ಸಹಾರಾ ಗ್ರೂಪ್ ಅಧ್ಯಕ್ಷ ಸುಬ್ರತಾ ರಾಯ್ ನಿಧನ.!
Twitter
Facebook
LinkedIn
WhatsApp
ಮುಂಬೈ: ಸಹಾರಾ ಗ್ರೂಪ್ ಸಂಸ್ಥಾಪಕ ಮತ್ತು ಅಧ್ಯಕ್ಷ ಸುಬ್ರತ ರಾಯ್ ಮಂಗಳವಾರ ನಿಧನರಾದರು.
ಅವರಿಗೆ 75 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮುಂಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ ಪತ್ನಿ, ಇಬ್ಬರು ಪುತ್ರರಿದ್ದಾರೆ.
1948ರಲ್ಲಿ ಅವರು ಬಿಹಾರದಲ್ಲಿ ಜನಿಸಿದರು. 1978ರಲ್ಲಿ ಕೇವಲ ₹ 2,000 ಬಂಡವಾಳದೊಂದಿಗೆ ಪ್ರಾರಂಭಿಸಲಾದ ಸಹಾರಾ ಗ್ರೂಪ್ ಕಂಪನಿಯು ಇದೀಗ ಮುಂಚೂಣಿಯಲ್ಲಿದೆ ಎಂದು ಕಂಪನಿ ತನ್ನ ವೆಬ್ಸೈಟ್ನಲ್ಲಿ ಹೇಳಿದೆ.
‘ಸುಬ್ರತಾ ರಾಯ್ ಅವರ ಪರಂಪರೆ ಹಾಗೂ ಉದ್ಯಮದಲ್ಲಿ ಹೊಂದಿದ್ದ ಅವರ ದೃಷ್ಟಿಕೋನವನ್ನು ಮುಂದುವರೆಸಿಕೊಂಡು ಹೋಗಲಾಗವುದು‘ ಎಂದು ಸಹಾರಾ ಗ್ರೂಪ್ ತಿಳಿಸಿದೆ
ಸುಬ್ರತಾ ರಾಯ್ ಅವರ ನಿಧನಕ್ಕೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಸಂತಾಪ ಸೂಚಿಸಿದ್ದಾರೆ.
ಹೂಡಿಕೆದಾರರಿಗೆ ಸಾವಿರಾರು ಕೋಟಿ ರೂಪಾಯಿ ಹಿಂದಿರುಗಿಸಲು ವಿಫಲವಾಗಿದ್ದ ಹಿನ್ನೆಲೆಯಲ್ಲಿ ಅವರು ಹಲವು ವರ್ಷ ಜೈಲಿನಲ್ಲಿದ್ದರು.