ಅಸ್ಸಾಂ ಹಾಗೂ ಮಣಿಪುರದಿಂದ ಬೆಂಗಳೂರಿಗೆ ಕಳ್ಳ ಅಡಿಕೆ ಸಾಗಾಟ; 24.26 ಲಕ್ಷ ರೂ. ದಂಡ ವಿಧಿಸಿದ ತೆರಿಗೆ ಅಧಿಕಾರಿಗಳು!
ರೈತರ ಹೆಸರಲ್ಲಿ ದಾಖಲೆ ಇಲ್ಲದೆ 460 ಬ್ಯಾಗ್ ಅಂದರೆ 11.500 ಕೆಜಿ ಅಡಿಕೆ (areca nut) ಕಳ್ಳಸಾಗಣೆ ಮಾಡಿರುವಂತಹ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ವಾಣಿಜ್ಯ ತೆರಿಗೆ ಇಲಾಖೆ ಜಾಗೃತ ದಳದ ಅಧಿಕಾರಿಗಳಿಂದ ಸದ್ಯ ಅಡಿಕೆಯನ್ನು ವಶಕ್ಕೆ ಪಡೆದಿದ್ದು, 24.26 ಲಕ್ಷ ರೂ. ದಂಡ ವಿಧಿಸಿದ್ದಾರೆ. ಡಿಜಿಟಲ್ ಸಾಕ್ಷ್ಯಗಳ ಆಧಾರದ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಪ್ರಕರಣ ಭೇದಿಸಿದ್ದಾರೆ. ಅಸ್ಸಾಂ ಹಾಗೂ ಮಣಿಪುರದಿಂದ ಮಧ್ಯಪ್ರದೇಶ ಹಾಗೂ ಬೆಂಗಳೂರಿಗೆ ಅಡಿಕೆ ಸಾಗಾಟ ಮಾಡಲಾಗುತಿತ್ತು. ಮಯನ್ಮಾರ್ ನಿಂದ ಅಡಿಕೆಯನ್ನ ಕಳ್ಳಸಾಗಣೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಈ ಬಗ್ಗೆ ಅಸ್ಸಾಂ, ಮಣಿಪುರ ಹಾಗೂ ಮಧ್ಯಪ್ರದೇಶ ಜಿಎಸ್ಟಿ ಅಧಿಕಾರಿಗಳಿಂದ ತನಿಖೆ ಮಾಡಲಾಗುತ್ತಿದೆ. ಕಡಿಮೆ ಗುಣಮಟ್ಟ ಹಾಗೂ ಕಡಿಮೆ ಬೆಲೆಯ ಅಡಿಕೆ ತಂದು ಸ್ಥಳೀಯ ಅಡಿಕೆಯಲ್ಲಿ ಕಲಬೆರಕೆ ಮಾಡುವ ಸಂಚು ರೂಪಿಸಲಾಗಿದೆ.
ರಾಜಸ್ಥಾನದಲ್ಲಿ ಮಾಜಿ ಸಿಎಂ ವಸುಂಧರಾ ರಾಜೆಗೆ ಭರ್ಜರಿ ಗೆಲುವು
ಬಿಜೆಪಿ ನಾಯಕಿ ಮತ್ತು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ವಸುಂಧರಾ ರಾಜೆ ಅವರು ಝಲ್ರಾಪಟಾನ್ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಎದುರು 53,193 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಇನ್ನು ಮತ ಎಣಿಕೆ ನಡೆಯುತ್ತಿದ್ದಂತೆ ಪಕ್ಷವು ಬಹುಮತ ದಾಟುತ್ತಿದ್ದಂತೆ ಬಿಜೆಪಿಯ ರಾಜ್ಯ ಪ್ರಧಾನ ಕಚೇರಿಯಲ್ಲಿ ಸಂಭ್ರಮಾಚರಣೆಗಳು ನಡೆದಿದೆ.