ವಿದ್ಯುತ್ ಸ್ಪರ್ಶಗೊಂಡು ಲೈನ್‌ಮೆನ್ ಸಾವು
ಮಡಿಕೇರಿ: ವಿದ್ಯುತ್ ಲೈನ್ ದುರಸ್ತಿ ಪಡಿಸುತ್ತಿದ್ದ ಸಂದರ್ಭ ವಿದ್ಯುತ್ ಸ್ಪರ್ಶಗೊಂಡು ಲೈನ್‌ಮನ್ ಸಾವನ್ನಪ್ಪಿರುವ ಘಟನೆ ವಿರಾಜಪೇಟೆ ಆರ್ಜಿ ಗ್ರಾಮದಲ್ಲಿ ನಡೆದಿದೆ.
ಅನಿಲ್ ಮ್ಯಾನೇಜಸ್(45) ಅವರು ಮೃತರು. ಕಳೆದ 20 ವರ್ಷಗಳಿಂದ ಅನಿಲ್ ಅವರು ವಿರಾಜಪೇಟೆ ವಲಯದಲ್ಲಿ ಲೈನ್‌ಮನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಹೆಗ್ಗಳ ವಿಭಾಗಕ್ಕೆ ಒಳಪಡುವ ಆರ್ಜಿ ಗ್ರಾಮದಲ್ಲಿ 11 ಕೆ.ವಿ. ವಿದ್ಯುತ್ ತಂತಿ ದುರಸ್ತಿಪಡಿಸುತ್ತಿದ್ದ ಸಂದರ್ಭ ಮತ್ತೂಂದು ಭಾಗದಲ್ಲಿ ತುಂಡಾಗಿ ಬಿದ್ದಿದ್ದ ತಂತಿಯಿಂದ ಭೂಮಿಗೆ ವಿದ್ಯುತ್ ಪ್ರವಹಿಸಿ ಅನಿಲ್ ಮ್ಯಾನೇಜಸ್ ಸ್ಥಳದಲ್ಲೇ ಮೃತಪಟ್ಟರು.
ಘಟನ ಸ್ಥಳಕ್ಕೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸುರೇಶ್ ಪಿ.ಎಸ್., ಸಹಾಯಕ ಎಂಜಿನಿಯರ್ ಟೆಕ್ನಿಕಲ್ ವಿಭಾಗದ ಸೋಮೇಶ್, ಸಹಾಯಕ ಎಂಜಿನಿಯರ್ ಅಯ್ಯನ ಗೌಡ ಪಾಟೀಲ್ ಅವರು ಭೇಟಿ ನೀಡಿದರು. ದುರಂತದ ಬಗ್ಗೆ ಮಾಹಿತಿಯನ್ನು ಕಲೆ ಹಾಕಿದ ಅಧಿಕಾರಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಘಟನೆ ಕುರಿತು ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
CM ನಿವಾಸ ಬಳಿ ಧರಣಿ ಯತ್ನ: ರೈತ ಮುಖಂಡರ ಬಂಧನ
ಮೈಸೂರು: ಕಬ್ಬಿಗೆ ಹೆಚ್ಚುವರಿ ದರ ನಿಗದಿ ಸಹಿತ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘದಿಂದ ಗುರುವಾರ ಸಿಎಂ ಮನೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆಯಿತು.
ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಪೊಲೀಸರು ಶಾರದಾದೇವಿ ನಗರದ ಸಿದ್ದರಾಮಯ್ಯ ನಿವಾಸದ ರಸ್ತೆಯನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದರು. ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಸಿದ್ದರಾಮಯ್ಯ ನಿವಾಸದ ಬಳಿ ತೆರಳಲು ಮುಂದಾದ ನೂರಾರು ರೈತರನ್ನು ಪೊಲೀಸರು ತಡೆದರು. ಇದರಿಂದ ಕೆರಳಿದ ರೈತರು ರಸ್ತೆ ಮಧ್ಯೆ ಕುಳಿತು ಪ್ರತಿಭಟನೆ ನಡೆಸಲು ಮುಂದಾದರು. ಈ ವೇಳೆ ಪೊಲೀಸರು ಹಾಗೂ ರೈತರ ನಡುವೆ ವಾಗ್ವಾದ ನಡೆಯಿತು. ಜಿಲ್ಲಾಡಳಿತ, ಪೊಲೀಸ್ ಆಯುಕ್ತರಿಗೆ ಒಂದು ವಾರ ಮೊದಲೇ ಧರಣಿ ನಡೆಸುವ ಮನವಿ ಸಲ್ಲಿಸಿದ್ದೆವು. ಆದರೂ ಪ್ರತಿಭಟನೆಗೆ ಅವಕಾಶ ನೀಡಿಲ್ಲ. ಯಾವ ಕಾರಣಕ್ಕೆ ನೀಡಿಲ್ಲ ಎಂದು ಸ್ಪಷ್ಟವಾಗಿ ಲಿಖೀತವಾಗಿ ತಿಳಿಸಬೇಕು ಎಂದು ರೈತರು ಪಟ್ಟು ಹಿಡಿದರು. ಆದರೆ ಪ್ರತಿಭಟನೆಗೂ ಅವಕಾಶ ಕೊಡದ ಪೊಲೀಸರು ಪ್ರತಿಭಟನಕಾರರನ್ನು ಬಂಧಿಸಿ ಕರೆದೊಯ್ದರು. ಬಳಿಕ ಸಿಎಆರ್ ಮೈದಾನದಲ್ಲಿ ಬಿಡುಗಡೆ ಮಾಡಿದರು.