ಮುಂಬೈ ನಲ್ಲಿ ಕಾರುಗಳ ನಡುವೆ ಸರಣಿ ಅಪಘಾತ : 3 ಮಂದಿ ಸಾವು ;ಹಲವರಿಗೆ ಗಾಯ!
ಮುಂಬೈನ ಬಾಂದ್ರಾ ವರ್ಲಿ ಸೀ ಲಿಂಕ್ನಲ್ಲಿ ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 3 ಮಂದಿ ಸಾವನ್ನಪ್ಪಿದ್ದು, 7ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟೋಲ್ಬೂತ್ನಲ್ಲಿ ನಿಲ್ಲಿಸಿದ್ದ ಎರಡು ವಾಹನಗಳಿಗೆ ಹಿಂದಿನಿಂದ ವೇಗವಾಗಿ ಕಾರು ಬಂದು ಡಿಕ್ಕಿ ಹೊಡೆದಿದೆ. ಈ ಅಪಘಾತವು ಎಷ್ಟು ಭೀಕರವಾಗಿತ್ತೆಂದರೆ ಮನುಷ್ಯರ ಜತೆ ವಾಹನ ಕೂಡ ಛಿದ್ರವಾಗಿದೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಡಿಕ್ಕಿ ಹೊಡೆದ ಇನ್ನೋವಾ ವರ್ಲಿಗೆ ಕಡೆಗೆ ವೇಗವಾಗಿ ಬರುತ್ತಿತ್ತು, ಚಾಲಕ ಸಿ-ಲಿಂಕ್ ಮಧ್ಯದಲ್ಲಿ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಪೆಟ್ಟು ಬಿದ್ದಾಗ ಬಾಂದ್ರಾ ಕಡೆಗೆ ಓಡಿ ಹೋಗಲು ಪ್ರಯತ್ನಿಸಿದ್ದಾರೆ. ಆಗ ಮತ್ತೊಂದಷ್ಟು ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ, ಆರೋಪಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ, ಮೃತರಲ್ಲಿ ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷ ಸೇರಿದ್ದಾರೆ. ಈ ಅಪಘಾತದಲ್ಲಿ ಚಾಲಕ ಕೂಡ ಗಾಯಗೊಂಡಿದ್ದಾರೆ.
#WATCH | Maharashtra | Around 12 people injured after a speeding car collided with a total of 6 vehicles parked at the toll plaza in the Bandra direction. The speeding car was coming from Worli towards Bandra. 3 of the injured are in serious condition: Mumbai Police
— ANI (@ANI) November 9, 2023
(Warning:… pic.twitter.com/3ijVwEls71
ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಡಿಸ್ಚಾರ್ಜ್ ಆದ ನಂತರ ಚಾಲಕನನ್ನು ಬಂಧಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡವರಲ್ಲಿ 2 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ, ಮುಂಬೈ ಪೊಲೀಸರ ಪ್ರಕಾರ, ವರ್ಲಿಯಿಂದ ಬಾಂದ್ರಾ ಕಡೆಗೆ ವೇಗವಾಗಿ ಬಂದ ಕಾರು ಟೋಲ್ ಪ್ಲಾಜಾ ಬಳಿ ನಿಂತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಅದರಲ್ಲಿ ಪ್ರಯಾಣಿಸುತ್ತಿದ್ದ ಹಲವರಿಗೆ ಗಂಭೀರ ಗಾಯಗಳಾಗಿವೆ.
ಮಧ್ಯಪ್ರದೇಶ: ಮೊದಲು ಬೆರಳು ಕತ್ತರಿಸಿ ಬಳಿಕ ವ್ಯಕ್ತಿಯನ್ನೇ ಕೊಂದ ತಾಂತ್ರಿಕರು
ಹೆಚ್ಚು ಹಣ ಗಳಿಸಲು ಸಹಾಯ ಮಾಡುತ್ತೇನೆ ಎಂದು ನಂಬಿಸಿ ಇಬ್ಬರು ತಂತ್ರಿಗಳು ವ್ಯಕ್ತಿಯ ಪ್ರಾಣವನ್ನೇ ತೆಗೆದಿದ್ದಾರೆ. ಮಧ್ಯಪ್ರದೇಶದ ನರಸಿಂಗ್ಪುರದಲ್ಲಿ ಈ ಘಟನೆ ನಡೆದಿದೆ. ಹೆಚ್ಚು ಹಣಗಳಿಸಲು ಸಹಾಯ ಮಾಡುತ್ತೇವೆ ಎಂದು ನಂಬಿಸಿ ಕರೆಸಿಕೊಂಡು, ಮೊದಲು ಬೆರಳು ಕತ್ತರಿಸಲು ಮನವೊಲಿಸಿದ್ದಾರೆ, ಕೊನೆಗೆ ಕೊರಳನ್ನೇ ಕತ್ತರಿಸಿದ್ದಾರೆ.
ನವೆಂಬರ್ 4 ರಂದು 22 ವರ್ಷದ ವ್ಯಕ್ತಿಯ ದೇಹವು ಹೊಲದಲ್ಲಿ ಪತ್ತೆಯಾಗಿತ್ತು, ಕುತ್ತಿಗೆಯನ್ನು ಮೊನಚಾದ ಆಯುಧದಿಂದ ಕತ್ತರಿಸಲಾಗಿತ್ತು. ಆರೋಪಿ ಅಂಕಿತ್ ಕೌರವ್ ಎಂಬಾತನಿಗೆ ಬಲಗೈಯ ಮಧ್ಯದ ಬೆರಳನ್ನು ಕತ್ತರಿಸುವಂತೆ ಮನವರಿಕೆ ಮಾಡಲಾಗಿತ್ತು, ಆತನು ಶ್ರೀಮಂತನಾಗಲು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು.
ತಂತ್ರಿಗಳನ್ನು 40 ವರ್ಷದ ಸುರೇಂದ್ರ ಕಚಿ ಮತ್ತು 45 ವರ್ಷದ ರಾಮು ಕಚ್ಚಿ ಎಂದು ಗುರುತಿಸಲಾಗಿದೆ. ಎಸ್ಪಿ ಅಮಿತ್ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಇಬ್ಬರನ್ನೂ ಬಂಧಿಸಲಾಗಿದೆ.
ಘಟನೆ ನಡೆದ ರಾತ್ರಿ ಯುವಕ ಆರೋಪಿಯೊಂದಿಗೆ ಬೈಕ್‌ನಲ್ಲಿ ಹೋಗುತ್ತಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ನಾಲ್ಕು ತಿಂಗಳ ಹಿಂದೆಯೂ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾಗ ಮಾಂತ್ರಿಕರನ್ನು ಸಂಪರ್ಕಿಸಿದ್ದರು.
ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ್ದರು ಆದರೆ ತಾಂತ್ರಿಕರು ಸಹಾಯ ಮಾಡಿದ ನಂತರವೇ ಆತ ಗುಣಮುಖನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಅನುಭವದಿಂದಾಗಿ ಯುವಕ ಆ ತಂತ್ರಿಗಳನ್ನು ನಂಬಲು ಶುರು ಮಾಡಿದ್ದ, ಸುಮಾರು 15 ದಿನಗಳ ಹಿಂದೆ, ಸಂತ್ರಸ್ತೆಯ ಸೋದರ ಮಾವ ಅನಾರೋಗ್ಯಕ್ಕೆ ಒಳಗಾದಾಗ, ಚಿಕಿತ್ಸೆಗೆ ಖರ್ಚು ಮಾಡಿದ ಹಣವು ಅವರ ಕುಟುಂಬದಲ್ಲಿ ಆರ್ಥಿಕ ಸಮಸ್ಯೆಗೆ ಕಾರಣವಾಯಿತು. ಇದರ ಬೆನ್ನಲ್ಲೇ ಯುವಕ ಮತ್ತೆ ತಂತ್ರಿಗಳನ್ನು ಸಂಪರ್ಕಿಸಿ ಹೆಚ್ಚಿನ ಹಣ ಗಳಿಸುವ ಆಸೆ ವ್ಯಕ್ತಪಡಿಸಿದ್ದಾನೆ.
ಅದಕ್ಕೆ ಈ ತಾಂತ್ರಿಕರು ಕೂಡ ಒಪ್ಪಿದ್ದರು, ಬೆರಳನ್ನು ಕತ್ತರಿಸಿಕೊಳ್ಳುವಂತೆ ಮನವೊಲಿಸಿದ್ದರು, ನಂತರ ತಮ್ಮೊಂದಿಗೆ ಗ್ರಾಮವೊಂದಕ್ಕೆ ಕರೆದೊಯ್ದರು, ಅಲ್ಲಿ ನರಬಲಿ ಕೊಡಲು ಎಲ್ಲಾ ಯೋಜನೆ ರೂಪಿಸಿದ್ದರು. ಬಲಗೈನ ಮಧ್ಯದ ಬೆಳನ್ನು ಕತ್ತರಿಸುವಂತೆ ಹೇಳಿದ್ದರು, ಬಳಿಕ ಅಂಕಿತ್ಗೆ ನಿದ್ರೆ ಮಾತ್ರೆ ನೀಡಿ, ಹತ್ಯೆ ಮಾಡಿದ್ದಾರೆ, ಈಗ ತಂತ್ರಿಗಳನ್ನು ಜೈಲಿಗೆ ಕಳುಹಿಸಲಾಗಿದೆ.