ವಾಯುಭಾರ ಕುಸಿತ ; ನವೆಂಬರ್ 14 ರಿಂದ ಮತ್ತೆ 5 ದಿನಗಳ ಕಾಲ ಮಳೆಯಾಗುವ ಸಂಭವ..!
ನವದೆಹಲಿ, ನವೆಂಬರ್ 12: ಬಂಗಾಳ ಕೊಲ್ಲಿಯ ಆಗ್ನೇಯ ಭಾಗದಲ್ಲಿ ಮುಂದಿನ 48 ಗಂಟೆಗಳಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗುವ ಮುನ್ಸೂಚನೆ ಇದೆ. ಇದರಿಂದ ದಕ್ಷಿಣ ಭಾರತದ ಕರಾವಳಿಯ ಒಂದೆರಡು ರಾಜ್ಯಗಳಲ್ಲಿ ಮಳೆಯ ವಾತಾವರಣ ಸೃಷ್ಟಿಯಾಗುವ ಸಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ತೀವ್ರಗೊಂಡಿದೆ. ಇದು ನವೆಂಬರ್ 14 ರ ಸುಮಾರಿಗೆ ಮತ್ತಷ್ಟು ತೀವ್ರಗೊಂಡು ಕಡಿಮೆ ಒತ್ತಡದ ಪ್ರದೇಶವಾಗಿ ರೂಪುಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಈ ವಾಯುಭಾರ ಕುಸಿತವು ನವೆಂಬರ್ 16ರ ಹೊತ್ತಿಗೆ ತಮ್ಮ ಮೂಲ ಸ್ಥಾನದಿಂದ ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಚಲಿಸಲಿದೆ. ಈ ವೇಳೆ ದಕ್ಷಿಣ ಬಂಗಾಳ ಕೊಲ್ಲಿಯ ವಾತಾವರಣದಲ್ಲಿ ವೈಪರಿತ್ಯಗಳು ಉಂಟಾಗಲಿದೆ ಎಂದು ಐಎಂಡಿ ತಿಳಿಸಿದೆ.
ಈ ಕುರಿತು ಓಡಿಶಾ ರಾಜಧಾನಿ ಬುವನೇಶ್ವರ ಹವಾಮಾನ ಕೇಂದ್ರದ ತಜ್ಞರ ಸಂಜೀವ್ ದ್ವಿವೇದಿ ಅವರು ಪ್ರತಿಕ್ರಿಯಿಸಿ, ಸೈಕ್ಲೋನಿಕ್ ಪರಿಚಲನೆಯು ಥಾಯ್ಲೆಂಡ್ ಕೊಲ್ಲಿಯ ಮೇಲೆ ಇದೆ. ಮಧ್ಯ-ಟ್ರೋಪೋಸ್ಪಿಯರ್ ಮಟ್ಟಗಳವರೆಗೆ ಎತ್ತರದೊಂದಿಗೆ ಈ ವಾಯುಭಾರತ ಕುಸಿತ ನೈಋತ್ಯ ದಿಕ್ಕಿನೆಡೆಗೆ ಸಂಚರಿಸುವ ಲಕ್ಷಣಗಳು ಇವೆ.
ಒಡಿಶಾಗೆ ಹವಾಮಾನ ವರದಿ
ನವೆಂಬರ್ 13 ರಂದು ಅಂಡಮಾನ್ ಸಮುದ್ರ ಹಾಗೂ ಅದರ ವ್ಯಾಪ್ತಿಯಲ್ಲಿ ತೀವ್ರ ಸುಳಿಗಾಳಿ ಕಂಡು ಬಂದರೆ, ನವೆಂಬರ್ 14 ರ ಸುಮಾರಿಗೆ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳಬಹುದು ಎಂದು ಅಂದಾಜಿಸಲಾಗಿದೆ ಎಂದರು.
ಕಳೆದ ಕೆಲವು ದಿನಗಳಿಂದ ಒಡಿಶಾದ ಜಿಲ್ಲೆಗಳಲ್ಲಿ ಒಣ ಹವೆಯ ವಾತಾವರಣ ಕಂಡು ಬಂದಿದೆ. ದಕ್ಷಿಣ ಒಳಭಾಗ ಒಡಿಶಾದ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಕನಿಷ್ಠ ತಾಪಮಾನ ಕುಸಿತ ಕಂಡಿದೆ. ಒಡಿಶಾ ಭಾಗದ ಜಿಲ್ಲೆಗಳಲ್ಲಿ ಮಹತ್ವದ ಬದಲಾವಣೆ ಮುನ್ಸೂಚನೆ ಸದ್ಯಕ್ಕೆ ಇಲ್ಲ. ಐಎಂಡಿ ಪ್ರಕಾರ, ಓಡಿಶಾದ ಪರಲೇಖೆಮುಂಡಿಯಲ್ಲಿ ಗರಿಷ್ಠ ಗರಿಷ್ಠ ತಾಪಮಾನ 34.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇನ್ನು ಅತೀ ಕಡಿಮೆ (ಕನಿಷ್ಠ) ತಾಪಮಾನ 14 ಡಿಗ್ರಿ ಸೆಲ್ಸಿಯಸ್ ಒಡಿಶಾದ ಬಯಲು ಪ್ರದೇಶದ ಫುಲ್ಬಾನಿಯಲ್ಲಿ ಕಂಡು ಬಂದಿದೆ.
ಈ ರಾಜ್ಯಗಳಿಗೆ ಮಳೆ?
ಸದ್ಯಕ್ಕೆ ದೇಶದ ಮಳೆ ವಾತಾವರಣದಲ್ಲಿ ಗಂಭೀರ ರೂಪದ ಬದಲಾವಣೆಗಳು ಕಂಡು ಬಂದಿಲ್ಲ. ಈಗಾಗಲೇ ಹಿಂಗಾರು ಆರಂಭವಾಗಿದ್ದು, ಆರಂಭದಲ್ಲಿ ದುರ್ಬಲವಾಗಿತ್ತು,ನಂತರ ಒಂದೆರಡು ಕಡೆಗಳಲ್ಲಿ ಅಬ್ಬರಿಸಿದ್ದು, ಇದೀಗ ಮತ್ತೆ ತಣ್ಣಗಾಗಿದೆ. ಒಂದು ವೇಳೆ ಈ ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತವು ನಿರೀಕ್ಷೆಯಂತೆ ತೀವ್ರಗೊಂಡಿದ್ದೇ ಆದಲ್ಲಿ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಕರ್ನಾಟಕ, ಆಂಧ್ರ ಪ್ರದೇಶ ರಾಜ್ಯಗಳು ಮತ್ತೆ ಭಾರಿ ಮಳೆ ಕಾಣಲಿವೆ.