ಕೋಳಿಯ ಖಾಸಗಿ ಭಾಗಕ್ಕೆ ಪಟಾಕಿ ತುರುಕಿ ಸಿಡಿಸಿದ ಕ್ರೂರರು ; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ನೋಡಿ ಶಿಕ್ಷೆಗೆ ಆಗ್ರಹ..!
ನವದೆಹಲಿ: ನಾಲ್ವರು ಹುಡುಗರು ಕೋಳಿಯ (Hen) ಖಾಸಗಿ ಭಾಗಕ್ಕೆ (Private Part) ಪಟಾಕಿ ತುರುಕಿ(Firecracker), ಸಿಡಿಸಿದ ಘಟನೆ ಅಸ್ಸಾಮ್‌ನ ನಗಾಂವ್ ಜಿಲ್ಲೆಯ (Nagaon district) ರಾಹಾ ಗಾಂವ್‌ನಲ್ಲಿ (Raha Gaon) ನಡೆದಿದೆ. ಪಟಾಕಿ ಸಿಡಿತಕ್ಕೆ ಕೋಳಿ ನರಳಿ ಮೃತಪಟ್ಟಿದೆ. ಈ ಘಟನೆಯ ವಿಡಿಯೋ (Viral Video) ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಬಹಳಷ್ಟು ಜನರು ಹುಡುಗರ ಕ್ರೂರತನವನ್ನು ಖಂಡಿಸಿದ್ದು, ಶಿಕ್ಷೆಗೆ ಆಗ್ರಹಿಸಿದ್ದಾರೆ. ಕೋಳಿಯ ಖಾಸಗಿ ಭಾಗದಲ್ಲಿ ನಾಲ್ವರು ಹುಡುಗರು ಪಟಾಕಿಯನ್ನು ತುರುಕುತ್ತಾರೆ ಮತ್ತು ಇಬ್ಬರು ಪಟಾಕಿಗೆ ಬೆಂಕಿ ಹಚ್ಚುತ್ತಾರೆ. ಆಗ ಪಟಾಕಿ ಸ್ಫೋಟಗೊಂಡು ಕೋಳಿ ನರಳಿ ಸಾಯುವುದನ್ನು ವಿಡಿಯೋದಲ್ಲಿ ಕಾಣಬಹುದು.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಎನ್‌ಜಿಒ, ಪೀಪಲ್ ಫಾರ್ ಅನಿಮಲ್ಸ್ (ಪಿಎಫ್‌ಎ) ಗಮನಕ್ಕೆ ಬಂದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಡಳಿತ ಮತ್ತು ಪೊಲೀಸರನ್ನು ಪೋಸ್ಟ್‌ನಲ್ಲಿ ಟ್ಯಾಗ್ ಮಾಡಲಾಗಿದೆ. ವಿಶೇಷ ಎಂದರೆ, ಕೋಳಿ ಸತ್ತ ಬಳಿಕವೂ ಹುಡುಗರು ಅದರ ಜೋಕ್ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು.
An unfortunate incident occurred where a hen fell victim to a merciless act in Raha Gaon, Assam.
— BHARAT not I.N.D.I.A (@IAmNixz) November 19, 2023
4 boys inserted a firecracker in her private part and burst it.
The poor hen died a painful death.
Phone numbers: Utpal: 6001544392, Vishal: 9365584601, 8761022370@assampolice pic.twitter.com/CqzNs8mxiN
ಇನ್‌ಸ್ಟಾಗ್ರಾಮ್‌ನಲ್ಲಿ ದೀರ್ಘ ಪೋಸ್ಟ್ ಮಾಡಿರುವ ಪೀಪಲ್ ಫಾರ್ ಆ್ಯನಿಮಲ್ಸ್(ಪಿಎಫ್ಎ), ಅಸ್ಸಾಮ್‌ನ ರಾಹಾ ಗಾಂವ್‌ನಲ್ಲಿ ಕ್ರೂರತನಕ್ಕೆ ಕೋಳಿಯೊಂದು ಬಲಿಯಾಗಿರುವ ದುರದೃಷ್ಟಕರ ಘಟನೆ ನಡೆದಿದೆ. ಕೋಳಿಯ ಖಾಸಗಿ ಭಾಗಕ್ಕೆ ನಾಲ್ವರು ಹುಡುಗರು ಪಟಾಕಿಯನ್ನು ತುರುಕಿ ಅದಕ್ಕೆ ಬೆಂಕಿ ಹಚ್ಚಿದ್ದಾರೆ. ಅಸಹಾಯಕ ಕೋಳಿ ನೋವಿನಿಂದ ನರಳಿ ಸತ್ತಿದೆ ಎಂದು ಬರೆದಿಕೊಂಡಿದೆ. ಇಷ್ಯಾಗಿಯೂ ದುಷ್ಕರ್ಮಿಗಳು ಯಾವುದೇ ಪಶ್ಚಾತ್ತಾಪವನ್ನು ತೋರಿಸದಿರುವುದು ದುಃಖಕರವಾಗಿದೆ ಎಂದು ತಿಳಿಸಲಾಗಿದೆ.
ಅಲ್ಲದೇ, ಅಸ್ಸಾಮ್ ಪೊಲೀಸರಿಗೆ ಟ್ಯಾಗ್ ಮಾಡುವಂತೆ ಸೂಚಿಸಲಾಗಿದೆ. ಹಲವರು ದುಷ್ಕರ್ಮಿಗಳ ಕ್ರೂರತನವನ್ನು ಖಂಡಿಸಿದ್ದಾರೆ. ಅಲ್ಲದೇ, ಅವರ ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಅಸ್ಸಾಮ್ ಪೊಲೀಸರಿಗೆ ಮನವಿ ಮಾಡಿದ್ದಾರೆ. ನಾಯಿ ಸೇರಿದಂತೆ ಅಸಹಾಯಕ ಪ್ರಾಣಿಗಳನ್ನು ನರಳಿ ಸಾಯಿಸುವ ಘಟನೆಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಈಗ ಕೋಳಿಯ ಘಟನೆಯ ಭಾರೀ ಪ್ರಮಾಣದಲ್ಲಿ ಗಮನ ಸೆಳೆದಿದೆ. ಅಲ್ಲದೇ, ಈ ಘಟನೆಗೆ ಕಾರಣರಾದವರನ್ನು ಶಿಕ್ಷೆಗೆ ಗುರಿಯಾಗಿಸುವಂತೆ ಆಗ್ರಹಿಸಲಾಗಿದೆ.