ಭಾರತ ವಿಶ್ವಕಪ್ ನಲ್ಲಿ ಗೆದ್ದರೆ ನಾನು ಬೆತ್ತಲೆಯಾಗುತ್ತೇನೆ ; ಓಪನ್ ಚಾಲೆಂಜ್ ಹಾಕಿದ ತೆಲುಗು ನಟಿ..!
ಬೆಂಗಳೂರು: ನ್ಯೂಜಿಲ್ಯಾಂಡ್ ವಿರುದ್ಧ ಸಾಗುತ್ತಿರುವ ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಸಚಿನ್ ತೆಂಡೂಲ್ಕರ್ ಅವರ ವಿಶ್ವಕಪ್ನ ಸಾರ್ವಕಾಲಿಕ ದಾಖಲೆಯೊಂದನ್ನು ಮುರಿದಿದ್ದಾರೆ. ವಿಶ್ವಕಪ್ ಆವೃತ್ತಿಯಲ್ಲಿ ಅತ್ಯಧಿಕ ರನ್ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಭಾರತ ತಂಡ ಸೆಮಿ ಫೈನಲ್ನಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಸೋಲಿಸಿ ಫೈನಲ್ಗೇರಿದೆ. ಈ ಬಾರಿ ಭಾರತ ವಿಶ್ವಕಪ್ ಗೆಲ್ಲುವುದು ಪಕ್ಕಾ ಎಂದು ಹಲವು ಕ್ರಿಕೆಟ್ ವಿಶ್ಲೇಷಕರು ಈಗಾಗಲೇ ಅಭಿಪ್ರಾಯ ತಿಳಿಸಿದ್ದಾರೆ. ಆದರೀಗ ಟಾಲಿವುಡ್‌ಖ್ಯಾತ ನಟಿಯೊಬ್ಬರು (Rekha Boj) ಭಾರತ್ ಕಪ್ ಗೆದ್ದರೆ ನಾನು ಬೆತ್ತಲೆಯಾಗುತ್ತೇನೆ ಎಂದು ಓಪನ್ ಚಾಲೆಂಜ್ ಮಾಡಿದ್ದಾರೆ.
ಸದಾ ವಿವಾದಾತ್ಮಕ ಹೇಳಿಕೆ ಮೂಲಕ ಖ್ಯಾತಿ ಗಳಿಸರುವ ತೆಲುಗು ನಟಿ ಈ ರೇಖಾ ಬೋಸ್ ಈ ಹೇಳಿಕೆ ನೀಡಿದ್ದಾರೆ. ಮಾಂಗಲ್ಯಂ, ಸ್ವಾತಿ ಚಿನುಕು ಸಂಧ್ಯಾ ವೇಳಾಳೆ, ರಂಗೀಲಾ, ಕಾಲಯ ತಸ್ಮೈ ನಮ: ರೇಖಾ ನಟಿಸಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು 70 ರನ್ ಗಳಿಂದ ಮಣಿಸಿದ ಮೆನ್ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಫೈನಲ್ ಪ್ರವೇಶಿಸಿದೆ.
ನಟಿ ಪೂನಂ ಪಾಂಡೆ ಮೊದಲ ಬಾರಿ ಹೀಗೊಂದು ಹೇಳಿಕೆ ನೀಡಿದ್ದರು. ಭಾರತ 2013ರ ವಿಶ್ವಕಪ್ ಆಡುವ ಸಮಯದಲ್ಲಿ, ‘ಭಾರತ ವಿಶ್ವಕಪ್ ಗೆದ್ದರೆ ಬೆತ್ತಲಾಗುವೆ’ ಎಂದು ಹೇಳಿಕೆ ನೀಡಿದ್ದರು. ಪೂನಂರ ಈ ಹೇಳಿಗೆ ತೀವ್ರ ವಿರೋಧ ಆಗ ವ್ಯಕ್ತವಾಗಿತ್ತು. ಈಗ ತೆಲುಗು ನಟಿ ರೇಖಾ ಬೋಜ್ ಅವರು, ಈ ಬಾರಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡ ಚಾಂಪಿಯನ್ ಆದರೆ ನಾನು ವಿಶಾಖಪಟ್ಟಣದ ಬೀಚ್ನಲ್ಲಿ ಬೆತ್ತಲಾಗುತ್ತೇನೆ ಎಂದು ಇನ್‌ಸ್ಟಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
https://www.instagram.com/rekhabojofficial/?utm_source=ig_embed&ig_rid=a35ebe7b-ffa8-4aea-9b55-f899189621c1
ರೇಖಾ ಬೋಜ್ ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯರಾಗಿದ್ದಾರೆ. ತನ್ನ ಸೌಂದರ್ಯದಿಂದ ನೆಟ್ಟಿಗರನ್ನು ಆಕರ್ಷಿಸುತ್ತಿರುವ ಅವರು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಹಾಟ್ ಫೋಟೊಗಳನ್ನು ಬಿಡುಗಡೆ ಮಾಡುತ್ತಾರೆ. ಬಿಕಿನಿ ಫೋಟೊಗಳ ಜತೆಗೆ ಬೋಲ್ಡ್ ಫೋಟೊಗಳನ್ನು ರಿಲೀಸ್ ಮಾಡುತ್ತಿರುತ್ತಾರೆ. ಇವರಿಗೆ ಆಕೆಗೆ ಅಪಾರ ಅಭಿಮಾನಿ ಬಳಗವೂ ಇದೆ.