದರು.

ಇಂಟಿಮೇಟ್ ದೃಶ್ಯ ಮಾಡುವಾಗೆಲ್ಲ ರಣಬೀರ್ ಪ್ರತಿ 5 ನಿಮಿಷಗಳಿಗೊಮ್ಮೆ ಬಂದು ʻʻare you Okay” ಎಂದು ಎಷ್ಟೋ ಬಾರಿ ಬಂದು ಕೇಳಿದ್ದೂ ಇದೆ. ಚಿತ್ರೀಕರಣದ ಸಮಯದಲ್ಲಿ ನಿರ್ದೇಶಕರು, ಡಿಒಪಿ (ಛಾಯಾಗ್ರಹಕರು) ಮತ್ತು ನಟರು ಸೇರಿದಂತೆ 5ಕ್ಕಿಂತ ಹೆಚ್ಚು ಜನರಿರಲಿಲ್ಲ. ಸೆಟ್‌ನಲ್ಲಿ ಬೇರೆಯವರಿಗೆ ಅವಕಾಶ ಕೂಡ ನೀಡಲಿಲ್ಲ, ಎಲ್ಲಾ ಮಾನಿಟರ್‌ಗಳನ್ನು ಮುಚ್ಚಲಾಗಿತ್ತು. ಯಾವುದೇ ಹಂತದಲ್ಲಿ ನೀವು ಅಹಿತಕರವೆಂದು ಭಾವಿಸಿದರೆ, ನಮಗೆ ತಿಳಿಸಿ ಎಂದು ನಿರ್ದೇಶಕರು ನನಗೆ ಕೇರ್‌ ಮಾಡಿ ಈ ದೃಶ್ಯವನ್ನು ತೆಗೆದರುʼʼ ಎಂದರು. ರಣಬೀರ್ ಆಗಾಗ ನನ್ನನ್ನು ವಿಚಾರಿಸುತ್ತಾ, ‘ನೀವು ಆರಾಮದಾಯಕವಾಗಿದ್ದೀರಾ?’ ಎಂದು ಕೇಳುತ್ತಿದ್ದರು, ಈ ವಿಷಯಗಳು ನಿಜವಾಗಿಯೂ ಮುಖ್ಯವೆಂದು ನಾನು ಭಾವಿಸುತ್ತೇನೆʼʼ ಎಂದರು.

ʻʻಈ ರೀತಿ ಶೂಟ್‌ಗಳನ್ನು ಪ್ರೇಕ್ಷಕರು ನೋಡದ ಕಾರಣ ಹಲವು ಬಾರಿ ನನಗೆ ನೆಗೆಟಿವ್‌ ಆಗಿ ಪ್ರಶ್ನಿಸಿದ್ದಾರೆ. ಆದರೆ ಅಂತಹ ಬೋಲ್ಡ್‌ ದೃಶ್ಯಗಳನ್ನು ಮಾಡುವಾಗ ಸೆಟ್‌ಗಳಲ್ಲಿ ಅತ್ಯಂತ ಸೂಕ್ಷ್ಮವಾಗಿರುತ್ತಾರೆ. ನನಗೆ ತುಂಬಾ ಆರಾಮದಾಯಕವಾಗುವಂತೆ ಈ ಸೀನ್‌ ಮಾಡಲಾಯಿತು. ಸ್ವಲ್ಪವೂ ನನಗೆ ಸಮಸ್ಯೆಯಾಗಲಿಲ್ಲʼʼ ಎಂದಿದ್ದಾರೆ.

“ನಾನು ಸಂದೀಪ್ ಸರ್ ಅವರೊಂದಿಗೆ ಪಾತ್ರಕ್ಕಾಗಿ ಚರ್ಚೆ ನಡೆಸಿದಾಗ, ಇದು ನೆಗೆಟಿವ್‌ ಪಾತ್ರ ಎಂದು ಅವರು ಹೇಳಿದರು. ನಾನು ಸಂಪೂರ್ಣವಾಗಿ ನೆಗೆಟಿವ್‌ ಆಗಿ ತೋರಿಸುವುದಿಲ್ಲ. ಬದಲಿಗೆ, ಜನರು ಜೋಯಾ ಪಾತ್ರದ ಮುಗ್ಧತೆಯನ್ನು ನೋಡಬೇಕು ಎಂದಿದ್ದರುʼʼ ಎಂದು ಹೇಳಿದರು.

ಚಲನಚಿತ್ರ ವಿಮರ್ಶಕ ಮತ್ತು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಕೂಡ ʻಅನಿಮಲ್‌ʼ ಸಿನಿಮಾ ರಣಬೀರ್ ಅವರ ವೃತ್ತಿಜೀವನದ ಅತಿದೊಡ್ಡ ಓಪನರ್ ಎಂದು ಭವಿಷ್ಯ ನುಡಿದಿದ್ದರು. ’ಕಬೀರ್ ಸಿಂಗ್’ ನಂತರ ‘ಅನಿಮಲ್’ ಸಂದೀಪ್ ರೆಡ್ಡಿ ವಂಗಾ ಅವರ ಎರಡನೇ ಬಾಲಿವುಡ್ ಚಿತ್ರವಾಗಿತ್ತು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist