ನನ್ನ ಸಾವಿಗೆ ನಾನೇ ಕಾರಣ ಕ್ಷಮಿಸು ವನಿತಾ ;ಡೆತ್‌ನೋಟ್ ಬರೆದಿಟ್ಟು ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯ ಆತ್ಮಹತ್ಯೆಗೆ ಶರಣು!
ಪುತ್ತೂರು ಡಿಸೆಂಬರ್ 04: ನನ್ನ ಸಾವಿಗೆ ನಾನೇ ಕಾರಣ ಕ್ಷಮಿಸು ವನಿತಾ..ಮಕ್ಕಳನ್ನು ನೋಡಿಕೋ’ ಎಂಬುದಾಗಿ ಡೆತ್‌ನೋಟ್ ಬರೆದಿಟ್ಟಿದ್ದದ್ದು ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯರೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಮೃತರನ್ನು ಅರಿಯಡ್ಕ ಗ್ರಾಮ ಪಂಚಾಯತ್‌ನ ಕಾಂಗ್ರೆಸ್ ಬೆಂಬಲಿತ ಸದಸ್ಯ, ಮಾಡ್ನೂರು ಗ್ರಾಮದ ಬಂಗ್ಲೆಗುಡ್ಡೆ ನಿವಾಸಿ ಶಂಕರ(41ವ.)ಎಂದು ಗುರುತಿಸಲಾಗಿದೆ. ಶಂಕರ್ 5 ವರ್ಷಗಳ ಹಿಂದೆ ಸಾಲ ಮಾಡಿ ಜಾಗ ಖರೀದಿ ಮಾಡಿದ್ದು, ಸಾಲ ಮರುಪಾವತಿ ಚಿಂತೆಯಲ್ಲಿದ್ದ ಅವರು ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರು ಎನ್ನಲಾಗಿದೆ. ಡಿ.3ರಂದು ಮನೆಯವರು ಮಲಗಿದ್ದಾಗ ಮನೆಯ ಒಳಗಡೆಯೇ ಆತ್ಮಹತ್ಯೆ ಮಾಡಿಕೊಂಡಿದ್ದು, ಮರುದಿನ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಪತ್ನಿ ವನಿತಾ ನೀಡಿದ ದೂರಿನಂತೆ ಸಂಪ್ಯ ಠಾಣೆಯಲ್ಲಿ ಪ್ರ ಕರಣ ದಾಖಲಾಗಿದೆ
ನನ್ನ ಸಾವಿಗೆ ನಾನೇ ಕಾರಣ ಕ್ಷಮಿಸು ವನಿತಾ..ಮಕ್ಕಳನ್ನು ನೋಡಿಕೋ’ ಎಂಬುದಾಗಿ ಡೆತ್‌ನೋಟ್ ಬರೆದಿಟ್ಟಿದ್ದದ್ದು ಪತ್ತೆಯಾಗಿದೆ.ವೀಪರಿತ ಸಾಲ ಮಾಡಿ ಸಾಲವನ್ನು ಕಟ್ಟಲಾಗದೆ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ವನಿತಾ ಅವರು ತಿಳಿಸಿದ್ದಾರೆ.
ಬೆಳ್ತಂಗಡಿ – ರಸ್ತೆ ಬದಿಯಲ್ಲಿದ್ದ ಗೂಡಂಗಡಿ ನಾಶ ಮಾಡಿದ ಕಿಡಿಗೇಡಿಗಳು
ಬೆಳ್ತಂಗಡಿ ಡಿಸೆಂಬರ್ 03: ರಸ್ತೆ ಬದಿಯಲ್ಲಿದ್ದ ಗೂಡಂಗಡಿಗಳನ್ನು ಕಿಡಿಗೇಡಿಗಳು ರಾತ್ರಿ ವೇಳೆ ಧ್ವಂಸ ಮಾಡಿದ ಘಟನೆ ನಿಡ್ಲೆ ಗ್ರಾಮದ ಬೂಡುಜಾಲು ಎಂಬಲ್ಲಿ ನಡೆದಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೊಕ್ಕಡ ಗ್ರಾಮದ ಮಲ್ಲಿಗೆಮಜಲು ನಿವಾಸಿ ಅಬ್ದುಲ್ ಅಝೀಝ್ ಎಂಬವರು ತಮ್ಮ ಜೀವನೋಪಾಯಕ್ಕಾಗಿ ರಾಜ್ಯ ಹೆದ್ದಾರಿಯ ಬದಿಯಲ್ಲಿ ಗೂಡಂಗಡಿಯನ್ನು ಹಾಕಿ ವ್ಯಾಪಾರ ನಡೆಸುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಈ ಗೂಡಂಗಡಿ ಕಾರ್ಯ ನಿರ್ವಹಿಸುತ್ತಿತ್ತು. ರಸ್ತೆ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ಗೂಡಂಗಡಿಯನ್ನು ನಿರ್ಮಿಸಲಾಗಿತ್ತು.