ಸೋಮವಾರ, ಡಿಸೆಂಬರ್ 23, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ರಷ್ಯಾದ ಪ್ರತಿಯೊಬ್ಬ ವಿವಾಹಿತ ಮಹಿಳೆಯೂ ಕನಿಷ್ಠ 8 ಮಕ್ಕಳನ್ನು ಹೆರಬೇಕು ; ಅಧ್ಯಕ್ಷ ಪುಟಿನ್ ಕರೆ!

Twitter
Facebook
LinkedIn
WhatsApp
ರಷ್ಯಾದ ಪ್ರತಿಯೊಬ್ಬ ವಿವಾಹಿತ ಮಹಿಳೆಯೂ ಕನಿಷ್ಠ 8 ಮಕ್ಕಳನ್ನು ಹೆರಬೇಕು ; ಅಧ್ಯಕ್ಷ ಪುಟಿನ್ ಕರೆ!

ಮಾಸ್ಕೋ (ಡಿಸೆಂಬರ್ 2, 2023): ದೇಶದ ಜನಸಂಖ್ಯೆ ಹೆಚ್ಚಿಸಲು ರಷ್ಯಾದ ಪ್ರತಿಯೊಬ್ಬ ವಿವಾಹಿತ ಮಹಿಳೆಯೂ ಕನಿಷ್ಠ 8 ಮಕ್ಕಳನ್ನು ಹೆರಬೇಕು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಕರೆ ನೀಡಿದ್ದಾರೆ. ರಷ್ಯಾದ ಜನನ ಪ್ರಮಾಣವು 1990 ರ ದಶಕದಿಂದಲೂ ಕುಸಿಯುತ್ತಿದೆ ಮತ್ತು ಕಳೆದ ವರ್ಷ ಫೆಬ್ರವರಿಯಲ್ಲಿ ಉಕ್ರೇನ್ ಜತೆ ಯುದ್ಧ ಪ್ರಾರಂಭವಾದಾಗಿನಿಂದ ದೇಶದಲ್ಲಿ 3 ಲಕ್ಷಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಅಲ್ಲದೇ 8 ರಿಂದ 9 ಲಕ್ಷ ಜನರು ದೇಶವನ್ನು ತೊರೆದಿದ್ದಾರೆ ಎಂದು ವರದಿಯಾಗಿದೆ.

ಈ ಹಿನ್ನೆಲೆಯಲ್ಲಿ ಮಂಗಳವಾರ ಮಾಸ್ಕೋದಲ್ಲಿ ವರ್ಲ್ಡ್‌ ರಷ್ಯನ್ ಪೀಪಲ್ಸ್ ಕೌನ್ಸಿಲ್ ಅನ್ನು ಉದ್ದೇಶಿಸಿ ಮಾತನಾಡಿದ ವ್ಲಾಡಿಮಿರ್‌ ಪುಟಿನ್ ‘ಮುಂಬರುವ ದಶಕಗಳಲ್ಲಿ ಮತ್ತು ಮುಂದಿನ ಪೀಳಿಗೆಗೆ ರಷ್ಯಾದ ಜನಸಂಖ್ಯೆಯನ್ನು ಸಂರಕ್ಷಿಸುವುದು ಮತ್ತು ಹೆಚ್ಚಿಸುವುದು ನಮ್ಮ ಗುರಿಯಾಗಿದೆ.’ ಎಂದಿದ್ದಾರೆ.

ಅಲ್ಲದೇ ನಮ್ಮ ಅನೇಕ ಜನಾಂಗೀಯ ಗುಂಪುಗಳು ನಾಲ್ಕು, ಐದು ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಪಡೆಯುವ ಮೂಲಕ ದೊಡ್ಡ ಕುಟುಂಬವನ್ನು ಹೊಂದುವ ಸಂಪ್ರದಾಯವನ್ನು ರಕ್ಷಿಸಿವೆ. ನಮ್ಮ ಅಜ್ಜಿ, ಮುತ್ತಜ್ಜಿಯರು ಏಳು, ಎಂಟು ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಿದ್ದರು. 

ನಾವು ಈ ಸಂಪ್ರದಾಯ ರಕ್ಷಿಸೋಣ. ಪ್ರತಿಯೊಬ್ಬ ಮಹಿಳೆಯೂ ಕನಿಷ್ಠ 8 ಮಕ್ಕಳಿಗೆ ಜನ್ಮ ನೀಡಿ. ದೊಡ್ಡ ಕುಟುಂಬಗಳು ಉದಯಿಸಲಿ. ಕುಟುಂಬವು ಕೇವಲ ರಾಜ್ಯ ಮತ್ತು ಸಮಾಜದ ಅಡಿಪಾಯವಲ್ಲ. ಇದು ಆಧ್ಯಾತ್ಮಿಕ ವಿದ್ಯಮಾನ ಮತ್ತು ನೈತಿಕತೆಯ ಮೂಲವಾಗಿದೆ ಎಂದೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಪ್ರೇರೇಪಿಸಿದ್ದಾರೆ.

ಸಮ್ಮೇಳನವನ್ನು ರಷ್ಯಾದ ಆರ್ಥೊಡಾಕ್ಸ್ ಚರ್ಚ್‌ನ ಮುಖ್ಯಸ್ಥ ಪೇಟ್ರಿಯಾರ್ಕ್‌ ಕಿರಿಲ್ ಆಯೋಜಿಸಿದ್ದರು ಮತ್ತು ರಷ್ಯಾದ ಹಲವಾರು ಸಾಂಪ್ರದಾಯಿಕ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು ಎಂದು ದಿ ಇಂಡಿಪೆಂಡೆಂಟ್ ಹೇಳಿದೆ. ರಷ್ಯಾದ ಅಧ್ಯಕ್ಷರ ಕಾಮೆಂಟ್‌ಗಳು ಉಕ್ರೇನ್ ಯುದ್ಧದಲ್ಲಿ ರಷ್ಯಾದ ಸೈನಿಕರು ಅನುಭವಿಸಿದ ಸಾವುನೋವುಗಳ ಪ್ರಮಾಣವನ್ನು ನೇರವಾಗಿ ಉಲ್ಲೇಖಿಸದಿದ್ದರೂ, ಅನೇಕ ಮಧ್ಯಮಗಳು ಅದನ್ನು ಸಂಘರ್ಷಕ್ಕೆ ಸಂಬಂಧಿಸಿವೆ.

ಉಕ್ರೇನ್‌ನಲ್ಲಿ ಸತ್ತವರ ಸಂಖ್ಯೆ 3 ಲಕ್ಷ ದಾಟಿರಬಹುದು ಎಂದು ಯುಕೆ ರಕ್ಷಣಾ ಸಚಿವಾಲಯ ಹೇಳಿದೆ. ಇನ್ನು, ಸ್ವತಂತ್ರ ರಷ್ಯಾದ ನೀತಿ ಗುಂಪು Re:Russia ಅಂದಾಜು 8,20,000 ರಿಂದ 9,20,000 ಜನರು ದೇಶವನ್ನು ತೊರೆದಿದ್ದಾರೆ ಎಂದು ವರದಿ ಮಾಡಿದೆ. 

ದಂಗೆ ಹತ್ತಿಕ್ಕಿದ ಕ್ರಮಕ್ಕೆ ರಷ್ಯಾ ಅಧ್ಯಕ್ಷ ಪುಟಿನ್‌ಗೆ ಪ್ರಧಾನಿ ಮೋದಿ ಮೆಚ್ಚುಗೆ

ಮಾಸ್ಕೋ (ಜುಲೈ 1, 2023): ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಶುಕ್ರವಾರ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ‘ರಷ್ಯಾದಲ್ಲಿ ಉಂಟಾಗಿದ್ದ ದಂಗೆಯನ್ನು ಹತ್ತಿಕ್ಕಿದ ಪುಟಿನ್‌ ಕ್ರಮಕ್ಕೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದು ರಷ್ಯಾ ಹೇಳಿದೆ. ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಶೃಂಗಸಭೆಗೆ ಕೆಲವು ದಿನಗಳ ಮೊದಲೇ ಉಭಯ ನಾಯಕರು ದ್ವಿಪಕೀಯ ಸಂಬಂಧ, ಉಕ್ರೇನ್‌ ಯುದ್ಧದ ಪರಿಸ್ಥಿತಿ, ರಷ್ಯಾದಲ್ಲಿ ನಡೆದ ದಂಗೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ರಷ್ಯಾ, ‘ಉಭಯ ನಾಯಕರ ನಡುವೆ ಸಂಭಾಷಣೆ ಅರ್ಥಪೂರ್ಣ ಮತ್ತು ರಚನಾತ್ಮಕವಾಗಿತ್ತು. ಭಾರತ ಮತ್ತು ರಷ್ಯಾ ನಡುವಿನ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಬಲಗೊಳ್ಳುವ ನಿಟ್ಟಿನಲ್ಲಿ ಉಭಯ ನಾಯಕರು ಮಾತುಕತೆ ನಡೆಸಿದರು. ಈ ವೇಳೆ ಉಕ್ರೇನ್‌ ಯುದ್ಧ ಪರಿಸ್ಥಿತಿಯ ಕುರಿತಾಗಿಯೂ ಚರ್ಚೆ ನಡೆಸಲಾಯಿತು. ಉಕ್ರೇನ್‌ ರಾಜತಾಂತ್ರಿಕ ಮಾರ್ಗಕ್ಕೆ ಒಪ್ಪಿಕೊಳ್ಳದಿರುವುದನ್ನೂ ಮೋದಿ ಅವರಿಗೆ ತಿಳಿಸಲಾಯಿತು’ ಎಂದು ಹೇಳಿದೆ.

ಅಲ್ಲದೆ, ‘ರಷ್ಯಾದಲ್ಲಿ ಯೆವ್ಗೆನಿ ಪ್ರಿಗೋಜಿನ್‌ ಮತ್ತು ಆತನ ವ್ಯಾಗ್ನರ್‌ ಗುಂಪು ನಡೆಸಿದ ದಂಗೆಯನ್ನು ಹತ್ತಿಕ್ಕಲು ತೆಗೆದುಕೊಂಡ ಕ್ರಮಗಳ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದರು. ಈ ವೇಳೆ ರಷ್ಯಾದ ಕ್ರಮಕ್ಕೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು’ ಎಂದು ರಷ್ಯಾ ಆಡಳಿತ ಹೇಳಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist